Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜಾನಪದ ಹಾಡುಗಾರ, ಸಹ ಶಿಕ್ಷಕ ಟಿ.ಚಂದ್ರಪ್ಪ ಕಾಲ್ಕೆರೆ ಅವರಿಗೆ ನುಡಿನಮನ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ : ಎಲ್ಲಾ ಬಗೆಯ ಸಾಹಿತ್ಯ, ರೂಪಕಗಳಿಗೆ ರಾಗ ಸಂಯೋಜನೆ ಮಾಡುವ ದೊಡ್ಡ ತಾಕತ್ತು ಹೊಂದಿದ್ದ ಶಿಕ್ಷಕ ಟಿ.ಕಾಲ್ಕೆರೆ ಚಂದ್ರಪ್ಪ ಇಷ್ಟು ಬೇಗನೆ ನಮ್ಮನ್ನೆಲ್ಲಾ ಅಗಲುತ್ತಾರೆಂದು ಯಾರು ಊಹಿಸಿರಲಿಲ್ಲ ಎಂದು ರಂಗ ನಿರ್ದೇಶಕ ಹಾಗೂ ನಿವೃತ್ತ ಪ್ರಾಚಾರ್ಯರಾದ ಡಾ.ವಿ.ಬಸವರಾಜ್ ದುಃಖ ತೋಡಿಕೊಂಡರು.

ಜಿಲ್ಲಾ ಕಲಾವಿದರ ಒಕ್ಕೂಟದಿಂದ ಪತ್ರಕರ್ತರ ಭವನದಲ್ಲಿ ಶಿಕ್ಷಕ ಟಿ.ಕಾಲ್ಕೆರೆ ಚಂದ್ರಪ್ಪನವರಿಗೆ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂತರಾಳದ ನುಡಿಗಳನ್ನು ಹಂಚಿಕೊಂಡರು.

ಶಿಕ್ಷಕ ವೃತ್ತಿಯ ಜೊತೆ ಸಂಗೀತ ಹಾಗೂ ಜಾನಪದ ಕ್ಷೇತ್ರಕ್ಕೆ ದೊಡ್ಡ ಶಕ್ತಿಯಾಗಿದ್ದ ಟಿ.ಕಾಲ್ಕೆರೆ ಚಂದ್ರಪ್ಪ ಬಾನಂದೂರು ಕೆಂಪಯ್ಯ, ಸಿ.ಅಶ್ವಥ್‍ರವರಷ್ಟೆ ಚೆನ್ನಾಗಿ ಹಾಡಿ ಎಲ್ಲರನ್ನು ತಲೆದೂಗಿಸುತ್ತಿದ್ದರು. ಸಾಂಸ್ಕøತಿಕ ಲೋಕದ ದ್ರುವತಾರೆಯಂತಿದ್ದ ಟಿ.ಚಂದ್ರಪ್ಪ ಕಂಜರ ಬಡಿದುಕೊಂಡು ಹಾಡುತ್ತಿದ್ದರೆ ಮೈ ರೋಮಾಂಚನವಾಗುತ್ತಿತ್ತು. ವಿಧಿ ಕರೆದಾಗ ಎಲ್ಲರೂ ಒಂದಲ್ಲ ಒಂದು ದಿನ ಹೋಗಲೇಬೇಕು ಎಂದು ನೋವಿನಿಂದ ನುಡಿದರು.

ಜಾನಪದ ಮತ್ತು ಸಾಂಸ್ಕøತಿಕ ಲೋಕಕ್ಕೆ ದೊಡ್ಡ ಆಸ್ತಿಯಾಗಿದ್ದ ಟಿ.ಕಾಲ್ಕೆರೆ ಚಂದ್ರಪ್ಪನಿಗೆ ಅನೇಕ ಅವಕಾಶಗಳು ಸಿಗಬೇಕಿತ್ತು. ಚಂದ್ರೋದಯ ಕಲಾ ಮತ್ತು ಸಾಂಸ್ಕøತಿಕ ಸಂಘ ಕಟ್ಟಿಕೊಂಡಿದ್ದ ಅವರ ನೆನಪಿಗಾಗಿ ಪ್ರತಿ ವರ್ಷವೂ ಗಾಯನದಲ್ಲಿ ಸಾಧನೆ ಮಾಡುತ್ತಿರುವವರನ್ನು ಗುರುತಿಸಿ ಸನ್ಮಾನಿಸಬೇಕೆಂದು ಮೃತರ ಕುಟುಂಬದವರಲ್ಲಿ ಡಾ.ವಿ.ಬಸವರಾಜ್ ಮನವಿ ಮಾಡಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ ಸಂಬಂಧವೆಂದರೆ ಕೇವಲ ರಕ್ತಸಂಬಂಧವಷ್ಟೆ ಅಲ್ಲ. ಹೃದಯಕ್ಕೆ ಯಾರು ಹತ್ತಿರವಾಗಿರುತ್ತಾರೋ ಅಂತಹವರು ಸಂಬಂಧಿಕರಿಗಿಂತ ಹೆಚ್ಚು. ಈ ನಿಟ್ಟಿನಲ್ಲಿ ಜಾನಪದ ಹಾಡುಗಾರ ಶಿಕ್ಷಕ ಟಿ.ಕಾಲ್ಕೆರೆ ಚಂದ್ರಪ್ಪ ತಮ್ಮ ಕಂಚಿನ ಕಂಠದ ಮೂಲಕ ಎಲ್ಲರ ಹೃದಯಕ್ಕೂ ಹತ್ತಿರದವರಾಗಿದ್ದರು ಎಂದು ಸ್ಮರಿಸಿದರು.

ನಾಡಗೀತೆ, ರಾಷ್ಟ್ರಗೀತೆ, ಜಾನಪದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡಿ ಜಾನಪದ ಲೋಕಕ್ಕೆ ತನ್ನದೆ ಆದೆ ಕೊಡುಗೆ ನೀಡಿದ್ದ ಶಿಕ್ಷಕ ಟಿ.ಕಾಲ್ಕೆರೆ ಚಂದ್ರಪ್ಪನವರ ಅಗಲಿಕೆ ಎಲ್ಲರಿಗೂ ದುಃಖ ತಂದಿದೆ. ನೂತನವಾಗಿ ರಚಿಸಿಕೊಂಡಿರುವ ಜಿಲ್ಲಾ ಕಲಾವಿದರ ಒಕ್ಕೂಟವನ್ನು ಮುನ್ನಡೆಸಿಕೊಂಡು ಹೋಗಬೇಕಾಗಿರುವುದರಿಂದ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿದ ಕೆ.ಎಂ.ವೀರೇಶ್ ಸ್ಥಳದಲ್ಲಿಯೇ ಐದು ಸಾವಿರ ರೂ.ಗಳ ನೆರವನ್ನು ಘೋಷಿಸಿ ಇನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ ಇದರಿಂದ ಸಂಗ್ರಹವಾಗುವ ಹಣವನ್ನು ಕಲಾವಿದರ ಕಷ್ಟ, ಸಮಸ್ಯೆಗಳಿಗೆ ಬಳಸಬೇಕು. ಆಗ ಕಲಾವಿದರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಡಾ.ಎಂ.ಮಲ್ಲಣ್ಣ, ನಿವೃತ್ತ ಪ್ರಾಚಾರ್ಯ ಪ್ರೊ.ಎ.ವಿ.ನುಂಕಪ್ಪ, ಸಾಮಾಜಿಕ ಹೋರಾಟಗಾರ ಆರ್.ಶೇಷಣ್ಣಕುಮಾರ್, ಚಲನಚಿತ್ರ ನಿರ್ದೇಶಕ ಜಿ.ಶ್ರೀನಿವಾಸ್‍ಮೂರ್ತಿ, ವಕೀಲರ ಸಂಘದ ಮಾಜಿ ಅಧ್ಯಕ್ಷರುಗಳಾದ ಸಿ.ಶಿವುಯಾದವ್, ಎಸ್.ವಿಜಯಕುಮಾರ್, ಆಯಿತೋಳು ವಿರುಪಾಕ್ಷಪ್ಪ, ಕಾಲ್ಕೆರೆ ಚಂದ್ರಪ್ಪನವರ ಪತ್ನಿ ಇನ್ನು ಅನೇಕರು ವೇದಿಕೆಯಲ್ಲಿದ್ದರು.

ಜಾನಪದ ಹಾಡುಗಾರರಾದ ಹರೀಶ್, ಜಿ.ಓ.ಮುರಾರ್ಜಿ, ಶ್ರೀಮತಿ ತ್ರಿವೇಣಿ ತಂಡದವರು ಜಾನಪದ ಹಾಡುಗಳನ್ನು ಹಾಡಿ ಶಿಕ್ಷಕ ಟಿ.ಚಂದ್ರಪ್ಪ ಕಾಲ್ಕೆರೆಗೆ ನುಡಿನಮನ ಸಲ್ಲಿಸಿದರು.

ಪೊಲೀಸ್ ಮನು, ಶ್ರೀನಿವಾಸ್ ಮಳಲಿ, ದಾದಾಪೀರ್, ಉದಯರಾವ್, ಕಣಿವೆಮಾರಮ್ಮ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ, ಜಯಣ್ಣ, ಚಂದ್ರಪ್ಪ ಸೇರಿದಂತೆ ಟಿ.ಕಾಲ್ಕೆರೆ ಚಂದ್ರಪ್ಪನವರ ಅಪಾರ ಅಭಿಮಾನಿಗಳು ನುಡಿನಮನದಲ್ಲಿ ಪಾಲ್ಗೊಂಡು ಆತ್ಮಕ್ಕೆ ಶಾಂತಿ ಕೋರಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೊಳಲ್ಕೆರೆ | ಸ್ನೇಹ ಪಬ್ಲಿಕ್ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಸುದ್ದಿಒನ್, ಹೊಳಲ್ಕೆರೆ, ಜುಲೈ. 26 : ನಮ್ಮ ರಾಷ್ಟ್ರಧ್ವಜವು ಗಾಳಿಯಿಂದ ಹಾರುತ್ತಿಲ್ಲ ಬದಲಾಗಿ ಅದು ಹಾರುತ್ತಿರುವುದು ಈ ದೇಶಕ್ಕಾಗಿ ಮಡಿದ ವೀರ ಯೋಧರ ಸೈನಿಕರ ಉಸಿರಿನಿಂದ ಎಂದು ಸಂಸ್ಥೆಯ ಕಾರ್ಯದರ್ಶಿ ಜಿ.ಎಸ್. ವಸಂತ್ ಹೇಳಿದರು.

ಖ್ಯಾತ ನಿರೂಪಕಿ ದಿವ್ಯಾ ಆಲೂರು ತಂದೆ‌ ನಿಧನ : ತಾವೇ ಅಂತ್ಯಸಂಸ್ಕಾರ ಮಾಡಿ ಹೇಳಿದ್ದೇನು..?

ಬೆಂಗಳೂರು : ಪೋಷಕರ ಅಂತ್ಯ ಸಂಸ್ಕಾರದ ವಿಚಾರದಲ್ಲಿ ಈಗಲೂ ಮನಸ್ಥಿತಿ ಎಲ್ಲಾ ಕಡೆಯಲ್ಲೂ ಬದಲಾಗಿಲ್ಲ. ತಮಗೆ ಗಂಡು ಮಕ್ಕಳು ಇಲ್ಲದೆ ಇದ್ದರು, ಅಣ್ಣತಮ್ಮಂದಿರಿಗೆ ಇರುವ ಗಂಡು ಮಕ್ಕಳಿಂದಾನೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಸತ್ತವರಿಗೆ ಅಂತ್ಯ

ಖ್ಯಾತ ನಿರೂಪಕಿ ದಿವ್ಯಾ ಆಲೂರು ತಂದೆ‌ ನಿಧನ : ತಾವೇ ಅಂತ್ಯಸಂಸ್ಕಾರ ಮಾಡಿ ಹೇಳಿದ್ದೇನು..?

ಪೋಷಕರ ಅಂತ್ಯ ಸಂಸ್ಕಾರದ ವಿಚಾರದಲ್ಲಿ ಈಗಲೂ ಮನಸ್ಥಿತಿ ಎಲ್ಲಾ ಕಡೆಯಲ್ಲೂ ಬದಲಾಗಿಲ್ಲ. ತಮಗೆ ಗಂಡು ಮಕ್ಕಳು ಇಲ್ಲದೆ ಇದ್ದರು, ಅಣ್ಣತಮ್ಮಂದಿರಿಗೆ ಇರುವ ಗಂಡು ಮಕ್ಕಳಿಂದಾನೇ ಅಂತ್ಯ ಸಂಸ್ಕಾರ ನಡೆಸುತ್ತಾರೆ. ಸತ್ತವರಿಗೆ ಅಂತ್ಯ ಸಂಸ್ಕಾರ ಮಾಡಬೇಕಾದವರು

error: Content is protected !!