ಬರ ಪರಿಹಾರ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ

suddionenews
2 Min Read

ಬೆಂಗಳೂರು: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಬರ ಪರಿಹಾರ ನೀಡದಿರುವುದಕ್ಕೆ ಇಂದು ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಕೂಡ ಭಾಗಿಯಾಗಿದ್ದಾರೆ.

ಈ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ.‌ ಮೋದಿ,ಅಮಿತ್ ಷಾ ಅವರು ಕರ್ನಾಟಕವನ್ನ ದ್ವೇಷ ಮಾಡ್ತಾರೆ. ಕರ್ನಾಟಕದ ರೈತರನ್ನ ದ್ವೇಷ ಮಾಡ್ತಾರೆ. ಬರ ಪರಿಹಾರ ಹಣ ಕೊಡಿ ಎಂದು ಕೇಳಿದ್ರೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿಯೇ ನಾವು ಇಂದು ಪ್ರತಿಭಟನೆ ಮಾಡಿದ್ದೇವೆ.

ಸೆಪ್ಟೆಂಬರ್ ೨೨ ರಂದು ಬರ ಪರಿಹಾರ ಹಣ ಬಗ್ಗೆ ಮನವಿ ಕೊಟ್ಟಿದ್ದೇವು. ಕೇಂದ್ರ ಬರ ಪರಿಹಾರ ತಂಡ ಬಂದು ಪರಿಶೀಲನೆ ಮಾಡಿ ವರದಿ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ೨೨೩ ತಾಲೂಕುಗಳಲ್ಲಿ ಭೀಕರವಾದ ಬರಗಾಲ ಇದೆ. ೧೦೦ ವರ್ಷದಲ್ಲಿ ಈ ರೀತಿಯ ಭೀಕರ ಬರಗಾಲ ಎದುರಿಸುತ್ತಿದ್ದೇವೆ. ಗ್ಯಾರಂಟಿ ಯೋಜನೆಗೆ ಅನುದಾನ ಕೇಳುತ್ತಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ರು. ನಾವು ಗ್ಯಾರಂಟಿ ಯೋಜನೆಗೆ ದುಡ್ಡು ಕೇಳ್ತಿಲ್ಲ. ರೈತರಿಗೆ ಮೊದಲ ಕಂತಿನಲ್ಲಿ ೨೦೦೦ ಸಾವಿರ ರೂಪಾಯಿ ಕೊಟ್ಟಿದ್ದೇವೆ. ಒಟ್ಟು ೬೫೦ ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಬರಗಾಲವನ್ನ ಸರ್ಮಪಕವಾಗಿ ಸ್ಪಂದಿಸಿದ್ದೇವೆ.

೧೮೧೭೨ ಕೋಟಿ ಬರ ಪರಿಹಾರ ಹಣ ಕೇಂದ್ರ ಸರ್ಕಾರಕ್ಕೆ ಕೇಳಿದ್ದೇವು. NDRF ರ ಅಡಿ ಹಣ ನಾವು ಕೇಳಿದ್ದೇವು.‌ಆದ್ರೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ.‌ಹೀಗಾಗಿಯೇ ನಾವು ಕೇಳ್ತಿದ್ದೇವೆ. ಮೋದಿ,ಅಮಿತ್ ಷಾ ಯಾವ ಮುಖ ಎತ್ಕೊಂಡು ರಾಜ್ಯಕ್ಕೆ ಬರ್ತಿದ್ದಾರೆ. ರಾಜ್ಯಕ್ಕೆ ಬರಲು ಮೋದಿ,ಅಮಿತಾ ಷಾ ನೈತಿಕತೆ ಇಲ್ಲ. ಭದ್ರಾ ಮೇಲ್ಡಂಡೆ ಯೋಜನೆಗೆ ಅನುದಾನ ಕೊಟ್ಟಿಲ್ಲ. ರಾಷ್ಟ್ರೀಯ ಯೋಜನೆ ಅಂತಲೂ ಘೋಷಣೆ ಮಾಡಿಲ್ಲ. ೧೫ ನೇ ಹಣಕಾಸು ಆಯೋಗ ಶಿಫಾರಸು ಮಾಡಿದ ವಿಶೇಣ ಹಣ ಕೂಡ ಕೊಟ್ಟಿಲ್ಲ. ಬರ ಪರಿಹಾರಕ್ಕೆ ಇದುವರೆಗೂ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಪ್ರವಾಹ ಬಂದಾಗ ಬರಲಿಲ್ಲ,ಭೀಕರ ವಾದ ಬರಗಾಲ ಬಂದಾಗ ಬರಲಿಲ್ಲ. ಚುನಾವಣೆ ಬಂದಾಗ ಮಾತ್ರ ಇವತು ಬರ್ತಿದ್ದಾರೆ. ಹೀಗಾಗಿಯೇ ನಾವು ಗೋ ಬ್ಯಾಕ್ ಅಮಿತ್ ಷಾ ಎಂದು ಹೇಳ್ತಿದ್ದೇವು

ಸುಪ್ರೀಂ ನಮಗೆ ಕರುಣೆ ತೋರಿಸಿದ್ದಾರೆ. ನಾವು ಸುಪ್ರೀಂ ಕೋರ್ಟ್ ಗೆ ಹೋಗದೇ ಇದ್ರೆ ಒಂದೇ ಒಂದು ರೂಪಾಯಿ ಕೊಡುತ್ತಿರಲಿಲ್ಲ. ಯಾವುದೇ ಹಣ ಕೊಡಬೇಕಾಗಿಲ್ಲ ಎಂದು ಬಿಜೆಪಿಯವರು ಹೇಳ್ತಿದ್ರು. ಈಗ ಸುಪ್ರೀಂ ಕೋರ್ಟ್ ಹೇಳಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *