ಬೆಂಗಳೂರು: ಮಳೆಗಾಲದ ಅಧಿವೇಶನದಲ್ಲಿ ಸಮಸ್ಯೆಗಿಂತ ಹೆಚ್ಚಾಗಿ ಚರ್ಚೆಯಾಗುತ್ತಿರುವುದು ಭ್ರಷ್ಟಾಚಾರದ ವಿಚಾರ. ಕಾಂಗ್ರೆಸ್ ಒಂದು ಕಡೆ ಪೇಸಿಎಂ ಎಂಬ ಆಂದೋಲನ ಶುರು ಮಾಡಿದೆ. ಇತ್ತ ಜೆಡಿಎಸ್ ಕೂಡ ಹಲವು ಆರೋಪಗಳನ್ನು ಮಾಡಿದೆ.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ದಾಖಲೆ ನೀಡಲು ನಾನು ಸಿದ್ಧನಿದ್ದೇನೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೊಸ ಬಾಂಬ್ ಹಾಕಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಅಕ್ರಮದ ಬಗ್ಗೆ ತನಿಖೆ ನಡೆಸುತ್ತೀರಾ..? ದಾಖಲೆ ನೀಡಲು ವಿಫಲವಾದರೆ ನನ್ನ ಸ್ಥಾನ ಬಿಡುತ್ತೇನೆ.

ಇತ್ತ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಅಕ್ರಮದ ಬಗ್ಗೆ ಮಾತನಾಡಿದ್ದಾರೆ. ಬಿಎಂಎಸ್ ಟ್ರಸ್ಟ್ ನಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಸಾವಿರಾರು ಕೋಟಿ ಆಸ್ತಿ ಲಪಾಟಾಯಿಸಲು ಹುನ್ನಾರ ನಡೆದಿದೆ. ಅಕ್ರಮದ ಕುರಿತ ದಾಖಲೆಗಳನ್ನು ಸದನದ ಮುಂದಿಟ್ಟಿದ್ದೇನೆ ಎಂದಿದ್ದಾರೆ.


