ಕಾಂಗ್ರೆಸ್ ಸರ್ಕಾರದ 4ನೇ ಗ್ಯಾರಂಟಿ  ಗೃಹಲಕ್ಷ್ಮಿ ಯೋಜನೆ : ಚಳ್ಳಕೆರೆಯಲ್ಲಿ ಶಾಸಕ ಟಿ. ರಘುಮೂರ್ತಿ ಚಾಲನೆ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಆ.30 : ನಗರದ  ಕಂಬಳಿ ಮಾರುಕಟ್ಟೆಯಲ್ಲಿ ಇಂದು ಶಾಸಕ ಟಿ ರಘುಮೂರ್ತಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ ಕಾಂಗ್ರೆಸ್ ಸರ್ಕಾರ ನೀಡಿದ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತ ಬಂದಿದೆ. ಬಡವರ ಪರ ಕಾಂಗ್ರೆಸ್ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ಎಂದು ರಘುಮೂರ್ತಿ ತಿಳಿಸಿದರು.

ನಂತರ ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿ ಹರಿಪ್ರಸಾದ್, ಮಾತನಾಡಿ ತಾಲೂಕಿನಲ್ಲಿ ಒಟ್ಟು 87 ಸಾವಿರ ಮಹಿಳಾ ಯಜಮಾನರಿದ್ದು ಇದರಲ್ಲಿ 77 ಸಾವಿರ ಜನ ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದಾರೆ ಇನ್ನುಳಿದ ಫಲಾನುಭವಿಗಳು ಮುಂದಿನ ತಿಂಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಎಂದು ಸಿಡಿಪಿ ಹರಿಪ್ರಸಾದ್ ತಿಳಿಸಿದರು.

ಅರ್ಜಿ ಹಾಕದವರು ಯಾವುದೇ ಆತಂಕ ಪಡಬೇಕಿಲ್ಲ. ಮುಂದಿನ ಬಾರಿ ಅರ್ಜಿ ಬಿಟ್ಟಾಗ ಅರ್ಜಿ ಸಲ್ಲಿಸಿದರೆ ಮುಂದಿನ ಕಂತಿನಲ್ಲಿ ಅವರಿಗೆ ಹಣ ದೊರೆಯುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚಳ್ಳಕೆರೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ, ನಗರಸಭೆ ಸದಸ್ಯರಾದ ಜಯಲಕ್ಷ್ಮಿ , ಕೃಷ್ಣಮೂರ್ತಿ,  ಮಂಜುಳಾ, ಪ್ರಸನ್ನ,  ರಮೇಶ್ ಗೌಡ,  ಮತ್ತಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *