ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಸೋಮವಾರದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿತಗೊಳಿಸಿವೆ.
19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ₹ 171.50 ಕಡಿತಗೊಳಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
Oil marketing companies have revised the prices of commercial LPG gas cylinders. The rate of 19 KG commercial LPG gas cylinders has been slashed by Rs 171.50 with effect from today. Delhi retail sales price of 19kg commercial LPG cylinder is Rs 1856.50 from today: Source pic.twitter.com/fFtlLsaygh
— ANI (@ANI) May 1, 2023
ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಮಾರಾಟದ ಪರಿಷ್ಕೃತ ಬೆಲೆ ಈಗ ₹ 1,856.50 ಆಗಿದ್ದರೆ, ಮುಂಬೈನಲ್ಲಿ ₹ 1,808, ಕೋಲ್ಕತ್ತಾದಲ್ಲಿ, ₹ 1,960.50, ಚೆನ್ನೈನಲ್ಲಿ ₹ 2,021 ಆಗಿರುತ್ತದೆ.
ಗೃಹಬಳಕೆಯ LPG ಸಿಲಿಂಡರ್‌ಗಳಿಗೆ ಹೋಲಿಸಿದರೆ, ವಾಣಿಜ್ಯ ಅನಿಲದ ಬೆಲೆಗಳು ಹೆಚ್ಚು ಏರಿಳಿತಗೊಳ್ಳುತ್ತವೆ. ಕಳೆದ ತಿಂಗಳು , 2024 ರ ಆರ್ಥಿಕ ವರ್ಷದ ಮೊದಲ ದಿನದಂದು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ದರವನ್ನು ₹ 92 ರಷ್ಟು ಕಡಿತಗೊಳಿಸಲಾಯಿತು.
ಮಾರ್ಚ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ₹ 350.50 ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ₹ 50 ರಷ್ಟು ಹೆಚ್ಚಿಸಲಾಗಿತ್ತು. ಜನವರಿಯಲ್ಲಿ ₹ 25 ರಷ್ಟು ಹೆಚ್ಚಿಸಲಾಗಿತ್ತು .
2022 ರಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ನಾಲ್ಕು ಬಾರಿ ಹೆಚ್ಚಿಸಲಾಗಿತ್ತು ಮತ್ತು ಮೂರು ಬಾರಿ ಇಳಿಕೆ ಮಾಡಲಾಗಿತ್ತು.
ಕಳೆದ ವರ್ಷ ಸೆಪ್ಟೆಂಬರ್ 1ರಂದು ವಾಣಿಜ್ಯ ಸಿಲಿಂಡರ್‌ಗಳ ಬೆಲೆ ₹ 91.50 ಇಳಿಕೆಯಾಗಿದ್ದರೆ , ಆಗಸ್ಟ್‌ನಲ್ಲಿ ₹ 36 ಇಳಿಕೆಯಾಗಿತ್ತು . ಜುಲೈನಲ್ಲಿ ₹ 8.5ರಷ್ಟು ಕಡಿತಗೊಳಿಸಲಾಗಿತ್ತು.