ಬೆಳಗಾವಿ: ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಚುನಾವಣೆ ನಡೆಯುವುದು ಸಹಜ. ಈ ಚುನಾವಣೆ ಗಲಾಟೆಗೆ ದಾರಿ ಮಾಡಿಕೊಡಬಾರದು. ಆದರೆ ಬೀಮ್ಸ್ ನಲ್ಲಿ ಚುನಾವಣಾ ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದಿದೆ. ಇದರಿಂದಾಗಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮೇ 4 ರಂದು ನಡೆದ ಘಟನೆ ಇದಾಗಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚುನಾವಣೆ ವಿಚಾರದಲ್ಲಿ ವಸತಿ ನಿಲಯದಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಈ ಗಲಾಟೆಯಲ್ಲಿ ನಾಲ್ಕನೇ ವರ್ಷದ ವಿದ್ಯಾರ್ಥಿ ಬುರಾರಮ್ ಗೋಧರೆ ಮೇಲೆ ಹಲ್ಲೆ ನಡೆದಿದೆ. ಮೂಗು, ಕಿವಿ, ಬೆರಳಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ವಿದ್ಯಾರ್ಥಿಗಳ ಗಲಾಟೆ ಕಂಡು ಬೀಮ್ಸ್ ಆಡಳಿತಾಧಿಕಾಯಿಂದ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ಗಲಾಟೆ ಮಾಡಿಕೊಂಡ ಹದಿನೈದು ಜನ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಇನ್ನು ದೂರಿನ ಆಧಾರದ ಮೇಲೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.