ಬೆಂಗಳೂರು: “ಯತ್ನಾಳ್ ಹೇಳಿದ್ದಕ್ಕೆ ಸಭಾತ್ಯಾಗ ಮಾಡಿದೆವು” ಎನ್ನುವ ಮೂಲಕ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಎಂದು ಆರ್ ಅಶೋಕ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ!
ಬಿಜೆಪಿಯಲ್ಲಿ ಕೆಂಡದಂತಹ ಕಚ್ಚಾಟವಿದೆ ಎಂಬುದನ್ನೂ ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಪಕ್ಷದ ಅಧ್ಯಕ್ಷ ಬಿವೈ ವಿಜಯೇಂದ್ರ ಅವರ ಮಾತಿಗೆ ಮೂರು ಪೈಸೆ ಕಿಮ್ಮತ್ತಿಲ್ಲ ಎನ್ನುವುದು ಕೂಡ ಬಿಜೆಪಿಯ “ಸದನ ಕದನ”ದಿಂದ ಬಯಲಾಗಿದೆ. Dear @BJP4Karnataka, ನಿಮ್ಮದು “ಮನೆಯೊಂದು ಮೂರು ಬಾಗಿಲಲ್ಲ, ಮುನ್ನೂರು ಬಾಗಿಲು” ಅಲ್ಲವೇ!
ರಾಜಕೀಯ ಪಕ್ಷ ಬದಲಾದಂತೆ “ಹಿಂದೂ ಉಲಿ”ಯ ವೇಷವೂ ಬದಲಾಗುತ್ತದೆ! ಮುಸ್ಲಿಮರೊಂದಿಗೆ ವ್ಯಾಪಾರ, ವ್ಯವಹಾರ.
ಮುಸ್ಲಿಮರೊಂದಿಗೆ ಬದುಕು. ಹೊರಗೆ ಮಾತ್ರ ಮುಸ್ಲಿಮರ ಮೇಲೆ ದ್ವೇಷ ಭಾಷಣ. ಬಸನಗೌಡಪಾಟೀಲ್ ಯತ್ನಾಳ್ ಅವರೇ, ಮುಸ್ಲಿಂ ಟೋಪಿಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತಿದಿರಿ! ನೀವು ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿಕೊಂಡು, ಜನತೆಗೆ ದ್ವೇಷ ತುಂಬುವ ನಿಮ್ಮ ಬೂಟಾಟಿಕೆಯನ್ನು ಇನ್ನಾದರೂ ಬಿಡಿ.
ಬಿಜೆಪಿಯಲ್ಲಿನ ಕಚ್ಚಾಟದಿಂದಾಗಿ ಸಾಮ್ರಾಟರು “ಶೋಕ” ರಾಗ ಹಾಡುತ್ತಿದ್ದಾರೆ. ಅಶೋಕರಲ್ಲಿ ಆ ಕಳೆದು “ಶೋಕ” ಮಾತ್ರ ಉಳಿದುಕೊಂಡಿದೆ! ಸದನದಲ್ಲಿ ಏನು ಚರ್ಚಿಸಬೇಕು, ಏನು ಮಾಡಬೇಕು ಎನ್ನುವುದು ವಿರೋಧ ಪಕ್ಷದ ನಾಯಕನ ತೀರ್ಮಾನವೋ, ಶಾಸಕನೊಬ್ಬನ ತೀರ್ಮಾನವೋ? ಬಿಜೆಪಿ ಪಕ್ಷದ ವಿರೋಧ ಪಕ್ಷದ ನಾಯಕ ಅಶೋಕ್ ಅವರೊ, ಬಸನಗೌಡ ಪಾಟೀಲ್ ಯತ್ನಾಳ್ ಅವರೊ ಎಂಬ ಗೊಂದಲ ಸ್ವತಃ ಬಿಜೆಪಿಗರಿಗೆ ಇದ್ದಂತಿದೆ.
ಶಾಸಕಾಂಗ ಪಕ್ಷದ ನಾಯಕನ ನಿರ್ಧಾರಕ್ಕೆ ಅವರ ಶಾಸಕರೇ ಕಿಮ್ಮತ್ತು ಕೊಡದಿರುವುದು #BucketJanathaParty ಅನುಭವಿಸುತ್ತಿರುವ ದುರಂತ ಸ್ಥಿತಿ. ಬಕೆಟ್ ಹಿಡಿದು ವಿಪಕ್ಷ ನಾಯಕರಾಗಿದ್ದಕ್ಕೆ ನಿಮಗೆ ಈ ದುಃಸ್ಥಿತಿಯೇ ಅಶೋಕ್ ಅವರೇ. ಬಕೆಟ್ ಬಕೆಟ್ ಬಕೆಟ್….
“ಅಶೋಕ್ ಬಕೆಟ್ ಹಿಡಿದುಕೊಂಡೇ ರಾಜಕಾರಣ ಮಾಡುವವವರು”
– ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್!
– ಬಿಜೆಪಿಯವರೇ ಬಿಜೆಪಿಯವರಿಗೆ ಕೊಟ್ಟಿರುವ ಹೆಸರು
B ಬಕೆಟ್ Jಜನತಾ Pಪಾರ್ಟಿ ಎಂದು ಟ್ವೀಟ್ ಮಾಡಿದೆ.