ಬೆಂಗಳೂರು: ನಂದಿನಿ ಮತ್ತು ಅಮೂಲ್ ವಿಲೀನ ಮಾಡುವುದಕ್ಕೆ ಸರ್ಕಾರ ನಿರ್ಧರಿಸಿದ್ದೆ ತಡ, ಪರ ವಿರೋಧಗಳು ಹೆಚ್ಚಾಗಿವೆ. ಸೋಷಿಯಲ್ ಮೀಡಿಯಾದಲ್ಲಂತು ಅಮೂಲ್ ವಿರುದ್ಧ ದಂಗೆ ಎದ್ದಿದ್ದಾರೆ. ಇದೀಗ ಈ ಸಂಬಂಧ ಕಾಂಗ್ರೆಸ ಕೂಡ ಟ್ವೀಟ್ ಮಾಡುವ ಮೂಲಕ ಹರಿಹಾಯ್ದಿದೆ.
◆ನಂದಿನಿಯನ್ನು ಅಮೂಲ್‌ನಲ್ಲಿ ವಿಲೀನ ಮಾಡುತ್ತೇವೆ ಎಂದರೂ ಸಮರ್ಥನೆ.
◆ಮೊಸರಿಗೆ ದಹಿ ಎಂದರೂ ಸಮರ್ಥನೆ
◆ನಂದಿನಿಯನ್ನು ಮುಳುಗಿಸುವ ಷಡ್ಯಂತ್ರ ನಡೆದರೂ ಸಮರ್ಥನೆ
◆ಹಿಂದಿ ಹೇರಿಕೆಗೂ ಸಮರ್ಥನೆ.
@CTRavi_BJP,
ಮಹಾರಾಷ್ಟ್ರ ಕರ್ನಾಟಕದ ನೆಲವನ್ನು ಕಬಳಿಸುವ ಸಂಚಿನ ಬಗ್ಗೆ ಏಕೆ ಮೌನ? ಅದನ್ನೂ ಸಮರ್ಥಿಸಿಕೊಳ್ಳಿ.
#ಕರ್ನಾಟಕವಿರೋಧಿಬಿಜೆಪಿ
ಕನ್ನಡಿಗರು ತಮ್ಮ ಹಕ್ಕುಗಳಿಗಾಗಿ, ತಮ್ಮ ಭಾಷೆಯ ಉಳಿವಿಗಾಗಿ, ತಾವು ಕಟ್ಟಿ ಬೆಳೆಸಿದ ಸಂಸ್ಥೆಗಳಿಗಾಗಿ ಹೋರಾಡಿದಾಗೆಲ್ಲ ಅಣಕಿಸುವ, ಟೀಕಿಸುವ ಸಿ.ಟಿ ರವಿಯವರೇ,
ನಿಮಗೆ ಕನ್ನಡದ ಮೇಲೆ, ಕನ್ನಡಿಗರ ಮೇಲೆ, ಕರ್ನಾಟಕದ ಮೇಲೆ ಯಾಕಿಷ್ಟು ದ್ವೇಷ, ತಾತ್ಸಾರ?. ಸಿಟಿ ರವಿ ಅಂದರೆ, ಕನ್ನಡಿಗರ ಟೀಕೆ ರವಿ! ಕನ್ನಡಕ್ಕೆ ಕಂಟಕ ರವಿ! ಎಂದು ಸಿಟಿ ರವಿ ವಿರುದ್ಧ ಕಿಡಿಕಾರಿದೆ.