Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರೈತರ ಹಿತ ಕಾಯುವುದು ಶತಸಿದ್ಧ : ಹೋರಾಟಗಾರರಿಗೆ ಸಿಎಂ ಸಿದ್ದರಾಮಯ್ಯ ಭರವಸೆ

Facebook
Twitter
Telegram
WhatsApp

ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಹಲವು ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಪ್ರತಿಭಟನೆ 56ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ರೈತರಿಗೆ ಭರವಸೆ ನೀಡಿದ್ದಾರೆ. ನಾವೂ ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ಅಧಿಕಾರಕ್ಕಿಂತ ನಮಗೆ ರೈತರ ಹಿತಾಸಕ್ತಿ ಮುಖ್ಯ ಎಂದು ತಿಳಿಸಿದ್ದಾರೆ.

ಮಳೆ ಪೂರ್ತಿ ಕೈಕೊಟ್ಟಿದೆ. ಈ ವರ್ಷ ಭೀಕರ ಬರಗಾಲವನ್ನು ಎದುರಿಸುತ್ತಿದ್ದೇವೆ. ಈ ಮೂಲಕ ಜಲಾಶಯಗಳು ತುಂಬದೆ ನಾವೂ ಸಂಕಷ್ಟದ ವರ್ಷದಲ್ಲಿ ಇದ್ದೇವೆ. ಈಗ ಮತ್ತೆ ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶ ಹೊರ ಬಿದ್ದಿದೆ. ಆದರೆ ನಾವೂ ಕಾವೇರಿ ಪ್ರಾಧಿಕಾರ ಮತ್ತುಬಸಮಿತಿ ಎದುರು ನೀರು ಇಲ್ಲ, ಆದ್ದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದೇ ಬಲವಾಗಿ ಹೇಳಿದ್ದೇವೆ. ಈ ಮೊದಲು 5 ಸಾವಿರ ಕ್ಯೂಸೆಕ್ ನೀರು ಬಿಡಲು ಹೇಳಿದ್ದರು. ಬಳಿಕ 3 ಕ್ಯೂಸೆಕ್ ಬಿಡಲು ಹೇಳಿದ್ದರು. ಅದಕ್ಕೂ ನಾವೂ ಒಪ್ಪಲಿಲ್ಲ. ಈಗ ನಿನ್ನೆ ಮತ್ತೆ ಆದೇಶ ಬಂದಿದೆ. 2600 ಕ್ಯೂಸೆಕ್ ನೀರು ಬಿಡಲು ಸೂಚನೆ ನೀಡಲಾಗಿದೆ. ಆದರೆ ನಾವೂ ಮೊದಲು ಕುಡಿಯುವುದಕ್ಕೆ ಮತ್ತು ಬೆಳೆಯುವುದಕ್ಕೆ ಆದ್ಯತೆ ನೀಡುತ್ತೇವೆ‌. ನಾನೂ ಕೂಡ ರೈತ ಹೋರಾಟದಲ್ಲಿ ಬಂದಿರುವ ರೈತರ ಮಗ ಎಂದಿದ್ದಾರೆ.

 

ಇನ್ನು ಕಬ್ಬು ಬೆಳೆಗಾರರ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಬ್ಬು ಬೆಳೆಗಾರರ ಹಿತಕ್ಕಾಗಿ ಮೈಶುಗರ್ ಸಕ್ಕರೆ ಕಾರ್ಖಾನೆಗೆ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ನಾವೂ ನಿಮ್ಮ ಪರವಾಗಿ ಇರುವವರು. ಅನುಮಾನ ಬೇಡವೇ ಬೇಡ. ನಮಗೆ ಅಧಿಕಾರಕ್ಕಿಂತ ರೈತರ ಹಿತವೇ ಮುಖ್ಯ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ನಿಮ್ಮ ಸಂಗಾತಿ ಮಾತು ಕೇಳುತ್ತಿಲ್ಲವೇ?

ಈ ರಾಶಿಯ ನಿಮ್ಮ ಸಂಗಾತಿ ಮಾತು ಕೇಳುತ್ತಿಲ್ಲವೇ? ಈ ರಾಶಿಯವರಿಗೆ ವರ ಪಸಂದೇ ಆಗುತ್ತಿಲ್ಲ.   ಬುಧವಾರ- ರಾಶಿ ಭವಿಷ್ಯ ಮೇ-22,2024 ಸೂರ್ಯೋದಯ: 05:46, ಸೂರ್ಯಾಸ್ತ : 06:39 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ

ಹೆಚ್ಚಿನ ಶುಲ್ಕ ವಸೂಲಿ – ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21: ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಹಲವು ಶಿಕ್ಷಣ ಸಂಸ್ಥೆಗಳು ಮಕ್ಕಳ ದಾಖಲಾತಿಗಾಗಿ ಮಾನವೀಯತೆ ಮರೆತು ಸರ್ಕಾರ ನಿಗಧಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು

ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಮತ ಎಣಿಕೆಕಾರ್ಯ ನಿರ್ವಹಿಸಲು ಸೂಚನೆ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21 : ಏಪ್ರಿಲ್ 26ರಂದು ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯವು ಜೂನ್ 04ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದ್ದು, ಚುನಾವಣೆಯ

error: Content is protected !!