ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಮಕ್ಕಳ ಸುರಕ್ಷೆತೆಯೊಂದಿಗೆ ಶಾಲಾ-ಕಾಲೇಜು ಮುಂದುವರೆಸಲು ಸರ್ಕಾರ ನಿರ್ಧರಿಸಿದ್ದು, ರಾಜ್ಯದ ಹಾಸ್ಟೆಲ್ ಗಳಿಗೆ ಸಿಎಂ ಹೊಸ ಮಾರ್ಗಸೂಚಿ ನೀಡಿದ್ದಾರೆ.
ಈ ಹಿಂದೆ ಹಾಸ್ಟೇಲ್ ಗಳಲ್ಲಿ ಊಟದ ಸಮಯ ಒಂದೇ ಆಗಿತ್ತು. ಹೀಗಾಗಿ ಎಲ್ಲಾ ಮಕ್ಕಳು ಒಟ್ಟಿಗೆ ಊಟಕ್ಕೆ ಹೋಗ್ತಾ ಇದ್ರು. ಆದ್ರೆ ಹೊಸ ಮಾರ್ಗಸೂಚಿಯ ಪ್ರಕಾರ ಇನ್ಮುಂದೆ ಎಲ್ಲಾ ಮಕ್ಕಳು ಒಟ್ಟಿಗೆ ಊಟಕ್ಕೆ ಹೋಗುವಂತಿಲ್ಲ ಎಂದಿದ್ದಾರೆ.
ಇನ್ನು ಅಂತರ ಕಾಯ್ದುಕೊಂಡಯ ಊಟಮಾಡಲು ಮಕ್ಕಳಿಗೆ ಸಿಬ್ಬಂದಿ ಸೂಚಿಸಬೇಕು. ಹಾಸ್ಟೆಲ್ ನಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಎರಡು ಡೋಸ್ ಲಸಿಕೆ ಆಗಿರಲೇ ಬೇಕು. ಜೊತೆಗೆ ಹಾಸ್ಟೆಲ್ ಗೆ ಹೊಸಬರ ಪ್ರವೇಶವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.