ರಾಯಚೂರು: ಈ ಸಾಲನ್ನು ನೋಡೊದ್ರೆ ರಾಜಕೀಯ ಅನ್ನೋದು ಎಲ್ಲಿಗೆ ಬಂದು ನಿಂತಿದೆ ಎಂಬುದು ತಿಳಿಯಲಿದೆ. ಸದ್ಯ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಕಣ ರಂಗೇರಿದೆ. ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಮೂರು ಪಕ್ಷಗಳು ಹಪಹಪಿಸುತ್ತಿವೆ. ಅದರ ಜೊತೆಗೆ ಜನ ಕೂಡ ತಮಗಿಷ್ಟವಾದ ಪಕ್ಷಕ್ಕೆ ಪ್ರಚಾರ ಮಾಡುವಲ್ಲಿ ಜನ ಕೂಡ ನಿರತರಾಗಿದ್ದಾರೆ. ಈ ಪ್ರಚಾರದ ಅಬ್ಬರದಲ್ಲಿ ವಿಚಿತ್ರ ಘಟನೆ ಒಂದು ನಡೆದಿದೆ.
ರಾಯಚೂರಿನಲ್ಲಿ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿದೆ. ರಾಜಕೀಯ ಈಗ ವೈಯಕ್ತಿಕ ಆಗಿರುವ ಸಂಗತಿ ಜಿಲ್ಲೆಯ ಹುಣಸಗಿ ತಾಲೂಕಿನ ಸೊನ್ನಾಪುರ ತಾಂಡಾದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಪರಶುರಾಮ್ ಚೌಹ್ಹಾಣ್ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಆದರೆ ಮಾವ ಚಂದ್ರು ಬಿಜೆಪಿಯಲ್ಲಿದ್ದಾರೆ. ಪರಶುರಾಮ್ ಪತ್ನಿ ಹೆರಿಗೆಗೆ ಎಂದು ತವರಿಗೆ ಹೋಗಿದ್ದರು. ಈಗ ಮಾವ ಅದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ.
ಮಗಳನ್ನು ಮನೆಗೆ ಕಳುಹಿಸುವಂತೆ ಅಳಿಯ, ಮಾವನಿಗೆ ಕೇಳಿದ್ದಾರೆ. ಆದರೆ ಈ ವೇಳೆ ಮಾವ ಸ್ಪೆಷಲ್ ಡಿಮ್ಯಾಂಡ್ ಇಟ್ಟಿದ್ದಾರೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರೆ ಮಾತ್ರ ಮಗಳನ್ನು ಕಳುಹಿಸುವುದು ಎಂದು ಹೇಳಿದ್ದಾರೆ. ಆದರೆ ಅಳಿಯ ಮಾವನ ಡಿಮ್ಯಾಂಡ್ ಗೆ ಕ್ಯಾರೆ ಎಂದಿಲ್ಲ. ಈಗ ಮಾವ, ತನ್ನ ಮಗಳು, ಮಗುವನ್ನು ಕಳುಹಿಸುತ್ತಾರಾ ಇಲ್ಲವಾ ಎಂಬುದನ್ನು ನೋಡಬೇಕಿದೆ.