ಬೆಂಗಳೂರು: ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರ ಕೊನೆಯ ಕ್ಯಾಬಿನೆಟ್ ಮೀಟಿಂಗ್ ನಡೆದಿದೆ. ಈ ಸಭೆಯಲ್ಲಿ ಒಂದಷ್ಟು ಮಹತ್ತರವಾದ ತೀರ್ಮಾನವನ್ನು ಸಿಎಂ ಬೊಮ್ಮಾಯಿ ಅವರು ಕೈಗೊಂಡಿದ್ದಾರೆ. ಅದರಲ್ಲೂ SC/ST ಇನ್ನರ್ ರಿಸರ್ವೇಶನ್ ಸೇರಿದಂತೆ ಅದರಲ್ಲೂ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಂತ ಪಂಚಮಸಾಲಿ, ಒಕ್ಕಲಿಗ ಸಮುದಾಯದ ಮೀಸಲಾತಿ ವಿಚಾರಕ್ಕೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.
ಇದರ ಜೊತೆಗೆ ಮುಸ್ಲಿಂರಿಗೆ ಇದ್ದಂತ 2B ಮೀಸಲಾತಿಯನ್ನು ರದ್ದು ಮಾಡುವ ನಿರ್ಧಾರವನ್ನು ಸರ್ಕಾರ ಮಾಡಿದೆ ಎನ್ನಲಾಗಿದೆ. ಬಹುತೇಕ ಇದು ಖಚಿತವಾದಂತೆ ಇದೆ. ಇದು ಮುಸ್ಲಿಂರಿಗೆ ಬಾರೀ ಆಘಾತ ಉಂಟು ಮಾಡಿದೆ. ಈ ಹಿಂದೆಯೇ ರಾಜ್ಯ ಸರ್ಕಾರ ನೇಮಿಸಿದ್ದ ಹಿಂದುಳಿದ ವರ್ಗಗಳ ಎಲ್ಲಾ ಆಯೋಗಗಳು ಮುಸ್ಲಿಂರನ್ನು ತೀವ್ರ ಹಿಂದುಳಿದ ಸಮುದಾಯ ಎಂದು ಗುರತಿಸಿದ್ದವು.
ಕಾಂತರಾಜು ಆಯೋಗವೂ ಮುಸ್ಲಿಂ ಜನಸಂಖ್ಯೆ ಬಗ್ಗೆ ಮಾಹಿತಿ ನೀಡಿತ್ತು. ಮುಸ್ಲಿಂರ ಜನಸಂಖ್ಯೆ ಶೇ. 16ರಷ್ಟಿದೆ ಎಂದು ವರದಿ ತಿಳಿಸಿತ್ತು. ಅಲ್ಲದೆ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ಹೆಚ್ಚಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. 2B ಮೀಸಲಾತಿಯಡಿಯಲ್ಲಿ ಶೇ.4 ಇದೆ. ಇದರಿಂದ 8ಕ್ಕೆ ಏರಿಕೆ ಮಾಡಬೇಕೆಂದು ಹೇಳಿತ್ತು.