Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಾಂಗ್ರೆಸ್ ಸರ್ಕಾರ ದರಿದ್ರ ಸರ್ಕಾರ :  ಛಲವಾದಿ ನಾರಾಯಣಸ್ವಾಮಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
                      ಸುರೇಶ್ ಪಟ್ಟಣ್,                         
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 16 :  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಇಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ, ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದವರಿಗೆ ಸರಿಯಾದ ಶಿಕ್ಷೆಯಾಗುತ್ತಿಲ್ಲ, ಕಾಂಗ್ರೆಸ್ ಸರ್ಕಾರ ದರಿದ್ರ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ದೂರಿದ್ದಾರೆ.

ಚಿತ್ರದುರ್ಗ ಜಿಲ್ಲಾ ಭಾರತಿಯ ಜನತಾ ಪಾರ್ಟಿವತಿಯಿಂದ ನಗರದ ಸಂತೇಪೇಟೆ ವೃತ್ತದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಆರು ತಿಂಗಳಿಂದ ಸರ್ಕಾರ ನಡೆಯುತ್ತಿದೆ ಆದರೆ ಸರ್ಕಾರ ಇದೆಯೋ ಇಲ್ಲವೂ ಎಂಬಂತೆ ಆಗಿದೆ. ಜನತೆಯ ಕಷ್ಠಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ, ರೈತರ ನೋವಿಗೆ ಕಿವಿಗೂಡುತ್ತಿಲ್ಲ ತನ್ನದೇ ಆದ ರೀತಿಯಲ್ಲಿ ಸರ್ಕಾರವನ್ನು ನಡೆಸುತ್ತಿದೆ. ಮುಖ್ಯಮಂತ್ರಿಗಳಾದವರಿಗೆ ಬಡವರ ಕಷ್ಠ ಗೊತ್ತಿಲ್ಲ ಅವರ ಸಮಸ್ಯೆಗಳಿಗೆ ಏನು ಪರಿಹಾರವನ್ನು ಸಹಾ ಕೈಗೊಂಡಿಲ್ಲ ಎಂದು ದೂರಿದರು.

ಈ ಸರ್ಕಾರಕ್ಕೆ ಮಾನ ಮಾರ್ಯದೆ ಇಲ್ಲ ಸರ್ಕಾರ ಜನರಿಗೆ ಒಳ್ಳೆಯದನ್ನು ಮಾಡಲು ಬಂದಿಲ್ಲ, ದೇಶದಲ್ಲಿ ಕಾಂಗ್ರೆಸ್ ನಶಿಸಿ ಹೋಗುತ್ತಿದೆ. ಇದರಿಂದ ಕರ್ನಾಟಕ ಸರ್ಕಾರವನ್ನು ಎಟಿಎಂ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿನ ಹಣವನ್ನು ಬೇರೆ ರಾಜ್ಯಗಳ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ದೂರಿದ ನಾರಾಯಣಸ್ವಾಮಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹಾಳು ಮಾಡುತ್ತಾರೆ ಎಂದು ಮುಂಚಿನಿಮದಲೂ ಹೇಳಿಕೊಂಡು ಬರಲಾಗುತ್ತಿತು ಈಗ ಅದರಂತೆ ಕರ್ನಾಟಕವನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಎಟಿಎಂ ಮಾಡಿಕೊಂಡಿದೆ ಸುಲಿಗೆ ಮಾಡುತ್ತಿದ್ದಾರೆ. ಗ್ಯಾರೆಂಟಿಯನ್ನು ನೀಡುವುದರ ಮೂಲಕ ಮೂಗಿಗೆ ತುಪ್ಪವನ್ನು ಸವರಿದ್ದಾರೆ ಎಂದರು.

ಮನೆಯಲ್ಲಿದ್ದ ಮಹಿಳೆಯನ್ನು ವಿವಸ್ತ್ರಗೂಳಿಸುವುದರ ಮೂಲಕ ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹಾಳಾಗಿದೆ, ಇಲ್ಲಿ ಸರ್ಕಾರವೂ ಬದುಕಿಲ್ಲ, ಮಂತ್ರಿಯೂ ಸಹಾ ಬದುಕಿಲ್ಲ, ಕಾನೂನು ಸತ್ತು ಹೋಗಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಣವನ್ನು ಲೂಟಿ ಮಾಡುತ್ತಿದೆ. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣ ಇಲ್ಲದಂತಾಗಿದೆ. ಹೆಣ್ಣು ಭ್ರೂಣ ಹತ್ಯೆಯಲ್ಲಿ ಸಣ್ಣದಾದ ಪ್ರಕರಣವೆಂಬಂತೆ ದಾಖಲು ಮಾಡಿ ಅವರಿಗೆ ಬೇಲು ಸಿಗುವಂತೆ ಮಾಡಲಾಗಿದೆ ಇದರಲ್ಲಿ ನಿಮ್ಮ ಪಾಲು ಸಹಾ ಇದೆ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿ, ರಾಜ್ಯದಲ್ಲಿ ಬರ ತಾಂಡವಾಡುತ್ತಿದೆ ಭೂಮಿಗೆ ಹಾಕಿದ ಕಾಳು ಮಳೆ ಇಲ್ಲದೆ ಬೆಳೆ ಬರುತ್ತಿಲ್ಲ, ಸರಿಯಾದ ರೀತಿಯಲ್ಲಿ ವಿದ್ಯುತ್ ನೀಡಲಾಗುತ್ತಿಲ್ಲ, ಕಾಂಗ್ರೆಸ್ ದರಿದ್ರವನ್ನು ಹೊತ್ತು ಕೊಂಡು ಬಂದಿದೆ. ಸಿ.ಎಂ.ರವರು ಸುಳ್ಳು ಹೇಳುವುದರ ಮೂಲಕ ಮತದಾರರನ್ನು ಮೋಸ ಮಾಡುತ್ತಿದೆ, ದಲಿತರ ಉದ್ದಾರಕ್ಕಾಗಿ ಇಟ್ಟಿದ್ದ ಹಣವನ್ನು ಸರ್ಕಾರ ಬೇರೆ ರೀತಿಯಲ್ಲಿ ಉಪಯೋಗವನ್ನು ಮಾಡಿಕೊಂಡಿದ ಇದಕ್ಕಾಗಿ ದಲಿತರ ಹಣವನ್ನು ಉಪಯೋಗ ಮಾಡುವುದು ಸರಿಯಲ್ಲ ಎಂದರು.

ದಲಿತರ ಹಣವನ್ನು ಸರ್ಕಾರ ನುಂಗಿದರು ಕೂಡ ದಲಿತ ಸಂಘಟನೆಗಳು ಸುಮ್ಮನೆ ಇವೆ, ಇದ್ದಲ್ಲದೆ ದಲಿತ ಶಾಸಕರು, ಮಂತ್ರಿಗಳು ಸಹಾ ಸಮ್ಮನಿದ್ದಾರೆ, ಇದರ ಬಗ್ಗೆ ಹೋರಾಟವನ್ನು ಮಾಡಬೇಕಿದೆ. ಸಣ್ಣ ಪುಟ್ಟದಕ್ಕೆಲ್ಲಾ ಹೋರಾಟವನ್ನು ಮಾಡುವ ಸಂಘಟನೆಗಳು ಇದರ ಬಗ್ಗೆ ಮೌನವಹಿಸಿದೆ, ಸರ್ಕಾರ ತನ್ನ ಗ್ಯಾರೆಂಟಿಗಳಿಗಾಗಿ ದಲರಿತ ಹಣವನ್ನು ತೆಗೆದುಕೊಂಡಿದೆ ಇದರ ವಿರುದ್ದ ಹೋರಾಟವನ್ನು ಮಾಡಲಾಗುವುದೆಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಮಾಜಿ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಆಡಳಿತವನ್ನು ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಪ್ರತಿಯೊಂದಕ್ಕೂ ಸಹಾ ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸುತ್ತಿದೆ ಇದು ಸರಿಯಾದ ಕ್ರಮವಲ್ಲ ರಾಜ್ಯ ಸರ್ಕಾರ ತನ್ನ ಪಾಲಿನ ಕೆಲಸವನ್ನು ಮಾಡಬೇಕು ತದ ನಂತರ ಕೇಂದ್ರವನ್ನು ಕಾಯಬೇಕು ಆದರೆ ಇಲ್ಲ ಎಲ್ಲದಕ್ಕಿಂತ ಮುಂಚೆಯೇ ಕೇಂದ್ರ ನಮಗೆ ಏನು ಸಹಾಯ ಮಾಡಿಲ್ಲ ಎಂದು ದೂರುವುದು ಈ ಸರ್ಕಾರದ ಪದ್ದತಿಯಾಗಿದೆ ಎಂದು ಅವರು, ರಾಜ್ಯದಲ್ಲಿ ಮಹೀಲೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಇವರಿಗೆ ಸ್ವಾಂತಾನ ಹೇಳುವ ಕೆಲಸವನ್ನು ಸರ್ಕಾರ ಮಾಡಿಲ್ಲ, ರಾಜ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದ್ದರು ಸಹಾ ಇದರ ಬಗ್ಗೆ ಸರ್ಕಾರ ಯಾವುದೆ ಕ್ರಮ ಕೈಗೊಂಡಿಲ್ಲ ಇದಕ್ಕೆ ಸರ್ಕಾರ ಇನ್ನೂ ಸಹಾಯವನ್ನು ಮಾಡುತ್ತಿದೆ ಎಂದು ದೂರಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಬರ ಬಂದಾಗ ರೈತರಿಗೆ ಸಹಾಯವನ್ನು ಕೇಂದ್ರವನ್ನು ಕಾಯದೇ ಮಾಡಲಾಗುತಿತ್ತು ಅದರ ಈಗ ಕಾಂಗ್ರೇಸ್ ಸರ್ಕಾರ ರೈತರ ನೆರವಿಗೆ ಬಾರದಿರುವುದು ದುರಂತವೇ ಸಹಾ ಸರ್ಕಾರ ಬಡವರಿಗೆ ಸಹಾಯವನ್ನು ಮಾಡದೇ ಕಾಲಹರಣವನ್ನು ಮಾಡುವುದರಲ್ಲಿ ನಿರತವಾಗಿದೆ, ದಲಿತರ ಹಣವನ್ನು ಬಳಕೆ ಮಾಡಿಕೊಂಡಿರುವ ಸರ್ಕಾರ ಇದರ ವಿರುದ್ದ ಸಂಘಟನೆಗಳು ಎಚ್ಚೆತ್ತುಕೊಂಡು ಹೋರಾಟವನ್ನು ಮಾಡಬೇಕಿದೆ ಎಂದು ಕರೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಲವಾರು ರೀತಿಯ ದೌರ್ಜನ್ಯಗಳು ಕೊಲೆಗಳಾಗಿದೆ ಇದರ ಬಗ್ಗೆ ಗೃಹ ಸಚಿವರನ್ನು ಪ್ರಶ್ನೆ ಮಾಡಿದಾಗ ಇದರ ಬಗ್ಗೆ ಉಡಾಫೆ ಮಾತನ್ನು ಹೇಳುವುದರ ಮೂಲಕ ಕಡಿಮೆ ಕೊಲೆಗಳಾಗಿವೆ ಎಂದು ಹೇಳುವುದರ ಮೂಲಕ ಜನರಿಗೆ ತಪ್ಪು ಮಾಹಿತಿಯನ್ನು ನೀಡಿದ್ದಾರೆ. ಬೆಳಗಾವಿ ಘಟನೆ ಎಲ್ಲರನ್ನು ತಲೆ ತಗ್ಗಿಸುವಂತೆ ಮಾಡಿದೆ ಇದರ ಬಗ್ಗೆ ಸರ್ಕಾರ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಸಿ.ಎಂರವರು ಸಹಾ ಇದರ ಬಗ್ಗೆ ಹೇಳಿಕೆಯನ್ನು ನೀಡಿಲ್ಲ ಸಮಾಜದಲ್ಲಿ ವಿವಿಧ ರೀತಿಯ ಶೋಷಣೆಗಳು ನಡೆಯತ್ತಿವೆ ಇದರ ಬಗ್ಗೆ ಸರ್ಕಾರ ಯಾವುದೆ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ದೂರಿದರು.

ಈ ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷರಾದ ಎ.ಮುರಳಿ, ನಗರಾಭೀವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್, ನರೇಂದ್ರ, ನವೀನ್ ಚಾಲುಕ್ಯ, ಮಾಧುರಿ ಗೀರೀಶ್ ಕೆ.ಮಲ್ಲಿಕಾರ್ಜನ್, ವೆಂಕಟೇಶ್,ಯಾದವ್, ನಾಗರಾಜು, ಬೇದ್ರೇ, ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ, ಪಾಂಡುರಂಗಪ್ಪ, ಭಾರ್ಗವಿ ದ್ರಾವಿಡ್, ಶಾಂತಮ್ಮ, ರಜನಿ, ಕಾಂಚನ, ಬಸಮ್ಮ, ನಾಗರಾಜ್ ಕಿರಣ್, ಯಶವಂತ, ಪರಶುರಾಂ. ರಾಮದಾಸ್, ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸತತ ಏರಿಕೆಯತ್ತ ಸಾಗುತ್ತಿದೆ ಚಿನ್ನದ ಬೆಲೆ : ಇಂದಿನ ದರ ಹೀಗಿದೆ..!

ಚಿನ್ನದ ಬೆಲೆ ಇಳಿಕೆಯಾಯ್ತು ಎಂದು ಖುಷಿ ಪಡುತ್ತಿರುವಾಗಲೇ ಇದೇನಿದು ಒಂದೇ ಸಮನೇ ಏರುತ್ತಲೇ ಇದೆ. ಅದರಲ್ಲೂ 70-80 ರೂಪಾಯಿ ಏರುತ್ತಿದೆ. ಇಂದು ಕೂಡ ಚಿನ್ನದ ದರ ಏರಿಕೆಯಾಗಿದ್ದು, 70 ರೂಪಾಯಿ ಗ್ರಾಂಗೆ ಜಾಸ್ತಿಯಾಗಿದೆ. ಈ

ಚಿತ್ರದುರ್ಗ | ಯೋಗೀಶ್ ಸಹ್ಯಾದ್ರಿ ಬಿಜೆಪಿ ಸೇರ್ಪಡೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಉಪನ್ಯಾಸಕರು ಹಾಗೂ ಸಹ್ಯಾದ್ರಿ ಇಂಗ್ಲಿಷ್ ಅಕಾಡೆಮಿ, ಅಧ್ಯಕ್ಷರಾದ ಯೋಗೀಶ್ ಸಹ್ಯಾದ್ರಿಯವರು ಬಿಜೆಪಿ

ನವೆಂಬರ್ 26 ರಿಂದ 28 ರವರೆಗೆ ಭ್ರಷ್ಟಾಚಾರ ತಡೆಯಲು ಉಪವಾಸ ಸತ್ಯಾಗ್ರಹ : ಎಎಪಿ ಜಗದೀಶ್

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 22 : ಇತ್ತೀಚಿನ ದಿನಮಾನದಲ್ಲಿ ಎಲ್ಲಡೆ ಭ್ರಷ್ಠಾಚಾರ ತುಂಬಿ ತುಳುಕಾಡುತ್ತಿದೆ, ಇದನ್ನು ತಡೆಯುವ ಸಲುವಾಗಿ ಭ್ರಷ್ಠಾಚಾರ

error: Content is protected !!