ಚಿತ್ರದುರ್ಗ,(ಮೇ.19) : ರಾಜ್ಯದ ಎಲ್ಲಾ ನಗರ ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಚತೆ ಕಾರ್ಯ ನಿರ್ವಹಿಸುತ್ತಿರುವವರನ್ನು ಸಚಿವ ಸಂಪುಟದ ತೀರ್ಮಾನದಂತೆ ಏಕ ಕಾಲಕ್ಕೆ ಖಾಯಂ ಮಾಡುವಂತೆ ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸಾಂಕೇತಿಕ ಧರಣಿಯನ್ನು ನಡೆಸಲಾಯಿತು.
ರಾಜ್ಯ ನಗರಸಭೆ,ಪುರಸಭೆ,ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಮಹಾ ಸಂಘ, ರಾಜ್ಯ ನಗರ ಪಾಲಿಕೆ ನಗರಸಭೆ ಪುರಸಭೆ, ಪಟ್ಟಣ ಪಂಚಾಯಿತಿ ಹೂರಗುತ್ತಿಗೆ ನೌಕರರ ಸಂಘ ಹಾಗೂ ಚಿತ್ರದುರ್ಗ ಜಿಲ್ಲಾ ಪೌರ ಕಾರ್ಮಿಕರ ಸಂಘದ ಸಂಯುಕ್ತಾಶ್ರಯದಲ್ಲಿ ಕೆಲಸ ಖಾಯಂಗಾಗಿ ಧರಣಿಯನ್ನು ಹಮ್ಮಿಕೊಂಡಿದ್ದು, ಈ ಸಂಸ್ಥೆಗಳಲ್ಲಿ ಕೆಲಸವನ್ನು ಮಾಡುತ್ತಿರುವ ಗುತ್ತುಗೆದಾರರ ಸ್ಥಿತಿ ಶೋಚನೀಯವಾಗಿದೆ.
ಸಂಘಟನೆಯ ಹೋರಾಟದ ಫಲವಾಗಿ 2017-18ನೇ ಸಾಲಿನಲ್ಲಿ ಅಂದಿನ ಕಾಂಗ್ರೇಸ್ ಸರ್ಕಾರ ಎಲ್ಲರನ್ನು ಖಾಯಂ ಮಾಡಲು ನಿರ್ಣಯ ಮಾಡಿತು ಆದರೆ ದಲಿತ ಪೌರ ಕಾರ್ಮೀಕರ ವಿರೋಧಿ ಅಧಿಕಾರಿಗಳು ಸಚಿವ ಸಂಪುಟದ ನಿರ್ಣಯನ್ನು ಯಥಾವತ್ತಾಗಿ ಅನುಷ್ಠಾನ ಮಾಡದೇ ಪೌರ ಕಾರ್ಮಿಕರ ವಿಶೇಷ ನೇಮಕಾತಿ ನಿಯಮಗಳು 2017-18 ಎಂಬ ಪೌರ ಕಾರ್ಮಿಕರ ಬದುಕನ್ನು ನಾಶ ಮಾಡುವಂತ ನಿಯಮಗಳನ್ನು ಜಾಸ್ತಿ ಮಾಡಿದ್ದಾರೆ. ಕಾರ್ಮಿಕರನ್ನು ಬೇರೆ ಬೇರೆಯಾಗಿ ಮಾಡಿದ್ದಾರೆ ಎಂದು ದೂರಿದ್ದಾರೆ.
ಗುತ್ತಿಗೆ ಪದ್ದತಿಯನ್ನು ರದ್ದು ಮಾಡಲು ಒಪ್ಪದ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮಿಲಾಗಿ ಪೌರ ಕಾರ್ಮಿಕರನ್ನೆ ಅಸಂಭದ್ದ ಗುಂಪುಗಳಾಗಿ ಮಾಡಿ ಬೆರಳಣಿಕೆಷ್ಟು ಜನರನ್ನು ಮಾತ್ರ ಲಂಚ ಪಡೆದು ಖಾಯಂ ಮಾಡುವುದರ ಮೂಲಕ ರಾಜ್ಯ ಸಚಿವ ಸಂಪುಟದ ನಿರ್ಣಯವನ್ನು ಉಲ್ಲಂಘಟನೆ ಮಾಡಿ ಪೌರ ಕಾರ್ಮಿಕರಿಗೆ ಮೋಸ ಮಾಡಿದ್ದಾರೆ. ಕೆಲವೊಂದು ಅಧಿಕಾರಿಗಳು ನಮ್ಮ ಸಂಘಟನೆಯನ್ನು ಒಡೆಯುವ ಕಾರ್ಯವನ್ನು ಮಾಡಿದ್ದಾರೆ.
ಕರೋನಾ ಸಮಯದಲ್ಲಿ ಕೆಲಸ ಮಾಡಿದರು ಸಹಾ ನಮೆಗ ಸರಿಯಾದ ರೀತಿಯಲ್ಲಿ ವೇತನ ಸಿಕ್ಕಿಲ್ಲ, ಅದರಲ್ಲೂ ಸಹಾ ತಾರತಮ್ಯ ಮಾಡುತ್ತಿದ್ದಾರೆ. ಸೂಕ್ತವಾದ ವ್ಯದ್ಯಕೀಯ ಸೌಲಭ್ಯ ಇಲ್ಲ, ಸುರಕ್ಷತೆಯಂತೊ ಇಲ್ಲವೇ ಇಲ್ಲವಾಗಿದೆ ಎಂದು ಆರೋಪಿಸಿದ್ದಾರೆ.
ವಾರದ ರಜೆ, ಮಾಸಿಕ ರಜೆ ಇಲ್ಲ, ಹೆಣ್ಣು ಮಕ್ಕಳಿಗೆ ಹೆರಿಗೆ ರಜೆ ಭತ್ಯೆಗಳು ಇಲ್ಲವಾಗಿದೆ. ಮೂಲಭೂತ ಸೌಲಭ್ಯಗಳು ಸಹಾ ನೀಡಿಲ್ಲ, 60 ವರ್ಷ ಮೇಲ್ಪಟ್ಟು ಕೆಲಸದಿಂದ ನಿವೃತ್ತಿಯಾಗುವವರಿಗೆ ಯಾವುದೇ ರೀತಿಯ ನಿವೃತ್ತಿಯ ಸೌಕರ್ಯಗಳು ಸಿಕ್ಕಿಲ್ಲ, ನಮಗೆ ಸುರಕ್ಷತೆ, ಭದ್ರತೆಯ ಕಾನೂನುಗಳು ಇಲ್ಲವಾಗಿದೆ. ಪೌರ ಕಾರ್ಮಿಕರಾಗಿ ಕೆಲಸವನ್ನು ಮಾಡುತ್ತಿರುವ ನಾವೇಲ್ಲಾ ಒಂದೇ ನಮ್ಮನ್ನು ಪ್ರತ್ಯೇಕ ಮಾಡಬೇಡಿ, ಸಾಲಪ್ಪನವರ ವರದಿಯ ಪ್ರಕಾರ ನಾವೆಲ್ಲಾ ಒಂದೇ ನಮ್ಮನ್ನು ಕೊಡಲೇ ಖಾಯಂ ಮಾಡಲು ಆದೇಶವನ್ನು ಮಾಡಬೇಕು, ಕಾರ್ಮಿಕ ಕಾನೂನು ಪ್ರಕಾರ ನಮಗೆ ಸಿಗಬೇಕಾದ ಸೌಲಭ್ಯಗಳುನ ನ್ಯಾಯಯುತವಾಗಿ ದೂರಕಬೇಕಿದೆ.
ಮುಂದಿನ ಒಂದು ತಿಂಗಳೊಳಗಾಗಿ ಖಾಯಂ ಆದೇಶವನ್ನು ಹೊರಡಿಸಬೇಕು ತಪ್ಪಿದಲ್ಲಿ ಅರ್ನಿದೀಷ್ಠವಾಗಿ ಸ್ಥಗಿತ ಮುಷ್ಕರ ನಡೆಸಲಾಗುವುದೆಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಧರಣಿಯಲ್ಲಿ ಜಿಲ್ಲಾಧ್ಯಕ್ಷ ದುರುಗೇಶ್, ಉಪಾಧ್ಯಕ್ಷ ಜಗದೀಶ್, ರಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಸಹಾ ಕಾರ್ಯದರ್ಶೀ ಮಂಜಣ್ಣ, ಖಂಜಾಚಿ ಮರಿಯಪ್ಪ, ನಿರ್ದೇಶಕರಾಧ ಮಂಜುನಾಥ್, ದುರುಗಪ್ಪ, ಜಯಣ್ಣ, ಕೆ.ಕುಮಾರ್, ಚಿಕ್ಕಣ್ಣ ನೇತೃತ್ವವನ್ನು ವಹಿಸಿದ್ದರು.