ಶಾರುಖ್ ಖಾನ್ ಮಗ ಆರ್ಯನ್ ಖಾನ್ ವಿರುದ್ಧ ದೂರು : ಘಟನೆ ಬಗ್ಗೆ ವಿವರಿಸಿದ ಝೈದ್ ಖಾನ್

ಬೆಂಗಳೂರು: ಶಾರುಖ್ ಖಾನ್ ಮಗ ಆರ್ಯನ್ ಖಾನ್ ವಿವಾದಗಳ‌ ಮೂಲಕವೇ ಸುದ್ದಿಯಾದವರು. ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಕೆಟ್ಟದಾಗಿ ಬೆರಳಿನ ಸನ್ನೆ ಮಾಡಿದ್ದರು. ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಜನರಿಗೆ ಮಧ್ಯದ ಬೆರಳು ತೋರಿಸಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರ್ಯನ್ ಖಾನ್ ವಿರುದ್ಧ ಎಲ್ಲರೂ ಕೋಪ ಹೊರ ಹಾಕಿದ್ದರು. ಘಟನೆ ಸಂಬಂಧ ದೂರು ಕೂಡ ದಾಖಲಾಗಿತ್ತು. ಹುಸೇನ್ ಎಂಬುವವರು ಡಿಜಿ, ಐಜಿಪಿ ಮತ್ತು ಪೊಕೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ.

ಆರ್ಯನ್ ಖಾನ್ ದುರ್ವರ್ತನೆ ತೋರಿದ್ದಾರೆ. ಮಹಿಳೆಯರಿಗೆ ಅಗೌರವ ತಂದಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಚಾಮರಾಜಪೇಟೆಯಲ್ಲಿ ಇದೇ ರೀತಿ ಪ್ರಕರಣವಾಗಿತ್ತು. ಆ ವೇಳೆ ಚಾಮರಾಜಪೇಟೆ ವ್ಯಕ್ತಿ ವಿರುದ್ಧ ಕೇಸ್ ದಾಖಲಿಸಿ ತನಿಖೆ ಮಾಡಬೇಕು ಎಂದು ವಕೀಲರು ಮನವಿ ಮಾಡಿಕೊಂಡಿದ್ದರು. ಈ ಸಂಬಂಧ ಝೈದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಆರ್ಯನ್ ಖಾನ್ ನನಗೆ ಹಲವು ವರ್ಚಗಳಿಂದ ಗೊತ್ತು. ನಾವಿಬ್ಬರೂ ಒಂದೇ ಕಡೆ ನಟನೆ ಕಲಿತಿದ್ದೇವೆ‌. ಅವನು ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದ. ಹೀಗಾಗಿ ಒಂದು ಓಪನಿಂಗ್ ಸೆರಮನಿಗೆ ಹೋಗಿದ್ದೆವು. ಅಲ್ಲಿ ನಾವೂ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಜನ ಸೇರಿದ್ದರು. ಇಷ್ಟು ಜನರಿದ್ದರೆ ನನ್ನಿಂದ ಸಾಧ್ಯವಿಲ್ಲ ಎಂದು ಆರ್ಯನ್ ಹೇಳಿದ. ಅವನ ಮ್ಯಾನೇಜರ್ ಜನರನ್ನ ಚದುರಿಸುತ್ತೇನೆ ಎಂದು ಹೋದ. ಎಷ್ಟು ಹೊತ್ತಾದರೂ ಬರಲಿಲ್ಲ. ಆಗ ನಾವೂ ಬಾಲ್ಕನಿಗೆ ಹೋಗಿ ಏನಾಗಿದೆ ಎಂದು ನೋಡಿದೆವು. ಆಗ ಅವನು ಫ್ರೆಂಡ್ ಕಮ್ ಮ್ಯಾನೇಜರ್ ಗೆ ಆರ್ಯನ್ ಹಾಗೆ ತೋರಿಸಿದ ಎಂದಿದ್ದಾರೆ.

Share This Article
Enable Notifications OK No thanks