ಅಂಕಿತಾ ಸಾಧನೆ ಕೊಂಡಾಡಿದ ಸಿಎಂ ಸಿದ್ದರಾಮಯ್ಯ: ಮೆಳ್ಳಿಗೇರಿ ಶಾಲೆಗೆ 50 ಲಕ್ಷ ಅನುದಾನ

suddionenews
1 Min Read

ಬಾಗಲಕೋಟೆ: ಇತ್ತಿಚೆಗಷ್ಟೇ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಆ ಫಲಿತಾಂಶದಲ್ಲಿ ಇಡೀ ರಾಜ್ಯಕ್ಕೆ ಏಕೈಕ ವಿದ್ಯಾರ್ಥಿನಿ ಫಸ್ಟ್ ರ್ಯಾಂಕ್ ಬಂದಿರುವುದು. ಬಾಗಲಕೋಟೆಯ ಅಂಕಿತ. ಬಡತನದಲ್ಲಿಯೇ ಬೆಳೆದರು ಇಡೀ ರಾಜ್ಯಕ್ಕೆ ಫಸ್ಟ್ ರ್ಯಾಂಕ್ ಬಂದಿದ್ದಾರೆ. ಅಂಕಿತಾಗೆ ಈಗಾಗಲೇ ಹಲವರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಕೂಡ ವಿಶ್ ಮಾಡಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡ ಅಂಕಿತಾಗೆ ವಿಶ್ ಮಾಡಿ, ಅವರು ಓದಿ ಶಾಲೆಗೆ ದೇಣಿಗೆ ಬಿಡುಗಡೆ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸ ಕಾವೇರಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದ ಅಂಕಿತಾ ಹಾಗೂ ಎರಡನೇ ಸ್ಥಾನ ಪಡೆದ ನವನೀತ್ ಇಬ್ಬರನ್ನು ಸನ್ಮಾನಿಸಲಾಯಿತು. ಅವರ ಪೋಷಕರನ್ನು ಸಿಎಂ ಸಿದ್ದರಾಮಯ್ಯ ಕೊಂಡಾಡಿದರು. ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಅಂಕಿತಾಗೆ ಐದು ಲಕ್ಷ, ನವನೀತ್ ಗೆ ಮೂರು ಲಕ್ಷ ಹಣವನ್ನು ಸಹ ನೀಡಲಾಗಿದೆ.

 

ಮೊರಾರ್ಜಿ ದೇಸಾಯಿ ವಸತಿ ಶಾಲೆ ನನ್ನ ಕಲ್ಪನೆ. 1994 ರಲ್ಲಿ ಉಪ ಮುಖ್ಯಮಂತ್ರಿ ಆಗಿದ್ದಾಗ ಈ ಶಾಲೆಗಲಿಗೆ ಚಾಲನೆ ನೀಡಲಾಯಿತು ಎಂದು ಸಿದ್ದರಾಮಯ್ಯ ಅವರು ಹೇಳಿದರು. ಇನ್ನು ಅಂಕಿತಾ ಓದಿದ ಮೊರಾರ್ಜಿ ಶಾಲೆಗೆ ಸಿಎಂ ಸಿದ್ದರಾಮಯ್ಯ ಐವತ್ತು ಲಕ್ಷ ರೂಪಾಯಿ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

 

ಮೊರಾರ್ಜಿ ಶಾಲೆಯಲ್ಲಿ ಓದಿದ ಅಂಕಿತಾ ಮುಂದೆ ಯಾವ ಖಾಸಗಿ ಶಾಲೆಯಲ್ಲಿ ಓದಿದ ಮಕ್ಕಳು ನಿಲ್ಲುವುದಕ್ಕೆ ಆಗಲಿಲ್ಲ. ಈ ಮೂಲಕ ಶ್ರದ್ಧೆ, ಭಕ್ತಿ, ಓದುವ ಛಲವಿದ್ದರೆ ಮುಂದೆ ಬರಬಹುದು ಎಂಬುದನ್ನು ಅಂಕಿತಾ ತೋರಿಸಿಕೊಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *