ಬೆಂಗಳೂರು: ಬಿಜೆಪಿಯಲ್ಲಿ ಈಗ ಬಂಡಾಯದ ಬಿಸಿ ಜೋರಾಗಿದೆ. ಲಕ್ಷ್ಮಣ ಸವದಿಗೆ ಟಕೆಟ್ ಮಿಸ್ಸಾದ ಬೆನ್ನಲ್ಲೇ ಹಿಂದೆ ಮುಂದೆ ನೋಡದೆ ಕಾಂಗ್ರೆಸ್ ಕ್ಯಾಚ್ ಹಾಕಿಕೊಂಡಿದೆ. ಪಕ್ಷ ಯಾವುದಾದರೇನು ಟಿಕೆಟ್ ಮುಖ್ಯ, ಅಧಿಕಾರ ಮುಖ್ಯ ಎನ್ನುವಾಗ ಸವದಿ ಅವರು ಕೂಡ ಬಹಳ ಬೇಗನೇ ಬಂದು ಕಾಂಗ್ರೆಸ್ ನಲ್ಲಿ ಮೀಟಿಂಗ್ ಮಾಡಿದ್ದಾರೆ. ಕಾಂಗ್ರೆಸ್ ಸೇರ್ಪಡೆಗೆ ಡಿಮ್ಯಾಂಡ್ ಕೂಡ ಇಟ್ಟಿದ್ದಾರೆ.
ಈ ಬಾರಿ ಮಗನನ್ನು ಚುನಾವಣಾ ಅಖಾಡಕ್ಕೆ ಇಳಿಸುವ ಪ್ಲ್ಹಾನ್ ಮಾಡಿದ್ದರು ಸವದಿ. ಆದರೆ ಬಿಜೆಪಿ ನಾಯಕರು ಮಗನಿಗೆ ಇರಲಿ ತಂದೆಗೂ ಟಿಕೆಟ್ ಘೋಷಣೆ ಮಾಡಲಿಲ್ಲ. ಹೀಗಾಗಿ ಕಾಂಗ್ರೆಸ್ ನಲ್ಲಿ ಮಗ ಮತ್ತು ತನಗೆ ಟಿಕೆಟ್ ಕೇಳಿದ್ದಾರೆ.
ಇಂದು ಸಿದ್ದರಾಮಯ್ಯ, ರಣದೀಪ್ ಸುರ್ಜೇವಾಲ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಭೆ ನಡೆದಿದೆ. ಈ ವೇಳೆ ಲಕ್ಷ್ಮಣ ಸವದಿ ಅವರು, ಕಾಗವಾಡ ಹಾಗೂ ಅಥಣಿ ಎರಡು ಕ್ಷೇತ್ರದ ಟಿಕೆಟ್ ನಮಗೆ ಕೊಡಿ. ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುವ ಜವಬ್ದಾರಿ ನನ್ನದು. ಎರಡು ಕ್ಷೇತ್ರದಲ್ಲಿ ಯಾರು ಎಲ್ಲಿ ನಿಲ್ಲಬೇಕು ಎಂಬುದನ್ನು ತೀರ್ಮಾನಿಸಿ ಹೇಳುತ್ತೇವೆ. ಹೈಕಮಾಂಡ್ ಗೆ ಇದನ್ನು ಮನವರಿಗೆ ಮಾಡಿ ಎಂದಿದ್ದಾರೆ.
ಇದಕ್ಕೆ ಉತ್ತರಿಸಿರುವ ಕಾಂಗ್ರೆಸ್ ನಾಯಕರು, ಸಾಧ್ಯವಾದಷ್ಟು ಇಬ್ಬರಿಗೂ ಟಿಕೆಟ್ ನೀಡುವ ಪ್ರಯತ್ನ ಮಾಡುತ್ತೇವೆ. ಹೈಕಮಾಂಡ್ ಬಳಿ ನಿಮ್ಮ ಡಿಮ್ಯಾಂಡ್ ಇಡಲಿದ್ದೇವೆ. ಒಂದು ವೇಳೆ ಒಂದೇ ಟಿಕೆಟ್ ನೀಡಿದರೆ ಅಥಣಿಯಲ್ಲಿ ನೀವೂ ಸ್ಪರ್ಧಿಸಿ, ಕಾಗವಾಡಕ್ಕೆ ಬೆಂಬಲ ನೀಡಿ ಎಂದಿದ್ದಾರೆ. ಈ ಷರತ್ತಿಗೆ ಸವದಿ ಕೂಡ ಒಪ್ಪಿದ್ದಾರೆ.