ಹಿರಿಯೂರಿನಲ್ಲಿ ಡಿ. 22 ರಂದು ನಾಣ್ಯಗಳ ಹಾಗೂ ನೋಟ್ ಎಕ್ಸ್‌ಚೇಂಜ್ ಮೇಳ

0 Min Read

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 19 : ನಗರದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಡಿಸೆಂಬರ್ 22 ರ, ಸೋಮವಾರದಂದು ನಾಣ್ಯಗಳ ಹಾಗೂ ನೋಟ್ ಎಕ್ಸ್‌ಚೇಂಜ್ ಮೇಳ ನಡೆಯಲಿದೆ.

ಸಾರ್ವಜನಿಕರ ಅನುಕೂಲಕ್ಕಾಗಿ ರೂ. 1/-, 2/-, 5/-, 10/- ಹಾಗೂ 20/- ರ ಮುಖಬೆಲೆಯ ನಾಣ್ಯಗಳ ಮೇಳ ಹಾಗೂ ನೋಟ್ ಎಕ್ಸ್‌ಚೇಂಜ್ ಮೇಳವನ್ನು ಹಿರಿಯೂರು ಶಾಖೆಯ ಆವರಣದಲ್ಲಿ ಚಿತ್ರದುರ್ಗದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಕರೆನ್ಸಿ ಚೆಸ್ಟ್ ಶಾಖೆಯಿಂದ ಬೆಳಿಗ್ಗೆ 11:00 ರಿಂದ ಸಂಜೆ 04:00 ಗಂಟೆಯವರೆಗೆ ಆಯೋಜಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.

Share This Article