Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತಾಲಿಬಾನ್ ನಂತ ಪ್ರಕರಣ ಕರ್ನಾಟಕದಲ್ಲೂ ವಿಸ್ತರಿಸುವುದಕ್ಕೆ ಕಾಂಗ್ರೆಸ್ ಕಾರಣ : ಬಿಜೆಪಿ ಕಿಡಿ

Facebook
Twitter
Telegram
WhatsApp

ಬೆಂಗಳೂರು: “ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾಃ” ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂದು ಹೇಳಿದೆ ನಮ್ಮ ಸನಾತನ ಪರಂಪರೆ ಎಂದು ಕಾಂಗ್ರೆಸ್ ಅನ್ನು ಬಿಜೆಪಿ ಟೀಕೆ ಮಾಡಿದೆ.

ಮಹಿಳಾ ವಿರೋಧಿ @INCKarnataka ಸರ್ಕಾರವು ಮಹಿಳೆಯರನ್ನು ಪೂಜಿಸುವುದಿರಲಿ, ರಾಜ್ಯದ ಮಹಿಳೆಯರಿಗೆ ಸೂಕ್ತ ರಕ್ಷಣೆಯನ್ನು ಸಹ ನೀಡಲು ಸಂಪೂರ್ಣ ವಿಫಲ. ಕೇವಲ ತಾಲಿಬಾನ್‌ನಂತಹ ಪ್ರದೇಶದಲ್ಲಿ ನಡೆಯುತ್ತಿದ್ದ ಘಟನೆಗಳನ್ನು ಕರ್ನಾಟಕಕ್ಕೆ ವಿಸ್ತರಿದ್ದೇ ಕಾಂಗ್ರೆಸ್‌ನ ಆರೂವರೆ ತಿಂಗಳ ಆಡಳಿತದ ಸಾಧನೆ. ಬೆಳಗಾವಿಯ ವಂಟಮೂರಿಯಲ್ಲಿ ಪರಿಶಿಷ್ಟ ಪಂಗಡದ ಮಹಿಳೆಯ ಮೇಲೆ ನಡೆದ ಅಮಾನುಷ ಘಟನೆ ಅತ್ಯಂತ ಹೇಯ ಹಾಗೂ ನಾಗರೀಕ ಸಮಾಜವೇ ತಲೆ ತಗ್ಗಿಸುವಂತಹದ್ದು. ಆದರೆ ಈ ಘಟನೆ ನಡೆದ ಮೇಲೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ಪ್ರಕರಣದಲ್ಲಿ ನಡೆದುಕೊಂಡ ರೀತಿ ಮಾತ್ರ ಕಾಂಗ್ರೆಸ್‌ನ ಮಹಿಳಾ ವಿರೋಧಿ ನೀತಿಯ ಅಸಲಿ ಮುಖವಾಡವನ್ನು ಬಿಚ್ಟಿಟ್ಟಿದೆ.

ವಂಟಮೂರಿ ಘಟನೆ ನಡೆದ ಸಂದರ್ಭದಲ್ಲಿ ಸಿಎಂ @siddaramaiah ಅವರಾದಿಯಾಗಿ, ಸಚಿವರು ಹಾಗೂ ಶಾಸಕರು ಬೆಳಗಾವಿಯಲ್ಲಿಯೇ ಬೀಡು ಬಿಟ್ಟಿದ್ದರು. ಆದರೆ ಸೌಜನ್ಯಕ್ಕೂ ಕೂಗಳತೆ ದೂರದಲ್ಲಿ ಸಂತ್ರಸ್ತೆ ದಾಖಲಾಗಿದ್ದ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಯ ಆರೋಗ್ಯ ವಿಚಾರಿಸಲಿಲ್ಲ, ಸರ್ಕಾರ ನಿಮ್ಮ ಜೊತೆ ಇದೆ ಎಂದು ಧೈರ್ಯ ತುಂಬಲಿಲ್ಲ. ಇದು ಕಾಂಗ್ರೆಸ್‌ನ ಅಸಲಿ ಮಹಿಳಾ ಸಬಲೀಕರಣ.

ಇನ್ನು ಬೆಳಗಾವಿಯ ವಂಟಮೂರಿ ಗ್ರಾಮ ಬರುವುದು ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ. ಅಲ್ಲಿನ ಸ್ಥಳೀಯ ಶಾಸಕಿ @Laxmi_Hebbalkar ಅವರು ಈ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ. ಸ್ವಕ್ಷೇತ್ರದಲ್ಲಿ ಕಂಡು ಕೇಳರಿಯದಂತಹ ಭೀಭತ್ಸ ಘಟನೆ ನಡೆದರೂ, ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಕುರುಡ-ಕಿವುಡ-ಮೂಗನಂತೆ ವರ್ತಿಸುತ್ತಿರುವುದು ಸಂತ್ರಸ್ತೆಗೆ ಹಾಗೂ ರಾಜ್ಯದ ಮಹಿಳಾ ಸಮುದಾಯಕ್ಕೆ ಮಾಡುತ್ತಿರುವ ಮಹಾ ಅನ್ಯಾಯ.

ಇನ್ನು ಬೆಳಗಾವಿ ಉಸ್ತುವಾರಿ ಸಚಿವರಾದ @JarkiholiSatish ಅವರು ಸದನದಲ್ಲಿಯೂ ನಾಪತ್ತೆ, ಸಂತ್ರಸ್ತೆಯ ಆರೋಗ್ಯ ವಿಚಾರಿಸುವಲ್ಲಿಯೂ ನಾಪತ್ತೆ. ಇದು ಕಾಂಗ್ರೆಸ್‌ ಸರ್ಕಾರದ ಆಡಳಿತದ ಸ್ಯಾಂಪಲ್.‌ ಪರಿಶಿಷ್ಟ ಪಂಗಡದ ಮಹಿಳೆಯ ಮೇಲೆ ಅಮಾನುಷ ಘಟನೆ ನಡೆದಿದ್ದರೂ ಸಹ ಕಾಂಗ್ರೆಸ್‌ ಸಂಪೂರ್ಣ ಮೌನಕ್ಕೆ ಶರಣಾಗಿರುವುದನ್ನು ನೋಡಿದರೆ, ಕಾಂಗ್ರೆಸ್‌ ಆಡಳಿತವನ್ನು ದುರುಪಯೋಗಪಡಿಸಿಕೊಂಡು ಅಪರಾಧಿಗಳನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿದೆಯಾ ಎಂಬ ಅನುಮಾನ ಮೂಡುವುದಂತು ನಿಶ್ಚಿತ.

ಕರ್ನಾಟಕದಲ್ಲಿ ನಡೆದ ಈ ಹೀನ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿ ಬಿಜೆಪಿಯ ಕೇಂದ್ರ ಮಹಿಳಾ ಸಮಿತಿಯ ಸದಸ್ಯರು ಸಂತ್ರಸ್ತೆಯ ಆರೋಗ್ಯ ವಿಚಾರಿಸಲು ಬೆಳಗಾವಿಗೆ ಬಂದಿದ್ದರೆ, ಕಾಂಗ್ರೆಸ್‌ನವರು ಮಾತ್ರ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ. ಇದು ಕಾಂಗ್ರೆಸ್‌ ಮಹಿಳೆಯರಿಗೆ ನೀಡುವ ಅಸಲಿ ಗೌರವ.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟಕದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಪುಂಡ ಪೋಕರಿಗಳು, ಜಿಹಾದಿಗಳು, ಮತಾಂಧರು ಕಾನೂನು ಹಾಗೂ ಪೊಲೀಸರ ಭಯವಿಲ್ಲದೇ ಮಕ್ಕಳ, ಮಹಿಳೆಯರ, ಜನಸಾಮಾನ್ಯರ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಹಿರಿಯ ಮಹಿಳಾ ಭೂ ವಿಜ್ಞಾನಿಯನ್ನು ಬೆಂಗಳೂರಿನಲ್ಲಿ ಹಾಡುಹಗಲೇ ಕೊಲೆಗೈಯಲಾಗಿತ್ತು. ಪ್ರತಿ ನಿತ್ಯ ಸರಗಳ್ಳತನವಂತೂ ಮಾಮೂಲಿಯಾಗಿದೆ. ಮಹಿಳೆಯರಿಗೆ ಸುರಕ್ಷಿತ ತಾಣವಾಗಿದ್ದ ಕರ್ನಾಟಕವನ್ನು, ಕಾಂಗ್ರೆಸ್‌ ತನ್ನ ದುರಾಡಳಿತದಿಂದ ಅಸುರಕ್ಷಿತ ತಾಣವನ್ನಾಗಿಸುತ್ತಿದೆ.evathu

ಆದರೆ, ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾತ್ರ ಭಯೋತ್ಪಾದಕರಿಗೆ ಅಮಾಯಕರು, ಬ್ರದರ್ಸ್‌ಗಳು ಎಂಬ ಪಟ್ಟ ಕಟ್ಟುವಲ್ಲಿ ನಿರತವಾಗಿದೆ. ಗೃಹ ಸಚಿವ @DrParameshwara ಅವರಂತೂ ಆಟಕ್ಕುಂಟು ಲೆಕ್ಕಕ್ಕಿಲ್ಲ. ತಾವೊಬ್ಬ ಗೃಹ ಸಚಿವ ಎಂಬುದನ್ನೇ ಮಿನಿಸ್ಟರ್‌ ಸಾಹೇಬ್ರು ಮರೆತಂತಿದೆ. ಘಟನೆಯ ನೈತಿಕ ಹೊಣೆಹೊತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ರಾಜೀನಾಮೆ ನೀಡಬೇಕು. ಸಂತ್ರಸ್ತ ಮಹಿಳೆಗೆ ನ್ಯಾಯ ಸಿಗುವವರೆಗೂ ಬಿಜೆಪಿ ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಟ್ವೀಟ್ ಮಾಡಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊರಗೆ ಬಾರದಂತೆ ಮೈಸೂರಿಗರಿಗೆ ಹವಮಾನ ಇಲಾಖೆಯಿಂದ ಎಚ್ಚರಿಕೆ : ಆರೆಂಜ್ ಅಲರ್ಟ್ ಘೋಷಣೆ

ಮೈಸೂರು: ಬೆಳಗಿನ ಜಾವವೇ ಬಿಸಿಲಿನ ತಾಪ ಜೋರಾಗಿರುತ್ತೆ. ಮೇ ಸಮಯಕ್ಕೆ ಅದಾಗಲೇ ಭೂಮಿ ತಂಪಾಗಬೇಕಿತ್ತು. ಆದರೆ ಧಗೆ ಎಷ್ಟಿದೆ ಅಂದ್ರೆ ಹೊರಗೆ ಬರೋದಕ್ಕೆ ಸಾಧ್ಯವಾಗುತ್ತಿಲ್ಲ. ದಾಹವೂ ಹೆಚ್ಚಾಗಿದೆ. ಪಾನೀಯಗಳ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಕೆಲವು

ಮೇ 8 ರಂದು ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ..?

ಬೆಂಗಳೂರು: ಈಗಾಗಲೇ ರಾಜ್ಯದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಬಂದಿದೆ. ಭವಿಷ್ಯದ ಮುಖ್ಯ ಘಟ್ಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಒಂದು. ಈಗಾಗಲೇ ಪರೀಕ್ಷೆ ಬರೆದ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಕರ್ನಾಟಕ ಪ್ರೌಢ

ಇಂದು ಸಂಜೆ ಶಿವಮೊಗ್ಗಕ್ಕೆ ರಾಹುಲ್ ಗಾಂಧಿ : ಪ್ರಚಾರದ ವೇಳೆ ಪೆನ್ ಡ್ರೈವ್ ವಿಚಾರ ಪ್ರಸ್ತಾಪ ಮಾಡ್ತಾರಾ..?

ಶಿವಮೊಗ್ಗ: ಎರಡನೇ ಹಂತದ ಚುನಾವಣೆಗೆ ಈಗಾಗಲೇ ಸಿದ್ಧತೆ ನಡೆದಿದ್ದು, ಭರ್ಜರಿ ಪ್ರಚಾರ ಕಾರ್ಯವೂ ನಡೆಯುತ್ತಿದೆ‌. ಚುನಾವಣೆಯ ಹೊತ್ತಲ್ಲೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ಮುಜುಗರವಾಗುವಂತ ಘಟನೆ ನಡೆದಿದೆ. ರಾಜ್ಯದೆಲ್ಲೆಡೆ ಪೆನ್ ಡ್ರೈವ್ ಸುದ್ದಿ ತಾಂಡವವಾಡುತ್ತಿದ್ದರೆ,

error: Content is protected !!