ಚಿಕ್ಕಮಗಳೂರು: ಇತ್ತಿಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟ ಮಹಿಳೆಯ ಶವವಿಟ್ಟು ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಶಾಸಕ ಎಂ ಪಿ ಕುಮಾರಸ್ವಾಮಿ ಅವರ ಮೇಲೆ ಜನ ಆಕ್ರೋಶಗೊಂಡಿದ್ದರು. ಪ್ರತಿಭಟನೆಯನ್ನು ನಡೆಸುತ್ತಿದ್ದವರು ಶಾಸಕರು ಬಂದಾಕ್ಷಣ ಜೋರು ಗಲಾಟೆ ಮಾಡಿದ್ದಾರೆ. ಇದನ್ನು ಕಂಡ ಪೊಲೀಸರು, ತಕ್ಷಣ ಅಲ್ಲಿಗೆ ಬಂದು ಶಾಸಕರನ್ನು ಕರೆದುಕೊಂಡು ಹೋಗಿದ್ದಾರೆ.
ಈ ಸಂದರ್ಭದ ವಿಡಿಯೋವೊಂದು ವೈರಲ್ ಆಗಿದೆ. ಶಾಸಕ ಎಂ ಪಿ ಕುಮಾರಸ್ವಾಮಿ, ಓಡೋಡಿ ಬಂದಿದ್ದಾರೆ. ಪೊಲೀಸರು ಸುತ್ತಲಿನ ಜನರನ್ನು ತಡೆಯುತ್ತಿದ್ದಾರೆ. ಬಂದ ಕೂಡಲೇ ಕಾರನ್ನು ಹತ್ತಿ ಕೂತಿದ್ದಾರೆ. ತಲೆಯ ಮೇಲೆ ಕೈ ಇಟ್ಟುಕೊಂಡು ಕೂತಿರುವುದನ್ನು ಬಿಟ್ಟರೆ ಆ ಸಂದರ್ಭದಲ್ಲಿ ಬಟ್ಟೆ ಹರಿದಿರಲಿಲ್ಲ.
ಕಾರಲ್ಲಿ ಒಮ್ಮೆ ಕೂತಾದ ಮೇಲೆ ಅವರು ಕೆಳಗೆ ಇಳಿದು ಇಲ್ಲ. ಈ ಮಧ್ಯೆ ಅವರು ಮಾತನಾಡುವಾಗ ಬಟ್ಟೆ ಹರಿದಿತ್ತು. ಇದು ರಾಜಕೀಯ ಪ್ರೇರಿತ ಎಂದೇ ಹೇಳಲಾಗುತ್ತಿದೆ. ಮಾಡಿದವರು ಯಾರು..? ಹೇಗಾಯಿತು..? ಎಂಬುದೆಲ್ಲ ಸಂಪೂರ್ಣ ತನಿಕೆಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.