ಬೆಳಗಾವಿ: ಜಿಲ್ಲೆಯಲ್ಲಿ ಪ್ರತಿಮೆಯ ವಾರ್ ಶುರುವಾಗಿದೆ. ರಾಜಕೀಯದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಮಾಜಿ ಅಚಿವ ರಮೇಶ್ ಜಾರಕಿಹೊಳಿ ಬದ್ಧ ವೈರಿಗಳಾಗಿದ್ದಾರೆ. ಬೆಳಗಾವಿಯಲ್ಲಿ ಪ್ರತಿಯೊಂದು ವಿಚಾರಕ್ಕೂ ಇಬ್ಬರ ನಡುವೆ ಸ್ಪರ್ಧೆ ಏರ್ಪಡುತ್ತಲೇ ಇರುತ್ತದೆ. ಇದೀಗ ಶಿವಾಜಿ ಪ್ರತಿಮೆಯ ವಿಚಾರಕ್ಕೆ ಕ್ರೆಡಿಟ್ ವಾರ್ ಆರಂಭವಾಗಿದ್ದು, ಎರಡು ಪಕ್ಷದಿಂದಾನು ಕಾಂಪಿಟೇಷನ್ ಮೇಲೆ ಉದ್ಘಾಟನೆ ಶುರುವಾಗಿದೆ.
ರಾಜಹಂಸಗಢದಲ್ಲಿ ನಿರ್ಮಾಣವಾಗಿರುವ ಶಿವಾಜಿ ಪ್ರತಿಮೆಯನ್ನು ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟನೆ ಮಾಡುವುದಾಗಿ ಪ್ಲ್ಯಾನ್ ಮಾಡಿದ್ದರು. ಮಾರ್ಚ್ 5 ಅಂದ್ರೆ ಇಂದು ಉದ್ಘಾಟನೆಗೆ ಪ್ಲ್ಯಾನ್ ಮಾಡಿದ್ದಾಗಲೇ ಮೊನ್ನೆಯೇ ರಮೇಶ್ ಜಾರಕಿಹೊಳಿ ಸಿಎಂ ಬೊಮ್ಮಾಯಿ ಅವರನ್ನು ಕರೆಸಿ ಉದ್ಘಾಟನೆ ಮಾಡಿದ್ದಾರೆ. ಇದೀಗ ಇಂದು ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಉದ್ಘಾಟನೆಗೆ ಸಿದ್ಧತೆ ನಡೆಸಿದ್ದಾರೆ.
ಈಗಾಗಲೇ ರಾಜಹಂಸಗಢ ಹಬ್ಬದಂತೆ ತಯಾರಾಗಿದೆ. ಹಸಿರು ತೋರಣ, ಹೂಗಳಿಂದ ಅಲಂಕಾರಗೊಂಡಿದೆ. ಎಲ್ಲಿ ನೋಡಿದರು ವಾದ್ಯದ ಶಬ್ಧ ಕೇಳಿಸುತ್ತಿದೆ. ಬೃಹತ್ ಮೆರವಣಿಗೆ ಮೂಲಕ ಕಾರ್ಯಕ್ರಮ ನಡೆಯುತ್ತಿದೆ. ಶಿವಾಜಿ ವಂಶಸ್ಥರಿಗೂ ಆಹ್ವಾನ ನೀಡಲಾಗಿದೆ. ಧ್ವಜ ಹಿಡಿದು ಜೈ ಶಿವಾಜಿ ಜೈ ಭವಾನಿ ಎನ್ನುತ್ತಾ ಸಾಗುತ್ತಿರುವ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆಗೆ ಬೆಂಬಲಿಗರು ಸಾಗುತ್ತಿದ್ದಾರೆ.