ಬೆಂಗಳೂರು: ಸಿದ್ದರಾಮಯ್ಯ ಅವರಿಗೆ ಟಿಪ್ಪು ವೇಷ ಹಾಕಿ, ಸಿದ್ದರಾಮಯ್ಯ ನಿಜ ಕನಸುಗಳು ಎಂಬ ಪುಸ್ತಕ ಬಿಡುಗಡೆಗೆ ಪ್ಲ್ಯಾನ್ ನಡೆಯುತ್ತಿರುವಾಗಲೇ, ಬಿಜೆಪಿಯವರ ಪುಸ್ತಕವನ್ನು ಕಾಂಗ್ರೆಸ್ ಹೊರ ತರುತ್ತಿದೆ. ಬಿಜೆಪಿ ಕಳ್ಳಮಾರ್ಗ ಎಂಬ ಪುಸ್ತಕವನ್ನು ಹೊರ ತರುತ್ತಿದೆ.
ಕಾಂಗ್ರೆಸ್ ನಿಂದ ಪುಸ್ತಕ ಲೋಕಾರ್ಪಣೆಯ ಪೋಸ್ಟರ್ ರಿಲೀಸ್ ಆಗಿದೆ. ಪುಸ್ತಕದ ಮುಖಪುಟದಲ್ಲಿ, ಹಿಂದುತ್ವದ ಹೆಸರಿನಲ್ಲಿ ದಲಿತ-ಒಬಿಸಿಗಳ ತುಳಿತ. ಗುಜರಾತ್ ನರಮೇಧ, ಬಿಜೆಪಿ ಕಳ್ಳಮಾರ್ಗ, ದಲಿತ ಒಬಿಸಿಗಳ ಯೂಸ್ ಅಂಡ್ ಥ್ರೋ ಮಂತ್ರ ಇದ್ದು, ಸಂಪುಟ 1 ಕೃತಿ ಪುಸ್ತಕ ಲೋಕಾರ್ಪಣೆ ಎಂದು ಬರೆಯಲಾಗಿದೆ. ಜೊತೆಗೆ ಎರಡು ಪುಸ್ತಕಗಳಲ್ಲೂ ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಓದಿ ಎಂದು ಬರೆಯಲಾಗಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಎರಡು ಪಕ್ಷದಿಂದಾನು ಪುಸ್ತಕಗಳ ಕುಸ್ತಿ ಶುರುವಾಗಿದೆ. ಕಾಂಗ್ರೆಸ್ ಮೇಲೆ ಬಿಜೆಪಿಯವರು, ಬಿಜೆಪಿಯವರ ಮೇಲೆ ಕಾಂಗ್ರೆಸ್ ನವರು ಪುಸ್ತಕ ಲೋಕಾರ್ಪಣೆ ಮೂಲಕ ಟಾಂಗ್ ನೀಡುತ್ತಿದ್ದಾರೆ.