ಗಿಲ್ಲಿ ನಟನನ್ನು ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ

1 Min Read

ಬೆಂಗಳೂರು: ಈ ಬಾರಿಯ ಬಿಗ್ ಬಾಸ್ ಸೀಸನ್ 12 ಶೋಗೆ ತೆರೆ ಬಿದ್ದಿದೆ.‌ ಮಂಡ್ಯದ ಹೈದ ಗಿಲ್ಲಿ ನಟ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ. ಇಡೀ ರಾಜ್ಯವೇ ಕೊಂಡಾಡುವ ಗಿಲ್ಲಿಯನ್ನ ಇದೀಗ ಸಿಎಂ ಸಿದ್ದರಾಮಯ್ಯ ಅವರು ಕೂಡ ಕೊಂಡಾಡಿದ್ದಾರೆ. ತಮ್ಮ ಸಿಎಂ ನಿವಾಸಕ್ಕೆ ಕರೆಸಿಕೊಂಡು ಸನ್ಮಾನ ಮಾಡಿದ್ದಾರೆ. ಗಂಧದ ಹಾರ ಹಾಕಿ ಸನ್ಮಾನಿಸಿದ್ದಲ್ಲದೆ, ಹೆಗಲ ಮೇಲೆ ಕೈ ಹಾಕಿ ಶುಭ ಕೋರಿದ್ದಾರೆ. ಶಬ್ಬಾಶ್ ಎಂದಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ನಗರಾಭಿವೃದ್ಧಿ ಖಾತೆ ಸಚಿವ ಭೈರತಿ ಬಸವರಾಜ್, ಸಿಎಂ ಮಾಧ್ಯಮ ಸಲಹೆಗಾರ ಪ್ರಭಾಕರ್ ಕೂಡ ಉಸ್ಥಿತರಿದ್ದರು. ಗಿಲ್ಲಿಗೆ ಈ ಬಾರಿ ಬಂದಂತ ವೋಟ್ ಗಳು ಕಡಿಮೆ ಏನು ಅಲ್ಲ. ಕೋಟ್ಯಾಂತರ ಜನ ತಮ್ಮ ಸಮಯ ನೀಡಿ ಗೆಲ್ಲಿಸಿದ್ದಾರೆ. ಕಪ್ ಎತ್ತಿಕೊಂಡ ಗಿಲ್ಲಿ ಮೊದಲು ತನ್ನೂರಿಗಡ ಹೋಗಿ, ಎಲ್ಲರನ್ನು ಭೇಟಿ ಮಾಡಿ, ಮೆರವಣಿಗೆ ಬಂದಿದ್ದಾರೆ. ಶಿವಣ್ಣ, ಗಿಲ್ಲಿಗೆ ಗುರುವಿದ್ದಂತೆ. ಹೀಗಾಗಿ ಶಿವಣ್ಣರ ಮನೆಗೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ. ಶಿವಣ್ಣ ಕೂಡ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಕೇಕ್ ಕಟ್ ಮಾಡಿಸಿ, ತಿನ್ನಿಸಿ ಕಳುಹಿಸಿದ್ದಾರೆ.

ಗೆದ್ದ ಖುಷಿಯಲ್ಲಿರುವ ಗಿಲ್ಲಿ ತನ್ನ ಜನತೆಗೆ ಪ್ರಾಮೀಸ್ ಮಾಡಿದ್ದಾರೆ. ನನ್ನನ್ನ ಇಷ್ಟು ದೂರ ಕರೆದುಕೊಂಡು ಬಂದಿದ್ದೀರಾ. ಮನಸ್ಸಿನಲ್ಲಿ ಜಾಗ ಕೊಟ್ಟು, ಕೈ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದೀರಾ. ನಿರಂತರವಾಗಿ ಬೆಂಬಲಿಸಿದ್ದೀರಾ. ಇದುವರೆಗೂ ರನ್ನರ್ ಅಪ್ ಆಗ್ತಿದ್ದ ಗಿಲ್ಲಿಗೆ ಅಭಿಮಾನಿಗಳು ಗೆಲುವಿನ ಕಿರೀಟ ತೊಡಿಸಿ, ಮೆರೆಸಿದ್ದೀರಾ. ಈ ಪ್ರೀತಿಗೆ ಏನೇ ಹೇಳಿದ್ರು, ಎಷ್ಟೇ ಹೇಳಿದ್ರು ಕಡಿಮೇನೆ ಎಂದಿದ್ದಾರೆ.

Share This Article