ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕನನ್ನಾಗಿ ಹೈಕಮಾಂಡ್ ಬಿ ಕೆ ಹರಿಪ್ರಸಾದ್ ಅವರನ್ನ ನೇಮಕ ಮಾಡಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಸ್ವಲ್ಪ ಅಸಮಾಧಾನದ ಹೊಗೆಯಾಡಿದೆ. ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಇದೇ ವೇಳೆ ನಾನು ಕಾಂಗ್ರೆಸ್ ತೊರೆಯೋದಾಗಿ ಹೇಳಿದ್ದಾರೆ.
ಇಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅವೆಉ ಇಂದು ಈ ಬಗ್ಗೆ ಮಾತನಾಡಿದ್ದು, ಇಬ್ರಾಹಿಂ ಅವರು ದೊಡ್ಡವರಿದ್ದಾರೆ. ಅವರ ಬಗ್ಗೆ ನನಗೆ ಗೌರವವಿದೆ. ನಾನಿಲ್ಲಿ ಬಂದಿರೋದು ಆರ್ ಎಸ್ ಎಸ್ ವಿರುದ್ಧ ಹೋರಾಟ ಮಾಡೋದಕ್ಕೆ ಎಂದಿದ್ದಾರೆ.
ಜಾತಿ ಧರ್ಮ ಮೀರಿ ಹೋರಾಟ ಮಾಡುವ ಉದ್ದೇಶ ಹೊಂದಿರುವವನು ನಾನು. ಸಚಿವನಾಗಲು ಇಲ್ಲಿಗೆ ಬಂದಿರೋದಲ್ಲ. ಜೊತೆಗೆ ಯಾರಿಗೂ ಪರ್ಯಾ ನಾಯಕತ್ವನಾಗಲು ಕೂಡ ಬಂದಿಲ್ಲ. ನನ್ನ ಉದ್ದೇಶ ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಟ್ರಾಂಗ್ ಆಗ್ಬೇಕು. ಆರ್ ಎಸ್ ಎಸ್ ವಿರುದ್ಧ ಹೋರಾಟ ಮಾಡಲು ಬಂದಿದ್ದೇನೆ ಎಂದಿದ್ದಾರೆ.