ಬೆಂಗಳೂರು: ನಿನ್ನೆಯಷ್ಟೇ ಕೇಂದ್ರ ಸರ್ಕಾರದಿಂದ ಮಧ್ಯಂತರ ಬಜೆಟ್ ಮಂಡನೆಯಾಗಿದೆ. ಈ ಬಜೆಟ್ ಬಗ್ಗೆ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ. ಇದೀಗ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ನವರು ದೆಹಲಿ ಚಲೋ ಹಮ್ಮಿಕೊಂಡಿದ್ದಾರೆ. ಫೆಬ್ರವರಿ 6ರಂದು ದೆಹಲಿ ಚಲೋ ನಡೆಸಲಿದ್ದು, ಫೆಬ್ರವರಿ 7ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ಎಲ್ಲಾ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಸೇರಿ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತೇವೆ. ಅವರು ಎಲ್ಲಿ ಜಾಗ ಕೇಳುತ್ತಾರೆ ನೋಡುತ್ತೇವೆ. ನಮ್ಮ ಹಕ್ಕನ್ನು ಕೇಳಲು ಹೋರಾಟ ಮಾಡುತ್ತೇವೆ. ತೆರಿಗೆ ತಾರತಮ್ಯ ಖಂಡಿಸಿ, ಹೋರಾಟ ಮಾಡುತ್ತೇವೆ. ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಚಲೋ ನಡೆಸುತ್ತೇವೆ. ಕರ್ನಾಟಕ ರಾಜ್ಯ ದೇಶದಲ್ಲೆ ಪ್ರಗತಿಪರ ರಾಜ್ಯ. ಮಹಾರಾಷ್ಟ್ರ ಬಿಟ್ಟರೆ ಅತೀ ಹೆಚ್ಚು ತೆರಿಗೆ ಕಟ್ಟುತ್ತೇವೆ. ನಿನ್ನೆಯ ಬಜೆಟ್ ಮಾತ್ರ ಐದು ವರ್ಷದ ಬಜೆಟ್ ಗಮನಿಸಬೇಕು. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಕ್ಕಿಲ್ಲ. 2018-19 ರಲ್ಲಿ ಅನುದಾನಕ್ಕಿಂತ 40% ರಿಂದ 45% ಕಡಿಮೆ ಆಗಿದೆ. ಪ್ರತಿ ವರ್ಷ 7ಸಾವಿರ, ಎಂಟು ಸಾವಿರ ರೂ. ಕಡಿಮೆ ಆಗುತ್ತಿದೆ. ಬಜೆಟ್ ಡಬಲ್ ಆದರೂ ತೆರಿಗೆ ಪಾಲು ಹೆಚ್ಚು ಬಂದಿಲ್ಲ.

ನಾನು ಕೇಂದ್ರದ ಸಚಿವರಿಗೆ ಪತ್ರ ಬರೆದಿದ್ದೇವೆ. ನಮಗೆ ಸರಿಯಾದ ನ್ಯಾಯ ಒದಗಿಸುತ್ತಿಲ್ಲ ಎಂದು ತಿಳಿಸಿದ್ದೇವೆ. ಆದರೆ ಯಾವುದೇ ಉತ್ತರ ಕೇಂದ್ರದಿಂದ ಬಂದಿಲ್ಲ. ನಿನೆ ಬಜೆಟ್ನಲ್ಲಿ ಏನಾದರೂ ಸಿಗಬಹುದು ಅನ್ನುವ ನಿರೀಕ್ಷೆ ಇತ್ತು ಅದೂ ಆಗಿಲ್ಲ. ನಾನು ದೆಹಲಿ, ಮುಂಬೈ ನಗರಗಳನ್ನು ಗಮನಿಸಿದ್ದೇನೆ. ನಮ್ಮ ನಗರ ಸಹ ಹೆಲ್ತ್ ಟೂರಿಸಂ ಆಗುತ್ತಿದೆ. ನಾನು ಒಂದಷ್ಟು ದಿನ ವೈದ್ಯಕೀಯ ಶಿಕ್ಷಣ ಸಚಿವ ಆಗಿದ್ದೆ. ಗ್ರಾಮೀಣ ಪ್ರದೇಶದ ಜನರನ್ನು ಬೆಂಗಳೂರಿಗೆ ತರುವುದಕ್ಕೆ ತುಂಬಾ ತೊಂದರೆ ಆಗುತ್ತಿದೆ. ಐಸಿಯು ಹಾಗೂ 108 ಏನಿದೆ ಅಲ್ಲಿ, ಸಿಬ್ಬಂದಿ ಕಾಳಜಿ ಮಾಡಬೇಕು ಎಂದರು.

