ಧವಳಗಿರಿ ಬಡಾವಣೆ ಅಭಿವೃದ್ಧಿಗೆ ಎಲ್ಲರೂ ಕೈಜೋಡಿ : ಜಿ.ಟಿ.ಸುರೇಶ್ ಸಿದ್ದಾಪುರ

1 Min Read

 

ಚಿತ್ರದುರ್ಗ,(ಫೆ.12): ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ ಇವರನ್ನು ದವಳಗಿರಿ ಬಡಾವಣೆ ಒಂದು ಮತ್ತು ಎರಡನೆ ಹಂತದ ನಿವಾಸಿಗಳು ಪ್ರಾಧಿಕಾರದಲ್ಲಿ ಶುಕ್ರವಾರ ಸನ್ಮಾನಿಸಿದರು.

ಧವಳಗಿರಿ ಬಡಾವಣೆಯ ನಿವಾಸಿ ಸಿ.ಜಿ.ಶ್ರೀನಿವಾಸ್ ಮಾತನಾಡಿ ಪರಿಸರ ಚೆನ್ನಾಗಿದ್ದರೆ ಹಿರಿಯರು ಬೆಳಿಗ್ಗೆ ಮತ್ತು ಸಂಜೆಯ ವೇಳೆಯಲ್ಲಿ ವಾಯುವಿಹಾರಕ್ಕೆ ಹೋಗಲು ಅನುಕೂಲವಾಗುತ್ತದೆ ಎನ್ನುವುದನ್ನು ಗಮನದಲ್ಲಿಟ್ಟಿಕೊಂಡು ಉದ್ಯಾನವನ ನಿರ್ಮಿಸಲಾಗಿದೆ.

ಕೆಲವೊಂದು ಖಾಲಿ ನಿವೇಶನಗಳಲ್ಲಿ ಜಾಲಿ ಹಾಗೂ ಪಾರ್ಥೆನಿಯಂ ಗಿಡಗಳು ಬೆಳೆದಿದ್ದರೂ ತೆಗೆಸುತ್ತಿಲ್ಲ. ಅಂತಹವರಿಗೆ ನಗರಾಭಿವೃದ್ದಿ ಪ್ರಾಧಿಕಾರದಿಂದ ನೋಟಿಸ್ ನೀಡಿ ಎಂದು ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರರವರಿಗೆ ಸಲಹೆ ನೀಡಿದರು.

ಧವಳಗಿರಿ ಬಡಾವಣೆಯ ನಿವಾಸಿಗಳಿಗೆ ರಸ್ತೆ, ಬೀದಿ ದೀಪ, ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಕೇಳಿದರೆ ನಗರಸಭೆಯವರು ನಗರಾಭಿವೃದ್ದಿ ಪ್ರಾಧಿಕಾರದ ಕಡೆ ಕೈತೋರಿಸುತ್ತಾರೆ. ಅವರ ಮೇಲೆ ಇವರು, ಇವರ ಮೇಲೆ ಅವರು ಹೇಳಿಕೊಂಡು ಕಾಲ ಕಳೆದರೆ ಅಭಿವೃದ್ದಿಯಾಗುವುದು ಹೇಗೆ ಎಂದು ಧವಳಗಿರಿ ಬಡಾವಣೆಯ ಮತ್ತೊಬ್ಬ ನಿವಾಸಿ ನ್ಯಾಯವಾದಿ ಎಂ.ಸಿ.ತಿಪ್ಪೇಸ್ವಾಮಿ ನೂತನ ಅಧ್ಯಕ್ಷರನ್ನು ಪ್ರಶ್ನಿಸಿದರು.

ಮುಂದಿನ ತಿಂಗಳು ಟೆಂಡರ್ ಕರೆದು ಧವಳಗಿರಿ ಬಡಾವಣೆ ಕ್ಲೀನಿಂಗ್‌ಗೆ ಮೂವರನ್ನು ಕಳಿಸುತ್ತೇವೆ. ಮನೆಯಿಂದ ಕಸ ತಂದು ಹೊರಗೆ ಹಾಕುವವರಿಗೆ ಸುತ್ತಮುತ್ತಲಿನವರು ಬುದ್ದಿ ಹೇಳಿ ನಿಮ್ಮ ನಿಮ್ಮ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕೆಂದು ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ತಿಳಿಸಿದರು.

ಪ್ರತಿ ಮನೆಗಳಿಗೂ ಬೆಳಗಿನ ವೇಳೆ ಕಸ ಸಂಗ್ರಹಕ್ಕೆ ವಾಹನಗಳು ಬರುತ್ತವೆ. ಆದರೂ ಕೆಲವರು ತಮ್ಮ ಮನೆಯ ಹಸಿ ಕಸ, ಒಣ ಕಸಗಳನ್ನು ವಾಹನಗಳಿಗೆ ಹಾಕದೆ ಬೀದಿಗೆ ತಂದು ಸುರಿದರೆ ಏನು ಪ್ರಯೋಜನ. ಪರಿಸರ ಚೆನ್ನಾಗಿದ್ದರೆ ಎಲ್ಲರ ಮನಸ್ಸು ಉಲ್ಲಾಸವಾಗಿರುತ್ತದೆಯಲ್ಲದೆ ವಾಯುವಿಹಾರಕ್ಕೆ ಪೂರಕವಾಗಲಿದೆ. ಇದಕ್ಕೆ ಧವಳಗಿರಿ ಬಡಾವಣೆಯ ಎಲ್ಲರು ಕೈಜೋಡಿಸುವಂತೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ಧಾಪುರ ಮನವಿ ಮಾಡಿದರು.

ಧವಳಗಿರಿ ಬಡಾವಣೆಯ ಹಂತ ಒಂದು ಮತ್ತು ಎರಡರ ನಿವಾಸಿಗಳಾದ ಕೆ.ಟಿ.ಶಾಂತಸ್ವಾಮಿ, ಕೆ.ಬಿ.ಹೊರಕೆ ರಂಗಯ್ಯ, ಆರ್.ಪಾಂಡು, ಓ.ಬಿ.ಬಸವರಾಜು, ನವೀನ್‌ಕುಮಾರ್, ಡಿ.ತಿಪ್ಪೇಸ್ವಾಮಿ(ನಂದಿನಿ) ಜಿ.ಎಸ್.ಗುರುಮೂರ್ತಿ, ಜಿ.ಎಂ.ಲವಕುಮಾರ್, ವಿ.ಈಶ್ವರಪ್ಪ, ನ್ಯಾಯವಾದಿ ಬಿ.ಎಂ.ಅನಿಲ್‌ಕುಮಾರ್, ಬಿ.ಆರ್.ಪ್ರಶಾಂತ್, ಕೆ.ಬಿ.ಕೃಷ್ಣಪ್ಪ, ಹೆಚ್.ನಾಗರಾಜ್, ಎಂ.ಶ್ರೀನಿವಾಸ್ ಈ ಸಂದರ್ಭದಲ್ಲಿದ್ದರು.

Share This Article
Leave a Comment

Leave a Reply

Your email address will not be published. Required fields are marked *