ದಾವಣಗೆರೆ; ರಾಜ್ಯದಲ್ಲಿ ಇನ್ನೇನು ತಾಲೂಕು, ಜಿಲ್ಲಾ ಪಂಚಾಯತಿಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ಸಂಬಂಧ ರೇಣುಕಾಚಾರ್ಯ ಅವರು ಮಾತನಾಡಿ, ಹಕವರಿಗೆ ಟಾಂಗ್ ಅನ್ನು ನೀಡಿದ್ದಾರೆ. ಮುಂದಿನ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗೆ ಬಿವೈ ವಿಜಯೇಂದ್ರ ಅವರದ್ದೇ ಸಾರಥ್ಯ ಎಂದು ಹೇಳಿದ್ದಾರೆ.

ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯೋದು ಸತ್ಯ. ಅವರ ನೇತೃತ್ವದಲ್ಲಿಯೇ ಮುಂಬರುವ ತಾಲೂಜು, ಜಿಲ್ಲಾ ಹಾಗೂ ವಿಧಾನಸಭಾ ಚುನಾವಣೆಗಳನ್ನ ಎದುರಿಸುತ್ತೇವೆ ಎಂದಿದ್ದಾರೆ.

ಆದರೆ ಬಿಜೆಪಿಯಲ್ಲಿನ ಒಳ ಜಗಳ ಬೀದಿಗೆ ಬಂದು ನಿಂತಿದೆ. ಅದರಲ್ಲೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿಯೇ ಬಿಎಸ್ ಯಡಿಯೂರಪ್ಪ ಮತ್ತು ಮಕ್ಕಳ ವಿರುದ್ಧ ಹರಿಹಾಯುತ್ತಿದ್ದಾರೆ. ಈ ಬಗ್ಗೆ ಶಿಸ್ತು ಸಮಿತಿ ನೋಟೀಸ್ ಕೊಟ್ಟರೂ ಡೋಂಟ್ ಕೇರ್ ಎಂಬಂತೆ ವರ್ತಿಸುತ್ತಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರೇಣುಕಾಚಾರ್ಯ ಅವರು, ಯತ್ನಾಳ್ ಅವರದ್ದು ಲೂಸ್ ಟಾಕ್. ಬಿಜೆಪಿಯವರನ್ನು ನಿಂದಿಸುವುದೇ ಅವರ ಕೆಲಸವಾಗಿದೆ. ಪಕ್ಷದ ಮೇಲೆ ಅಭಿಮಾನವಿದ್ದಿದ್ದರೆ ಬೀದಿಯಲ್ಲಿ ನಿಂತು ಜಗಳವಾಡುತ್ತಿರಲಿಲ್ಲ.
ಬಿಜೆಪಿಯ ಶಿಸ್ತು ಸಮಿತಿ ನೋಟೀಸ್ ಕೊಟ್ಟಾಗ ಅದನ್ನೇ ಫೇಕ್ ಎಂದರು. ವಿಜಯೇಂದ್ರ ಬಗ್ಗೆ ಮಾತನಾಡುವ ಯಾವ ನೈತಿಕತೆಯೂ ಇಲ್ಲ ಎಂದಿದ್ದಾರೆ. ಈ ಮೊದಲೆಲ್ಲಾ ಯತ್ನಾಳ್ ಅವರು ಬಿಎಸ್ವೈ ಫ್ಯಾಮಿಲಿ ಬಗ್ಗೆ ಮಾತಾಡ್ತಾ ಇದ್ರು. ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕು ಎನ್ನುತ್ತಿದ್ದರು. ಆದರೆ ಈಗ ಅವರ ಜೊತೆಗೆ ಬಣವೇ ಸೇರಿಕೊಂಡಿದೆ. ಒಂದಷ್ಟು ಜನ ವಿಜಯೇಂದ್ರ ವಿರುದ್ಧ ಕಿಡಿಕಾರುತ್ತಿದ್ದು, ರಾಜ್ಯಾಧ್ಯಕ್ಷ ಸ್ಥಾನದ ಸ್ಪರ್ಧೆಯೊಡ್ಡುತ್ತಿದ್ದಾರೆ. ಆದರೆ ಹೈಕಮಾಂಡ್ ಈ ಬಾರಿಯೂ ವಿಜಯೇಂದ್ರ ಅವರನ್ನೇ ಮುಂದುವರೆಸುವ ಮನಸ್ಸು ಮಾಡಿದೆ ಎನ್ನಲಾಗಿದೆ.


