ಶಿವಮೊಗ್ಗ: ಒಬ್ಬನೇ ಮಗ.. ತಂದೆ ಟೈಲರ್.. ವಯಸ್ಸಿನ್ನೂ 24 ವರ್ಷ. ಆದ್ರೆ ಇಂದು ಬಾರದ ಲೋಕಕ್ಕೆ ಹರ್ಷ ಪಯಣ ಬೆಳೆಸಿದ್ದಾರೆ. ಬರ್ಬರವಾಗಿ ಹತ್ಯೆಯಾದ ಮಗನ ಸಾವಿಗೆ ನ್ಯಾಯ ಕೋರಿ ತಾಯಿ ಪದ್ಮಾ ಪೊಲೀಸರಿಗೆ ದೂರು ನೀಡಿದ್ದಾರೆ.

ಮುಸ್ಲಿಂ ಹುಡುಗರಿಗೆ ನನ್ನ ಮಗನನ್ನ ಕಂಡರೆ ಆಗ್ತಾ ಇರ್ಲಿಲ್ಲ. ಆಲಿಫ್ ಮತ್ತು ಪಠಾಣ್ ಸಹಚರರಿಂದ ಬೆದರಿಕೆ ಇತ್ತು. ಕೊಲೆ ಮಾಡುತ್ತೇವೆ ಎಂದು ಆಗಾಗ ಹೇಳ್ತಾನೆ ಇದ್ರು. ಆಗ ನಾನು ನನ್ನ ಮಗನಿಗೆ ಹೇಳಿದ್ದೆ. ಯಾರ ತಂಟೆಗೂ ಹೋಗಬೇಡ ಎಂದು. ಅವನು ಹೇಳಿದ್ದ ನನ್ನ ಪಾಡಿಗೆ ನಾನಿರ್ತೇನೆ ಯಾರ ಸುದ್ದಿಗೂ ಹೋಗಲ್ಲ ಎಂದು. ನನಗೆ ಮಾತು ಕೂಡ ಕೊಟ್ಟಿದ್ದ ಎಂದು ಆ ತಾಯಿ ಹೇಳಿದ್ದಾರೆ. ಇನ್ನು ಮೃತ ಹರ್ಷ ಅವರ ತಾಯಿಯ ದೂರಿನ ಆಧಾರದ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ.

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಕೂಡ ಮೂವರನ್ನ ಅರೆಸ್ಟ್ ಮಾಡಿದ್ದಾರೆ. ಐದು ಜನ ಸೇರಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಹೀಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದು, ಉಳಿದ ಆರೋಪಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.

