ಬೆಂಗಳೂರು: ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿಕ್ಕಿ ಹಾಕಿಸುವುದಕ್ಕೆ ಇಡಿ ಅಧಿಕಾರಿಗಳೇ ಮುಂದಾಗಿದ್ದಾರೆ ಎಂಬ ವಿಚಾರ ಈಗ ಶಾಕಿಂಗ್ ಆಗಿದೆ. ಕಲ್ಲೇಶ್ ಎಂಬ ಅಧಿಕಾರಿ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಾಲ್ಮೀಕಿ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ನಾಗೇಂದ್ರ ಅವರ ಹೆಸರು ಬರೆದುಕೊಡುವಂತೆ ಒತ್ತಾಯ ಹಾಕಿದ್ದಾರಂತೆ. ಇಲ್ಲವಾದಲ್ಲಿ ಜೈಲಿಗೆ ಕಳುಹಿಸುತ್ತೀನಿ ಎಂಬುದಾಗಿಯೂ ಹೇಳಿದ್ದರಂತೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಎಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಮಾತನಾಡಿ, ಅವರು ದೂರು ನೀಡಿ ಕೇಸ್ ರಿಜಿಸ್ಟರ್ ಆಗಿದೆ. ದೂರಿನಲ್ಲಿ ಏನೆಲ್ಲಾ ನಡೆದಿದೆ, ಇಡಿಯವರು ಏನು ಮಾಡಿದರು ಎಂಬುದನ್ನು ತಿಳಿಸಿದ್ದಾರೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರವನ್ನು ಅಸ್ತಿರಗೊಳಿಸಬೇಕು. ಮುಖ್ಯಮಂತ್ರಿಯನ್ನ ಟಾರ್ಗೆಟ್ ಮಾಡಬೇಕು. ಮುಖ್ಯಮಂತ್ರಿ ಇಮೇಜ್ ಅನ್ನ ಡ್ಯಾಮೇಜ್ ಮಾಡಬೇಕು. ನಾವೂ ಪರಿಶಿಷ್ಠ ಜಾತಿ-ವರ್ಗದವರ ವಿರುದ್ಧ ಇದ್ದೀವಿ ಅಂತ ಈ ರಾಜ್ಯದ ಜನರುಗೆ ಹೇಳಬೇಕು. ನಾವೂ ಯಾವತ್ತಿಗೂ ಪರಿಶಿಷ್ಟ ಜಾತಿ ಹಾಗೂ ವರ್ಗದ ಜನರ ಪರ ಹಾಗೂ ದುರ್ಬಲ ವರ್ಗದ ಜನರ ಪರವಾಗಿಯೇ ಇದ್ದೇವೆ, ಬಡವರು, ರೈತರು, ಮಹಿಳೆಯರು, ಕಾರ್ಮಿಕರ ಪರವಾಗಿಯೇ ಇದ್ದೇವೆ. ಹೇಗಾದರೂ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇರಬಾರದು, ದುರ್ಬಲಗೊಳಿಸಬೇಕು ಎಂಬ ಕಾರಣದಿಂದ ವಾಮಮಾರ್ಗವನ್ ಅನುಸರಿಸುತ್ತಾ ಇದ್ದಾರೆ. ನಾನು ಸ್ಪಷ್ಟ ಪಡಿಸುವುದಕ್ಕೆ ಬಯಸುತ್ತೇನೆ. ಹಣಕಾಸು ಇಲಾಖೆಯಾಗಲಿ, ಸಿಎಂಗಾಗಲಿ ಆ ಕೇಸಿಗೂ ಇವರಿಗೂ ಸಂಬಂಧವಿಲ್ಲ ಎಂದಿದ್ದಾರೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಮ್ಮ ಬಾಯನ್ನ ಮುಚ್ಚಿಸಬೇಕು, ಮುಖ್ಯಮಂತ್ರಿಗಳ ಹೆಸರಿಗೆ ಮಸಿ ಬಳಿಸಬೇಕು ಎಂಬ ಉದ್ದೇಶದಿಂದ ಅಧಿಕಾರಿಗಳನ್ನ ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೆ ಕಲ್ಲೇಶ್ ಎಂಬ ಅಧಿಕಾರಿಯಿಂದ ಮುಖ್ಯಮಂತ್ರಿ ಹೆಸರೇಳು ಅಂತ ಒತ್ತಡ ಹಾಕಿದ್ದಾರೆ. ಏಳು ವರ್ಷ ಜೈಲಿಗೆ ಹಾಕುತ್ತೀನಿ ಅಂತ ಹೇಳಿ ಹೆದರಿಸಿದ್ದಾರೆ. ಆದರೆ ಆ ವ್ಯಕ್ತಿ ಧೈರ್ಯವಾಗಿ ಹೋಗಿ ಪೊಲೀಸರಿಗೆ ದೂರು ನೀಡಿ, ಎಫ್ಐಆರ್ ಹಾಕಿಸಿದ್ದಾರೆ ಎಂದಿದ್ದಾರೆ.