ಬೆಂಗಳೂರು: ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿರುವ ಅಗ್ನಿಪಥ್ ಯೋಜನೆಗೆ ಬಾರೀ ವಿರೋಧ ವ್ಯಕ್ತವಾಗಿದೆ. ನಮಗೆ ಅನ್ಯಾಯವಾಗುತ್ತೆ ಎಂದು ಹಲವು ಅಭ್ಯರ್ಥಿಗಳು ಧಂಗೆ ಎದ್ದಿದ್ದಾರೆ. ಇದೀಗ ನಾಳೆ ನಡೆಯುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ನೀಡಿದೆ.
ಕೇಂದ್ರ ಸರ್ಕಾರದಿಂದ ಅಗ್ನಿಪಥ್ ಯೋಜನೆ ಜಾರಿ ಹಿನ್ನೆಲೆ, ನಾಳೆ ದೆಹಲಿಯಲ್ಲಿ ನಡೆಯಲಿದೆ ಬೃಹತ್ ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ನಿಂದ ಬೃಹತ್ ಹೋರಾಟ ನಡೆಯಲಿದೆ. ಎಲ್ಲಾ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರು, ವಿಪಕ್ಷಗಳ ನಾಯಕರ ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
ಹಾಗಾಗಿ ಸಿದ್ದರಾಮಯ್ಯ ಅವರು ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ. ಈಗಾಗಲೇ ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೋಗಿದ್ದಾರೆ. ಒಂದೆಡೆ ಅಗ್ನಿಪಥ್ ವಿರೋಧಿಸಿ, ಹೋರಾಟ, ಮತ್ತೊಂದೆಡೆ ರಾಹುಲ್ ಇಡಿ ವಿಚಾರಣೆ ವಿರೋಧಿಸಿ ಹೋರಾಟ ನಡೆಯಲಿದೆ. ಎರಡು ವಿಚಾರಗಳನ್ನ ಮುಂದಿಟ್ಟ ಕೇಂದ್ರ ಸರ್ಕಾರದ ವಿರುದ್ಧ ಕೈ ಕಲಿಗಳ ಹೋರಾಟ ಮಾಡಲಿದೆ.