ಮಂಡ್ಯ : ಜನವರಿ 9 ರಂದು ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸಲು ಸಜ್ಜಾಗಿದ್ದಾರೆ. ಮೇಕೆದಾಟು ಯೋಜನೆಯನ್ನ ಜಾರಿಗೆ ತರಬೇಕೆಂದು ಬಿಜೆಪಿ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರ ಪಾದಯಾತ್ರೆಯನ್ನ ಬಿಜೆಪಿಗರು ವ್ಯಂಗ್ಯ ಮಾಡುತ್ತಲೆ ಇದ್ದಾರೆ. ಇದೀಗ ಈ ಬಗ್ಗೆ ಮಾತನಾಡಿರುವ ಸಚಿವ ನಾರಾಯಣ ಗೌಡ, ಪ್ರಚಾರಕ್ಕಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡ್ತಿದ್ದಾರೆ ಎಂದಿದ್ದಾರೆ.
ಮಂಡ್ಯದಲ್ಲಿ ಸಚಿವ ಕೆಸಿ ನಾರಾಯಣ್ ಗೌಡ ಮಾತನಾಡಿದ್ದು, ಅವರು ಬೆಳೆಯುವುದಕ್ಕೆ ಈ ರೀತಿಯ ತಿರ್ಮಾನ ಮಾಡಿದ್ದಾರೆ. ನಮ್ಮ ಸರ್ಕಾರ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ.
ನಮ್ಮ ಮುಖ್ಯಮಂತ್ರಿ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ ಪ್ರಾಮಿಸ್ ಮಾಡಿದ್ದಾರೆ. ಪಾದಯಾತ್ರೆಯನ್ನ ಪ್ರಚಾರಕ್ಕಾಗಿ ಮಾಡ್ತಿದ್ದಾರೆ. ಈ ಯೋಜನೆಯನ್ನ ಯಾರೋ ಮಾಡ್ತಿದ್ದಾರೆ. ಇನ್ನ್ಯಾರೋ ಹೆಸರು ತೆಗೆದುಕೊಳ್ತಿರೋದು ಸರಿ ಇಲ್ಲ ಎಂದಿದ್ದಾರೆ.