ಮಮತಾ ಬ್ಯಾನರ್ಜಿ ಪರ ವಾದ : ನಿಮ್ಮಿಂದಲೇ ಕಾಂಗ್ರೆಸ್ ನೆಲಕಚ್ಚಿದ್ದು ಎಂದು ಸ್ವಪಕ್ಷದವರಿಂದಲೇ ಚಿದಂಬರಂಗೆ ಮುಖಭಂಗ

ಕೋಲ್ಕತ್ತಾ: ಕಾಂಗ್ರೆಸ್ ನಾಯಕ ಇಂದು ತಮ್ಮ ಪಕ್ಷದವರಿಂದಲೇ ಮುಜುಗರಕ್ಕೀಡಾಗಿದ್ದಾರೆ. ಮೊದಲು ವಾಪಾಸ್ ಹೋಗಿ ಎಂದು ಕಪ್ಪು ಪಟ್ಟಿ ಧರಿಸಿ, ಅವೆ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ, ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಮೆಟ್ರೋ ಡೈರಿ ಷೇರುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವುದರ ಬಗ್ಗೆ. ಆದರೆ ಇದರ ವಿಚಾರಣೆಗೆ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪರ ವಾದ ಮಾಡಲು ವಕೀಲರ ಕೋಟ್ ಧರಿಸಿ, ಕೋರ್ಟ್ ಗೆ ಬಂದಿದ್ದರು. ವಾದ ವಿವಾದ ಮುಗಿದ ಬಳಿಕ ಕೋರ್ಟ್ ನಿಂದ ಹೊರ ಬಂದ ಮೇಲೆ ಚಿದಂಬರಂ ವಿರುದ್ಧ ವಕೀಲರು ಗರಂ ಆಗಿದ್ದಾರೆ. ನೀವೇನು ಮಮತಾ ಬ್ಯಾನರ್ಜಿಯವರ ಏಜೆಂಟ್ ಹಾ..? ಪಶ್ಚಿಮ ಬಂಗಾಳದಲ್ಲಿ ನಿಮ್ಮ ಕಳಪೆ ಪ್ರದರ್ಶನದಿಂದಲೇ ತೃಣಮೂಲ ಕಾಂಗ್ರೆಸ್ ನೆಲಕಚ್ಚಿರುವುದು. ಮೊದಲು ತೊಲಗಿ ಎಂದು ಪ್ರತಿಭಟಿಸಿದ್ದಾರೆ.

ನೀವೂ ಟಿಎಂಸಿಯನ್ನು ಉಳಿಸುತ್ತಿದ್ದೀರಿ. ನಿಮ್ಮಂತ ನಾಯಕರಿಂದ ನಾವೂ ಪಶ್ಚಿಮ ಬಂಗಾಳದಲ್ಲಿ ಬಳಲುತ್ತಿದ್ದೀವಿ, ಜೊತೆಗೆ ಪಕ್ಷವೂ ನರಳುತ್ತಿದೆ ಎಂದು ಪ್ರತಿಭಟನಾಕಾರರು ಹರಿಹಾಯ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *