ಕೋಲಾರ : ಇಂದು ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಕೋಲಾರದ ಮಾಲೂರಿನಲ್ಲಿ ಫಲಿತಾಂಶ ಹೊರ ಬಿದ್ದ ಮೆ ಹೈಡ್ರಾಮ ಶುರುವಾಗಿದೆ.
ಮಾಲೂರು ಪುರಸಭೆ ನೂತನ ಅಧ್ಯಕ್ಷ್ಯರಾಗಿ ಅನಿತಾ ಹೆಸರು ಘೋಷಣೆ ಮಾಡಲಾಗಿದೆ. ಚುನಾವಣಾ ಅಧಿಕಾರಿ ರಮೇಶ್ ಕಾರು ಅಡ್ಡಗಟ್ಟಿ ಕಾಂಗ್ರೆಸ್ ಶಾಸಕ ನಂಜೇಗೌಡ ಪ್ರತಿಭಟನೆ ನಡೆಸಿದ್ದಾರೆ. ಹತ್ತಾರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ತಹಶಿಲ್ದಾರ್ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಮಾಲೂರು ಪುರಸಭೆ ಅಧ್ಯಕ್ಷ್ಯ ಚುನಾವಣೆ ಗೊಂದಲದ ವಿಚಾರವಾಗಿ ಈ ರೀತಿ ಘಟನೆ ನಡೆದಿದೆ. ಮಧ್ಯಾಹ್ನ ತಹಶಿಲ್ದಾರ್ ರಮೇಶ್ ಫಲಿತಾಂಶ ಘೋಷಿಸದೆ ತೆರಳಿದ್ದರು. ಬಳಿಕ ಅಧ್ಯಕ್ಷ್ಯ ಸ್ತಾನಕ್ಕೆ ಪೈಪೋಟಿ ಮಾಡಿದ್ದ ಬಿಜೆಪಿ ಸದಸ್ಯೆ ಅನಿತಾ ರನ್ನ ನೂತನ ಅಧ್ಯಕ್ಷ್ಯರಾಗಿ ಘೋಷಣೆ ಮಾಡಿದ್ದರು.
ಅಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿ ಸದಸ್ಯೆ ಅನಿತಾ 17 ಮತಗಳನ್ನ ಪಡೆದುಕೊಂಡಿದ್ದರು. ಕಾಂಗ್ರೆಸ್ ಸದಸ್ಯೆ ಭವ್ಯ 16 ಮತಗಳನ್ನ ಪಡೆದುಕೊಂಡಿದ್ದರು. ಮಧ್ಯಾಹ್ನ ಫಲಿತಾಂಶ ಘೋಷಿಸದೆ ಹೈಕೋರ್ಟ್ ಗಮನಕ್ಕೆ ತರುವುದಾಗಿ ಅಧಿಕಾರಿ ರಮೇಶ್ ಹೇಳಿದ್ದರು. ಬಿಜೆಪಿ ನಾಯಕರ ಒತ್ತಡಕ್ಕೆ ತಹಶಿಲ್ದಾರ್ ರಮೇಶ್ ಮಣಿದು ಫಲಿತಾಂಶ ಘೋಷಿಸಿರೊ ಆರೋಪ ಕೇಳಿ ಬಂದಿದೆ.
ಹೀಗಾಗಿ ಫಲಿತಾಂಶ ಹಿಂಪಡೆಯುವಂತೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ದಾರೆ. ಹೈಕೋರ್ಟ್ ಆದೇಶದಂತೆ 4 ನಾಮನಿರ್ದೇಶಿತರ ಸದಸ್ಯರಿಗೆ ಮತದಾನದ ಹಕ್ಕು ಇದೆ. ಮತದಾನದ ಹಕ್ಕಿನ ವಿಚಾರಣೆ ಫೂರ್ಣಗೊಳ್ಳುವವರೆಗು ಫಲಿತಾಂಶ ಘೋಷಿಸದಂತೆ ಕಾಂಗ್ರೆಸ್ ಆಗ್ರಹ ಮಾಡಿದೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ.