ಬೆಂಗಳೂರು: ಪ್ರಧಾನಿ ಮೋದಿಯವರು ಇತ್ತಿಚೆಗೆ ಕಾಂಗ್ರೆಸ್ ಮೇಲೆ ಆರೋಪವೊಂದನ್ನು ಮಾಡಿದ್ದರು. ಅಬಕಾರಿ ಇಲಾಖೆಯಿಂದ 700 ಕೋಟಿ ತಂದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಚುನಾವಣೆ ಮಾಡುತ್ತಿದೆ ಎಂದು. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಗರಂ ಆಗಿದ್ದು, ಪ್ರಧಾನಿ ಮೋದಿಯವರಿಗೆ ನಿವೃತ್ತಿಯ ಸವಾಲೆಸೆದಿದ್ದಾರೆ.
ಸುಳ್ಳುಗಾರ ಪ್ರಧಾನಿ ಮೋದಿಯವರು ನಮ್ಮ ಮೇಲೆ ಹಸಿ ಹಸಿ ಸುಳ್ಳು ಆರೋಪ ಮಾಡಿದ್ದಾರೆ. ಮೋದಿ ಅವರು ಹೇಳಿದ್ದು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಇಲ್ಲದೆ ಇದ್ದರೆ ನೀವೂ ನಿವೃತ್ತಿ ಘೋಷಿಸ್ತೀರಾ ಎಂದು ಸವಾಲು ಹಾಕಿದ್ದಾರೆ. ಮೋದಿಯವರು ಕುಟುಂಬ ರಾಜಕಾರಣದ ಬಗ್ಗೆ ಭಯಾನಕ ಭಾಷಣ ಮಾಡುತ್ತಾರೆ. ಆದರೆ ಇಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಅವರ ಮೊಮ್ಮಗ, ಬಸವರಾಜ್ ಬೊಮ್ಮಾಯಿ ಅವರ ಮಗನಿಗೆ ಟಿಕೆಟ್ ನೀಡಿಲ್ವಾ..? ಇದು ಕುಟುಂಬ ರಾಝಾರಣ ಅಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು ಕುಮಾರಸ್ವಾಮಿ ಕುಟುಂಬದಲ್ಲಿ, ದೇವೇಗೌಡರ ಮಕ್ಕಳು,ಮೊಮ್ಮಕ್ಕಳು, ಸೊಸೆಯಂದಿರಿಗೆ ಟಿಕೆಟ್ ನೀಡಿಲ್ವಾ..? ಇವರೆಲ್ಲ ಏನು ಮೋದಿಯವರೆ..? ಇವರೆಲ್ಲ ಕುಟುಂಬ ರಾಜಕಾರಣ ಮಾಡ್ತಿಲ್ವಾ..? ಭಾಷಣ ಮಾಡುವುದು ಸುಲಭ ಮೋದಿಯವರೇ. ಆದರೆ ನುಡಿದಂತೆ ನಡೆದುಕೊಳ್ಳುವುದು ನಿಮ್ಮಿಂದ ಆಗಲ್ಲ.
ಕೊರೋನಾ ಬಂದಾಗ ಇಡೀ ರಾಜ್ಯದ ಪರಿಸ್ಥಿತಿ ಹೇಗಿತ್ತು ಅನ್ನೋದು ನಿಮಗೂ ಗೊತ್ತು ನಮಗೂ ಗೊತ್ತು. ಇಂಥ ಸಂದರ್ಭದಲ್ಲಿ ಯಡಿಯೂರಪ್ಪ, ಶ್ರೀರಾಮುಲು, ಸುಧಾಕರ್ ಅವರು ಚೀನಾದ ಜೊತೆಗೆ ವ್ಯವಹಾರ ಮಾಡು, ಪಿಪಿಇ ಕಿಟ್ ನಲ್ಲಿ ಕಮಿಷನ್ ತಿಂದಿದ್ದು, ಲೂಟಿ ಒಡೆದಿರೋದು ವರದಿಯಾಗಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊಡದೆ 39 ಜನರ ಸಾವಿಗೆ ಕಾರಣರಾದ ಇವರಿಗೆಲ್ಲ ಕ್ಷಮೆ ಇದ್ಯಾ..? ಎಂದು ಪ್ರಶ್ನೆ ಮಾಡಿದ್ದಾರೆ.