ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವನ್ನು ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡಿತ್ತು. ಸ್ವತಃ ಪ್ರಧಾನಿ ಮೋದೊಯವರೇ ರಾಜ್ಯಕ್ಕೆ ಬಂದು ಪ್ರಚಾರ ನಡೆಸಿ ಹೋಗಿದ್ದರು. ಆದರೂ ಕಾಂಗ್ರೆಸ್ ಬಹುಮತದಲ್ಲಿ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೇಸ್ ಕೊಟ್ಟ ಗ್ಯಾರಂಟಿಗಳಿಂದಾನೇ ಬಿಜೆಪಿ ಸೋಲುವುದಕ್ಕೆ ಕಾರಣವಾಯ್ತು ಎಂದೇ ಹಲವರು ಹೇಳಿದ್ದರು. ಆದರೆಅದು ಸತ್ಯ ಅಲ್ಲ ಎಂಬುದಾಗಿ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, ಕಾಂಗ್ರೆಸ್ ಕೊಟ್ಟ ಗ್ಯಾರಂಟಿಯಿಂದಾನೇ ಬಿಜೆಪಿ ಸೋಲಿಗೆ ಕಾರಣವಾಯ್ತು ಎಂದು ಅನೇಕರು ಹೇಳುತ್ತಾರೆ. ಅದೇ ಸತ್ಯವಾಗಿದ್ದರೆ, ಬಿಜೆಪಿಗೆ ಶೇಕಡಾ 36 ರಷ್ಟು ಮತಗಳು ಸಹ ಬರುತ್ತಿರಲಿಲ್ಲ. ವಿಧಾನಸಭೆಯಲ್ಲಿ ಬಿಜೆಪಿಗೆ ಸೋಲಾಗಿದ್ದು ಬಿಜೆಪಿಯ ಕೆಟ್ಟ ಆಡಳಿತದಿಂದಾಗಿ ಎಂದಿದ್ದಾರೆ.
ಕೆಟ್ಟ ಆಡಳಿತ, ಎಲೆಕ್ಷನ್ ಮ್ಯಾನೆಜ್‌ಮೆಂಟ್ ನಿಂದಾಗಿ ಬಿಜೆಪಿಗೆ ಸೋಲಾಗಿದೆ. ಎದುರಾಳಿ ಆರೋಪಕ್ಕರ ಸರಿಯಾದ ಉತ್ತರ ಕೊಡುವಲ್ಲಿಯೂ ವಿಫಲವಾಗಿದೆ ಎಂದಿದ್ದಾರೆ. ವಿಧಾನಸಭೆಯ ಚುನಾವಣೆಯಲ್ಲಿ ಕೇವಲ 66 ಸೀಟುಗಳನ್ನು ಪಡೆದ ಬಿಜೆಪಿ ಹೀನಾಯವಾಗಿ ಸೋಲು ಕಂಡಿದೆ. ಈಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದೆ.