ಬೆಂಗಳೂರು: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ತಯಾತಿ ನಡೆಸುತ್ತಿದೆ. ಆಪರೇಷನ್ ಹಸ್ತ ಕೂಡ ಸದ್ದು ಮಾಡುತ್ತಿದೆ. ಹೋದವರನ್ನು, ಖ್ಯಾತಿ ಪಡೆದಿರುವವರನ್ನು ತಮ್ಮ ಪಕ್ಷಕ್ಕೆ ಕರೆ ತರುವ ಪ್ಲ್ಯಾನ್ ಕಾಂಗ್ರೆಸ್ ನಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಬಿಜೆಪಿಯಲ್ಲಿರುವವರು ಕಾಂಗ್ರೆಸ್ ಗೆ ಹೋಗುವ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ. ಅದರ ಭಾಗವಾಗಿ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರು ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಫೋಟೋ ವೈರಲ್ ಆಗಿತ್ತು.
ಈ ಸಂಬಂಧ ಇಂದು ಎಸ್ ಟಿ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ಕ್ಷೇತ್ರದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೇನೆ ಅಷ್ಟೇ. ಅಷ್ಟಕ್ಕೆ ಬಿಜೆಪಿ ಬಿಟ್ಟು ಬಿಡ್ತೀನಿ, ಕಾಂಗ್ರೆಸ್ ಸೇರಿ ಬಿಡ್ತೀನಿ ಅಂತ ಅಲ್ಲ. ಕ್ಷೇತ್ರದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವುದ ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಭೇಟಿಯಾದಾಗ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತ್ರ ಚರ್ಚೆಯಾಗಿದೆ. ಅದನ್ನು ಹೊರತುಪಡಿಸಿ, ರಾಜಕೀಯದ ಚರ್ಚೆ ಆಗಿಲ್ಲ ಎಂದಿದ್ದಾರೆ.
ನನ್ನ ಕ್ಷೇತ್ರದಲ್ಲಿ ಒಂದೇ ಒಂದು ಬೋರ್ ವೆಲ್. ಈ ಸಂಬಂಧ ಧರಣಿ ಕೂರುವುದಾಗಿ ಹೇಳಿದ್ದೆ. ಬಿಬಿಎಂಪಿ ಗಮನಕ್ಕೂ ತಂದಿದ್ದೀನಿ. ಡಿಸಿಎಂ ಡಿಕೆ ಶಿವಕುಮಾರ್ ಅವರ ಬಳಿಯೂ ಹೇಳಿದ್ದೆ. ಅಭಿವೃದ್ಧಿ ತಡೆಯಿರಿ ಆದ್ರೆ ಕುಡಿಯುವ ನೀರು ನಿಲ್ಲಿಸಬೇಡಿ ಎಂದು ಹೇಳಿದ್ದೆ. ಆ ಸಂಬಂಧವಷ್ಟೇ ಚರ್ಚೆ ನಡೆಸಿದ್ದೇವೆ.
ಪಕ್ಷದ ಕೆಲ ಮುಖಂಡರು ನನ್ನ ಬಗ್ಗೆ ಅಫ್ರಚಾರ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನನ್ನ ಬಗ್ಗೆ ಅಪಪ್ರಚಾರ ನಡೆಸಿದ್ದಾರೆ. ನಮ್ಮ ಪಕ್ಷದವರಿಂದಾನೇ ಅಪಪ್ರಚಾರ ನಡೆಯುತ್ತಿದೆ. ಈ ಬಗ್ಗೆ ಪಕ್ಷದ ನಾಯಕರ ಗಮನಕ್ಕೂ ತಂದಿದ್ದೇನೆ. ಹೋಗುವವರ ಬಳಿಯೂ ನಾನು ಹೇಳಿದ್ದೀನಿ. ಏನೋ ಒಂದು ಮಾಡ್ತಾರೆ, ಪಕ್ಷ ಬಿಡುವುದು ಬೇಡ ಎಂದು. ನಾನು ಬಿಜೆಪಿ ಬಿಟ್ಟು ಹೋಗಲ್ಲ ಅಂತ ಸುಮಾರು ಸಲ ಹೇಳಿದ್ದೀನಿ. ಈಗ ಮತ್ತೆ ಎಲೆಕ್ಷನ್ ಬರ್ತಾ ಇದೆ ಮತ್ತೆ ಸೋಮಶೇಖರ್ ಕಾಂಗ್ರೆಸ್ ಹೋಗ್ತಾರಂತೆ ಅಂತಾರೆ. ಎಲ್ಲಾ ಇವ್ರೆ ಕ್ರಿಯೇಟ್ ಮಾಡ್ತಾರೆ ಎಂದಿದ್ದಾರೆ.