Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

RCB ಅಭಿಮಾನಿಗಳಿಂದಾನೇ ಟೀಂ ಖರೀದಿಸಲು ಹಣ ಸಂಗ್ರಹ : ಹಾಗಾದ್ರೆ ಒಬ್ಬ ಅಭಿಮಾನಿ ಎಷ್ಟು ಹಣ ಹಾಕಬೇಕು..?

Facebook
Twitter
Telegram
WhatsApp

ಬೆಂಗಳೂರು: ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಆರ್ಸಿಬಿ ಎಡವಿದೆ ಎಂಬ ಬೇಸರ ಅಭಿಮಾನಿಗಳಿಗೆ ಕಾಡುವುದಕ್ಕೆ ಶುರುವಾಗಿದೆ. ಆ ಬೇಸರವನ್ನ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲೂ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿಯೇ ಆಟಗಾರರನ್ನು ಬಿಟ್ಟುಕೊಟ್ಟಿದೆ. ಇನ್ನು ಈ ಸಲವೂ ಕಪ್ ಗೆದ್ದಂಗೆ ಎಂಬ ಬೇಸವರನ್ನು ಹೊರ ಹಾಕಿದ್ದಾರೆ. ಇದರ ಬೆನ್ನಲ್ಲೇ ತಂಡವನ್ನು ನಾವೇ ಕೊಂಡುಕೊಂಡರೆ ಹೇಗೆ ಎಂಬ ಪ್ಲ್ಯಾನ್ ಕೂಡ ಹಾಕಿಕೊಂಡಿದ್ದಾರೆ. ಅದಕ್ಕೆ ಈಗ ಹಣ ಸಂಗ್ರಹಕ್ಕೆ ಮುಂದಾಗಿದ್ದಾರೆ. ಅಭಿಮಾನಿಗಳೇ ಸೇರಿ ಅಭಿಮಾನಿಗಳೇ ತಂಡ ತೆಗೆದುಕೊಳ್ಳುವ ಐಡಿಯಾ ಇದು.

ಈ ಬಗ್ಗೆ ಈಗಾಗಲೇ ಆಲ್ ಇಂಡಿಯಾ ಆರ್ಸಿಬಿ ಟೀಂ ಫ್ಯಾನ್ಸ್ ಅಸೋಸಿಯೇಷನ್ ಪೋಸ್ಟರ್ ಹಂಚುತ್ತಿದ್ದಾರೆ. ಈಗ ಮಂಡ್ಯದ ಮಳವಳ್ಳಿ ಅಭಿಮಾನಿಗಳ ಪೋಸ್ಟರ್ ವೈರಲ್ ಆಗಿದೆ. ಟೀಮೂ ನಮ್ದೆ.. ಕಪ್ಪು ನಮ್ಮದೇ ಎಂಬ ಘೋಷ ವಾಕ್ಯದೊಂದಿಗೆ ಈ ಪೋಸ್ಟರ್ ನ ಬಿಟ್ಟಿದ್ದಾರೆ.

ಈ ಬಾರಿಯ ಖರೀದಿಯಲ್ಲಿ ಕೆ.ಎಲ್.ರಾಹುಲ್ ಸೇರಿದಂತೆ ಒಳ್ಳೊಳ್ಳೆ ಆಟಗಾರರನ್ನ ಕೈಬಿಡಲಾಗಿದೆ. ಹೀಗಾಗಿ ಅಭಿಮಾನಿಗಳು ಈ ನಿರ್ಧಾರಕ್ಕೆ ಬಂದಿದ್ದಾರೆ. ಇದು ಅಷ್ಟು ಸುಲಭದ ಕೆಲಸವಲ್ಲದೆ ಇದ್ದರು ಸಾಕಷ್ಟು ಗಮನ ಸೆಳೆಯುತ್ತಿದೆ. 10 ಲಕ್ಷ ಆರ್ಸಿಬಿ ಅಭಿಮಾನಿಗಳಿಂದ ತಲಾ 10 ಸಾವಿರ ರೂಪಾಯಿಯಂತೆ ಕಲೆಕ್ಟ್ ಮಾಡುವ ಪ್ಲ್ಯಾನ್ ಇದಾಗಿದೆ. ಈ ಮೂಲಕ ಸಾವಿರ ಕೋಟಿ ಹಣ ಸಂಗ್ರಹವಾಗುತ್ತದೆ. ಈ ಹಣದಲ್ಲಿ ತಮಗೆ ಬೇಕಾದ ಆಟಗಾರರನ್ನು ಕೊಂಡುಕೊಳ್ಳೋಣಾ ಅಂತಾನೇ ಅಭಿಮಾನಿಗಳು ಯೋಜನೆ ರೂಪಿಸಿದ್ದಾರೆ. ಒಂದು ವೇಳೆ ಇದು ಸಾಧ್ಯವಾಗಿ ಬಿಟ್ಟರೆ, ಹಣ ಸಂಗ್ರಹವೂ ಆಗಿ ಬಿಟ್ಟರೆ ಅಭಿಮಾನಗಳ ಸಂಭ್ರಕ್ಕೆ ಪಾರವೇ ಇರುವುದಿಲ್ಲ ನೋಡಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

RCB ಅಭಿಮಾನಿಗಳಿಂದಾನೇ ಟೀಂ ಖರೀದಿಸಲು ಹಣ ಸಂಗ್ರಹ : ಹಾಗಾದ್ರೆ ಒಬ್ಬ ಅಭಿಮಾನಿ ಎಷ್ಟು ಹಣ ಹಾಕಬೇಕು..?

ಬೆಂಗಳೂರು: ಹರಾಜು ಪ್ರಕ್ರಿಯೆಯಲ್ಲಿ ಈ ಬಾರಿ ಆರ್ಸಿಬಿ ಎಡವಿದೆ ಎಂಬ ಬೇಸರ ಅಭಿಮಾನಿಗಳಿಗೆ ಕಾಡುವುದಕ್ಕೆ ಶುರುವಾಗಿದೆ. ಆ ಬೇಸರವನ್ನ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲೂ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿಯೇ ಆಟಗಾರರನ್ನು ಬಿಟ್ಟುಕೊಟ್ಟಿದೆ. ಇನ್ನು ಈ ಸಲವೂ ಕಪ್

ನಾಗಚೈತನ್ಯ-ಶೋಭಿತಾ ಮದುವೆ 50 ಕೋಟಿಗೆ ಮಾರಾಟ

ಇತ್ತೀಚಿನ ದಿನಗಳಲ್ಲಿ ಸೆಲೆಬ್ರೆಟಿಗಳ ಮದುವೆಯಲ್ಲಿ ಕಂಡಕಂಡವರು ವಿಡಿಯೋ ಮಾಡುವಂತಿಲ್ಲ, ಸಿಕ್ಕ ಸಿಕ್ಕವರು ಪ್ರಸಾರ ಮಾಡುವಂತೆಯೂ ಇಲ್ಲ. ಅದಕ್ಕೆ ಕಾರಣ ಆ ಮದುವೆಯನ್ನು ಸೆಲೆಬ್ರೆಟಿಗಳು ಕಮರ್ಷಿಯಲ್ ಆಗಿನೇ ನೋಡುತ್ತಾರೆ, ಕೋಟ್ಯಾಂತರ ರೂಪಾಯಿಗೆ ಮಾರಾಟ ಮಾಡುತ್ತಾರೆ. ಡಿಸೆಂಬರ್

ಕೊರೋನರಿ ಕ್ಯಾಲ್ಸಿಯಂ ಸ್ಕ್ಯಾನ್ ಎಂದರೇನು ?

ಇದೊಂದು ರೀತಿಯ ಹೃದಯದ ಸ್ಕ್ಯಾನಿಂಗ್ ಪರೀಕ್ಷೆಯಾಗಿದ್ದು, ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳ ಒಳಭಾಗದಲ್ಲಿ ಶೇಖರಣೆಗೊಂಡ ಕ್ಯಾಲ್ಸಿಯಂನ ಪ್ರಮಾಣವನ್ನು ಪತ್ತೆ ಹಚ್ಚುವ ಪರೀಕ್ಷೆಯಾಗಿರುತ್ತದೆ. ಹೃದಯಾಘಾತವಾಗುವ ಸಾಧ್ಯತೆಗಳನ್ನು ಈ ಕ್ಯಾಲ್ಸಿಯಂ ಅಂಕದಿಂದ ನಿರ್ಧರಿಸಲಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಕ್ಯಾಲ್ಸಿಯಂ

error: Content is protected !!