ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಗೆ ಎಲ್ಲಾ ತಯಾರಿ ನಡೆದಿದೆ. ಪಕ್ಷಗಳು ಸಹ ತಮ್ಮ ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುತ್ತಿವೆ. ಇದೀಗ ಇಂದು ಕಾಂಗ್ರೆಸ್ ಕ್ಷ ಎರಡನೇ ಪಟ್ಟಿ ರಿಲೀಸ್ ಆಗಿದ್ದು, ಇಲ್ಲಿಯೂ ಸಿದ್ದರಾಮಯ್ಯ ವರ್ಸಸ್ ಡಿಕೆಶಿ ಎಂಬಂತೆ ಆಗಿದೆ. ಸಿದ್ದರಾಮಯ್ಯ ಯಾರಿಗೆಲ್ಲಾ ಟಿಕೆಟ್ ಕೊಡಿಸಬೇಕು ಎಂದು ಹಠ ಮಾಡಿದರೋ ಅವರಿಗೆಲ್ಲಾ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತೀರ್ಥಹಳ್ಳಿಯಲ್ಲಿ ಮಂಜುನಾಥ್ ಗೌಡಗೆ ಟಿಕೆಟ್ ಕೊಡಿಸಬೇಕೆಂದು ಡಿಕೆಶಿ ಸಾಕಷ್ಟು ಪಟ್ಟು ಹಿಡಿದಿದ್ದರು. ಆದರೆ ಮಂಜುನಾಥ್ ಗೆ ಟಿಕೆಟ್ ಸಿಕ್ಕಿಲ್ಲ. ಕಲಘಟಗಿಯಲ್ಲಿ ನಾಗಾರಾಜ್ ಚಬ್ಬಿಗೆ ಟಿಕೆಟ್ ಕೊಡಿಸುವ ಪ್ರಯತ್ನ ಮಾಡಿದರು ಅಲ್ಲಿಯೂ ಡಿಕೆಶಿ ಅವರ ಪ್ಲ್ಯಾನ್ ಸಕ್ಸಸ್ ಆಗಲೇ ಇಲ್ಲ.
ಆದರೆ ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಹಾಗೂ ಸಂತೋಷ್ ಲಾಡ್ ಗೆ ಟಿಕೆಟ್ ನೀಡಿದ್ದಾರೆ. ಆದರೆ ಇದರ ನಡುವೆ ಗಂಡಸಿ ನಾಗಾರಾಜ್ ಗೆ ಟಿಕೆಟ್ ಕೊಡಿಸುವಲ್ಲಿ ಡಿಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಇನ್ನು ಚಿತ್ರದುರ್ಗದಲ್ಲಿ ರಘು ಆಚಾರ್ ಗೆ ಟಿಕೆಟ್ ಕೈ ತಪ್ಪಿದ್ದು, ದೊಡ್ಡಣ್ಣ ಅವರ ಅಳಿಯ ವಿರೇಂದ್ರ ಪಪ್ಪಿಗೆ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ನಲ್ಲಿ ವಲಸಿಗರಿಗೇನೆ ಹೆಚ್ಚಿನ ಟಿಕೆಟ್ ನೀಡಲಾಗಿದೆ.