Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ದೇವರಾಜ್ ಅರಸು ದಾಖಲೆಯನ್ನು ನಾಳೆಯೇ ಮುರಿಯಲಿದ್ದಾರೆ ಸಿಎಂ : ಏನಂದ್ರು ಸಿದ್ದು..?

---Advertisement---

ಮೈಸೂರು: ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಸಿಎಂ ಆದ್ಮೇಲೆ ದೇವರಾಜ್ ಅರಸು ಅವರ ದಾಖಲೆ ಮುರಿಯಲೇಬೇಕು ಎಂದು ಪಣ ತೊಟ್ಟಿದ್ದರು. ಹೀಗಾಗಿಯೇ ಡಿಕೆ ಶಿವಕುಮಾರ್ ಅವರು ಸಿಎಂ ಆಕಾಂಕ್ಷಿಯಾಗಿದ್ದರು ಬಿಟ್ಟುಕೊಡುವುದಕ್ಕೆ ಒಲ್ಲೆ ಎನ್ನುತ್ತಿದ್ದರು. ಇದೀಗ ಸಿದ್ದರಾಮಯ್ಯ ಅವರು ಆಸೆ ಪಟ್ಟಂತೆ ಮುಖ್ಯಮಂತ್ರಿಯಾಗಿ ದೇವರಾಜ್ ಅರಸು ಅವರ ದಾಖಲೆ ಮುರಿಯುವುದಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಅಂದ್ರೆ ಜನವರಿ 6ರಂದು ಆ ದಾಖಲೆಯನ್ನು ಮುರಿಯಲಿದ್ದಾರೆ.

ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಜನರ ಆಶೀರ್ವಾದದಿಂದ ನಾಳೆಗೆ ದೇವರಾಜ್ ಅರಸು ಅವರ ದೀರ್ಘಾವಧಿ ಆಡಳಿತ ಬ್ರೇಕ್ ಆಗುತ್ತಿದೆ. ನನಗೆ ಖುಷಿ ಏನಂದ್ರೆ ದೇವರಾಜ್ ಅರಸು ಹಾಗೂ ನಾನು ಒಂದೇ ಜಿಲ್ಲೆಯವರು. ನನಗೂ ದೇವರಾಜ್ ಅರಸ್ ಅವರಿಗೂ ಹೋಲಿಕೆ ಇಲ್ಲ. ಯಾವುದೇ ದಾಖಲೆ ಶಾಶ್ವತವಲ್ಲ.

ಕ್ರಿಕೆಟ್ ನಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದಿಲ್ಲವೆ..? ಮುಂದೆ ಯಾರಾದರೂ ನನ್ನ ದಾಖಲೆಯನ್ನು ಮುರಿಯಬಹುದು. ನನಗಿಂತ ಹೆಚ್ಚಿನ ಬಜೆಟ್ ಮಂಡಿಸುವವರು ಕೂಡ ಬರಬಹುದು. ಹೀಗಾಗಿ ನನ್ನ ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದು ನಾನು ಹೇಳುವುದಿಲ್ಲ. ನಾನು ಮುಖ್ಯಮಂತ್ರಿ ಇರಲಿ ಮಿನಿಸ್ಟರ್ ಆಗ್ತೀನಿ ಅಂತಾನೇ ನಿರೀಕ್ಷೆ ಮಾಡಿರಲಿಲ್ಲ. ಎಂಎಲ್ಎ ಆಗ್ಬೇಕು ಅಂತ ಅಂದುಕೊಂಡಿದ್ದೆ.‌ ಈಗ 8 ಚುನಾವಣೆ ಗೆದ್ದಿದ್ದೀನಿ. ಎರಡು ಪಾರ್ಲಿಮೆಂಟ್ ಸೋತಿದ್ದೀನಿ, ಎರಡು ಅಸೆಂಬ್ಲಿ ಸೋತಿದ್ದೀನಿ. ದೇವರಾಜ್ ಅರಸು ಅವರು ಸಾಮಾಜಿಕವಾಗಿ ಹಿಂದುಳಿದವರಲ್ಲ. ಜನಸಂಖ್ಯೆನಲ್ಲಿ ಬಹಳ ಕಡಿಮೆ ಇದ್ದು, ಖ್ಯಾತಿ ಪಡೆದಂತ ಮುಖ್ಯಮಂತ್ರಿ ಅವರು ಎಂದು ಹೊಗಳಿದ್ದಾರೆ.

Join WhatsApp

Join Now

Join Telegram

Join Now