ಬೆಂಗಳೂರು: ಜಿಎಸ್ಟಿ ಹಣದಲ್ಲಿ ಕೇಂದ್ರದಿಂದ ಆಗ್ತಾ ಇರುವ ಅನ್ಯಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಆಗಾಗ ಆಕ್ರೋಶ ಹೊರ ಹಾಕ್ತಾನೆ ಇರುತ್ತಾರೆ. ಇದೀಗ ತೇಜಸ್ವಿ ಸೂರ್ಯ ಅವರ ಬಗ್ಗೆ ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು, ಅಮಾವಾಸ್ಯೆ ಎಂದು ಕರೆದಿದ್ದಾರೆ.
ಇಂದು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವೈಟ್ ಟ್ಯಾಪಿಂಗ್ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಬಳಿಕ ಮಾತನಾಡಿ, ಒಂದು ದಿನ ಮಾತಾಡ್ಲಿಲ್ಲ. ಅವನ್ಯಾರೋ ಅವ್ನು ಸೌತ್ ನಲ್ಲಿ ಎಂಪಿ ಆದವನು. ಸೂರ್ಯ, ಅಮಾವಾಸ್ಯೆ ಅಂತ ಕರೀತೀನಿ ನಾನು ಅವನನ್ನ. ಇಲ್ಲಿ ಮಂತ್ರಿ ಆಗವ್ರಲ್ಲ ಶೋಭಾ ಕರಂದ್ಲಾಜೆ, ಒಂದು ದಿನ ಬಾಯ್ಬಿಡಲಿಲ್ಲ. ಕುಮಾರಸ್ವಾಮಿ ಮಂತ್ರಿ. ಒಂದು ದಜಿನ ಬಾಯ್ಬಿಡಲಿಲ್ಲ. ಕರ್ನಾಟಕಕ್ಕೆ ಕೊಡಬೇಕಾದ ಹಣವನ್ನ ಕೊಡ್ರಿ ಅಂತ. ಇವರಿಗೆಲ್ಲಾ ಏನು ಮಾಡೋಣಾ ಹೇಳಿ ಎಂದು ಪ್ರಶ್ನಿಸಿದ್ದಾರೆ.
ನಮ್ಮಿಂದ ವೋಟ್ ತಗೊಂಡು ಗೆದ್ದು ಹೋಗಿ, ನಮ್ಮ ರಾಜ್ಯದ ವಿಚಾರಕ್ಕೆ ಏನು ಮಾತಾಡ್ಲಿಲ್ಲ ಅಂದ್ರೆ ಕೋಪ ಬರುತ್ತಾ ಇಲ್ವಾ ಹೇಳಿ. ಕೋಪ ಬಂದಾಗ ಏನ್ ಮಾಡಬೇಕು ಹೇಳಿ. ಅವರನ್ನ ಸೋಲಿಸುವಂತ ಕೆಲಸ ಮಾಡ್ರಪ್ಪ ನಿಮ್ಗೆ ದಮ್ಮಯ್ಯ ಅಂತೀನಿ. ಕರ್ನಾಟಕಕ್ಕೆ ಅನ್ಯಾಯ ಮಾಡ್ತಾ ಇದ್ದಾರೆ, ಕರ್ನಾಟಕಕ್ಕೆ ದ್ರೋಹ ಮಾಡ್ತಾ ಇದ್ದಾರೆ. ಇದನ್ನ ನೀವೆಲ್ಲಾ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ದಿನೇಶ್ ಗುಂಡೂರಾವ್ ಅವರು, ಅವರ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ. ಕಾಮಗಾರಿ ಶುರು ಮಾಡಿದ್ದಾರೆ. ಇವತ್ತು 50 ಕೋಟಿ ಯೋಜನೆಗೆ ಗುದ್ದಲಿ ಪೂಜೆ ಮಾಡಿದ್ದೀವಿ ಎಂದಿದ್ದಾರೆ.




