ಬೆಂಗಳೂರು; ಕಳೆದ ಕೆಲವು ದಿನಗಳಿಂದ ಮಂಡಿ ನೋವಿನ ಸಮಸ್ಯೆಯಿಂದ ಸಿಎಂ ಸಿದ್ದರಾಮಯ್ಯ ಅವರು ಬಳಲುತ್ತಿದ್ದಾತೆ. ವೀಲ್ ಚೇರ್ ಮೇಲೆಯೇ ಓಡಾಟ ಮುಂದುವರೆಸಿದ್ದಾರೆ. ಮೊದಲ ಬಾರಿಗೆ ಬಜೆಟ್ ಅನ್ನು ಕುಳಿತೇ ಓದಿದ್ದಾರೆ. ಮಂಡಿನೋವಿನ ಸಮಸ್ಯೆಯಿಂದ ಪಾರಾಗಬೇಕೆಂದರೆ ಸಾಧ್ಯವಾದಷ್ಟು ರೆಸ್ಟ್ ಮಾಡಬೇಕು ಎಂದೇ ವೈದ್ಯರು ತಿಳಿಸಿದ್ದರು. ಆದರೂ ತಮ್ಮ ಕರ್ತವ್ಯ ಮರೆಯಲಾಗದೆ ಓಡಾಟ ನಡೆಸುತ್ತಲೆ ಇದ್ದರು. ಇದೀಗ ಆಸ್ಪತ್ರೆಗೂ ದಾಖಲಾಗಿದ್ದಾರೆ.

ಇಂದು ಮಣಿಪಾಲ್ ಆಸ್ಪತ್ರೆಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದಾರೆ. ಡಾ.ಸತ್ಯನಾರಾಯಣ ಅವರು ಸಿದ್ದರಾಮಯ್ಯ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಅದರಂತೆ ಈಗ ಅವರೇ ಚೆಕಪ್ ಕೂಡ ಮಾಡಲಿದ್ದಾರೆ. ಎರಡು ತಿಂಗಳ ಎಲ್ಲಿಯೂ ಹೋಗದಂತೆ, ವಿಶ್ರಾಂತಿ ಪಡೆಯಲು ಸೂಚನೆ ನೀಡಿದ್ದರು. ಮಂಡಿಗೆ ಯಾವುದೇ ಪ್ರೆಶರ್ ಬೀಳದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದರು. ಅದರಂತೆ ಎರಡು ತಿಂಗಳ ಬಳಿಕ ಆಸ್ಪತ್ರೆಗೆ ತೆರಳಿದ್ದಾರೆ.

ಅದರಲ್ಲೂ ರೊಟಿನ್ ಚೆಕಪ್ ಗಾಗಿ ಆಸ್ಪತ್ರೆಗೆ ತೆರಳಿದ್ದು, ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಸಚಿವ ಜಮೀರ್ ಅಹ್ಮದ್ ಖಾನ್, ರಾಜಕೀಯ ಕಾರ್ಯದರ್ಶಿ ಗೋವಿಂದ್ ರಾಜ್ ಕೂಡ ಹೋಗಿದ್ದಾರೆ. ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡಿದ್ದು, ತಪಾಸಣೆ ನಡೆಸುತ್ತಿದ್ದಾರೆ. ಸದ್ಯ ನೋವು ಕಡಿಮೆ ಆಗಿದ್ಯಾ..? ಈಗ ನಡೆದಾಡಬಹುದಾ..? ಅಥವಾ ಇನ್ನಷ್ಟು ಕಾಳಜಿ ಮಾಡಬೇಕಾಗಿದೆಯಾ ಎಂಬೆಲ್ಲಾ ವಿಚಾರಗಳನ್ನು ತಪಾಸಣೆ ಮಾಡಿದ ಬಳಿಕವಷ್ಟೇ ವೈದ್ಯರು ತಿಳಿಸಲಿದ್ದಾರೆ. ರೆಗ್ಯುಲರ್ ಆಗಿ ಸಿಎಂ ಸಿದ್ದರಾಮಯ್ಯ ಅವರನ್ನು ಚೆಕಪ್ ಮಾಡುವ ವೈದ್ಯರೆ ಈ ಬಾರಿಯೂ ಚೆಕಪ್ ಮಾಡಲಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಆತ್ಮೀಯರು ಕೂಡ ಹೋಗಿದ್ದಾರೆ.


