ಬೆಂಗಳೂರು: ಉಡುಪಿಯಲ್ಲಿ ಶುರುವಾದ ಮುಸ್ಲಿಂ ಅಂಗಡಿಗಳ ನಿಷೇಧ ಇದೀಗ ರಾಜ್ಯದೆಲ್ಲೆಡೆ ಹಬ್ಬಿದೆ. ಎಲ್ಲೆಡೆ ಜಾತ್ರೆಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ವ್ಯಾಪಾರ ನಿಷೇಧ ಮಾಡಲಾಗಿದೆ. ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಜಾಬ್ ಗದ್ದಲ ವಿಚಾರವಾಗಿಯೂ ಮಾತನಾಡಿದ್ದಾರೆ. ಈವರೆಗೂ ಎಲ್ಲವೂ ಶಾಂತವಾಗಿಯೇ ಇತ್ತು. 70 ವರ್ಷದಿಂದ ಯೂನಿಫಾರಂ ಹಾಕಿಯೇ ಬಂದಿದ್ದೇವೆ. ಆದ್ರೆ ಕೆಲವು ಶಕ್ತಿಗಳು ಹಿಜಾಬ್ ಹಿಂದೆ ಬಿದ್ದಿವೆ. ಪೊಲೀಸರು ಉತ್ತಮ ಕೆಲ ಮಾಡುತ್ತಿದೆ. ಎಲ್ಲರೂ ಹೈಕೋರ್ಟ್ ಆದೇಶವನ್ನ ಪಾಲಿಸಲೇಬೇಕು. ಕಾನೂನು ಪಾಲಿಸಿದ್ರೆ ಯಾವ ಸಮಸ್ಯೆಯೂ ಆಗಲ್ಲ ಎಂದಿದ್ದಾರೆ.
ಇದೆ ವೇಳೆ ಜಾತ್ರೆಗಳಲ್ಲಿ ಮುಸ್ಲಿಂರಿಗೆ ನಿಷೇಧ ವಿಚಾರ ಮಾತನಾಡಿದ್ದು, ಇದು 2002ರ ಧರ್ಮದತ್ತಿ ಕಾನೂನಿನಲ್ಲಿಯೇ ಇದೆ. ಧರ್ಮದತ್ತಿ ಪ್ರಕಾರ ಗುತ್ತಿಗೆ ಕೊಟ್ಟಿರ್ತಾರೆ. ಇದರ ಅನ್ವಯವೇ ಕೆಲವು ದೇವಸ್ಥಾನಗಳಲ್ಲಿ ಆಗಿದೆ. ಇನ್ನು ಕೆಲವು ದೇವಸ್ಥಾನಗಳಲ್ಲಿ ಆಗಿಲ್ಲ. ಶಾಂತಿಯಿಂದ ಮಾತನಾಡಿದ್ರೆ ಎಲ್ಲವೂ ಬಗೆಹರಿಯುತ್ತೆ ಎಂದಿದ್ದಾರೆ.
ಇನ್ನು ಸ್ವಾಮೀಜಿಗಳ ಪೇಟದ ವಿಚಾರವಾಗಿ ಸಿದ್ದರಾಮಯ್ಯ ಅವರು ಆಡಿದ್ದ ಮಾತಿನ ಬಗ್ಗೆ ಮಾತನಾಡಿದ್ದು, ಇದರ ಬಗ್ಗೆ ಸಿದ್ದರಾಮಯ್ಯ ಅವರನ್ನೇ ಕೇಳಬೇಕು ಎಂದಿದ್ದಾರೆ.