ನವದೆಹಲಿ: ಹೊಸ ವರ್ಷದ ಖುಷಿಯಲ್ಲಿರುವವರಿಗೆ ತೈಲ ಕಂಪನಿ ಶಾಕ್ ನೀಡಿದೆ. ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಒಮ್ಮೆಲೆ 25 ರುಪಾಯಿ ಹೆಚ್ಚಳ ಮಾಡಿದ್ದು, ಇಂದಿನಿಂದಾನೇ ಜಾರಿಗೆ ಬರಲಿದೆ. ಆದರೆ ಗೃಹ ಬಳಕೆ ಸಿಲಿಂಡರ್ ಮೇಲೆ ಯಾವುದೇ ತರದ ಏರಿಕೆ ಮಾಡಿಲ್ಲ.
ವಾಣಿಜ್ಯ ಬಳಕೆ ಸಿಲಿಂಡರ್ ಮೇಲೆ ಪದೇ ಪದೇ ಏರಿಕೆಯಾಗುತ್ತಿದ. ಕಳೆದ ವರ್ಷವೂ ವಾಣಿಜ್ಯ ಬಳಕೆ ಸಿಲಿಂಡರ್ ಮೇಲೆ 153 ರೂಪಾಯಿ ಏರಿಕೆ ಮಾಡಲಾಗಿತ್ತು. ವರ್ಷದ ಮೊದಲ ದಿನವೇ 25 ರೂಪಾಯಿ ಏರಿಕೆ ಮಾಡಿದೆ. ವಾಣಿಜ್ಯ ಬಳಕೆ ಸಿಲಿಂಡರ್ ಗಳು ಏರಿಕೆಯಾದರೆ ಹೋಟೆಲ್, ರೆಸ್ಟೋರೆಂಟ್ ಗಳ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ಗ್ಯಾಸ್ ಬಳಕೆಮಾಡುವ ಆಟೋ, ಕ್ಯಾಬ್ ಗಳ ಬಳಕೆಯೂ ಹೆಚ್ಚಾಗಬಹುದು.ಈ ಕಾರಣಕ್ಕೆ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ.
2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೃಹ ಬಳಕೆ ಸಿಲಿಂಡರ್ ಬೆಲೆ 410 ರೂಪಾಯಿಯಿಂದ 1000ಕ್ಕೆ ಏರಿಕೆಯಾಗಿದೆ. ಇಂಧನ ಬೆಲೆಗಳಲ್ಲಿ ತ್ವರಿತ ಏರಿಕೆಯೊಂದಿಗೆ ಅಗತ್ಯ ವಸ್ತುಗಳ ದರಗಳನ್ನು ಹೆಚ್ಚಿಸಿದೆ. ಬೆಲೆಗಳ ಹೆಚ್ಚಳದಿಂದ ಆಗುವ ಎಲ್ಲಾ ಬಗೆಯ ಪರಿಣಾಮವನ್ನು ನಿಭಾಯಿಸಲು ಕುಟುಂಬಗಳು ಹೆಣಗಾಡುತ್ತಿವೆ. ಇಂಧನ ಬೆಲೆ ಏರಿಕೆಯ ಬಗ್ಗೆ ಪ್ರಶ್ನಿಸಿದಾಗ ಸರ್ಕಾರವೂ ಹಲವಾರು ಸಂದರ್ಭದಲ್ಲಿ ಕಚ್ಚಾ ತೈಲದ ಅಂತರಾಷ್ಟ್ರೀಯ ದರಗಳನ್ನು ಎತ್ತಿ ತೋರಿಸುತ್ತದೆ. ಈಗ ಅಂತರಾಷ್ಟ್ರೀಯ ದರಗಳು ಇಳಿಕೆಯಾಗಿದ್ದರು ದರ ಏಕೆ ಕಡಿತಗೊಳಿಸಿಲ್ಲ ಎಂದು ಪ್ರಶ್ನಿಸಿದೆ.