HAL ಹೋಗಿದ್ದ ಡಿಕೆಶಿಯನ್ನ ತರಾಟೆ ತೆಗೆದುಕೊಂಡ ಸಿಎಂ..!

ಬೆಂಗಳೂರು; ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಡಿಜೆ ಶಿವಕುಮಾರ್ ಅವರನ್ನ ತರಾಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರು ಕ್ರಿಕೆಟ್ ಆಟಗಾರರನ್ನ ಹೆಚ್ಎಎಲ್ ಏರ್ಪೋರ್ಟ್ ಗೆ ಹೋಗಿ ಸ್ವಾಗತ ಕೋರಿದ್ದರು. ಈ ಕಾರಣಕ್ಕಾಗಿಯೇ ಸಿಎಂ ಸಿದ್ದರಾಮಯ್ಯ ಅವರು ಗರಂ ಆಗಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟ ಸಭೆಯಲ್ಲಿ ಕೋಪಗೊಂಡಿದ್ದು, ನೀವೂ ಯಾಕೆ ಹೆಚ್ಎಎಲ್ ಗೆ ಹೋಗಿದ್ರಿ. ನೀವೂ ಹೋಗಿದ್ದಕ್ಕೆ ಸರ್ಕಾರವೇ ಕಾರ್ಯಕ್ರಮವನ್ನ ಆಯೋಜನೆ ಮಾಡಿತ್ತು ಎಂದುಕೊಂಡಿದ್ದಾರೆ. ಅದಢ ರೀತಿ ಬಿಂಬಿಸ್ತಾ ಇದ್ದಾರೆ. ಅಲ್ಲಿಗೆ ನೀವೂ ಹೋಗಬೇಕಾದ ಪ್ರೋಟೋಕಾಲ್ ಏನಾದ್ರೂ ಇತ್ತಾ..? ನೀವ್ಯಾಕೆ ಅಲ್ಲಿಗೆ ಹೋಗಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ.

ಆರ್ಸಿಬಿ ಸುಮಾರು 18 ವರ್ಷಗಳಿಂದ ಕಪ್ ಗೆದ್ದಿರಲಿಲ್ಲ. ಪ್ರತಿವರ್ಷ ಕೂಡ ಕಪ್ ನಮ್ದೆ ಅನ್ನೋ ನಿರೀಕ್ಷೆಯನ್ನ ಅಭಿಮಾನಿಗಳು ಇಟ್ಟುಕೊಳ್ಳುತ್ತಿದ್ದರು. ಆದರೆ ಕಪ್ ಮಿಸ್ ಆಗುತ್ತಲೇ ಇತ್ತು. ಈ ವರ್ಷ ಕೆಲವು ಅಡೆತಡೆಗಳು ಬಂದ್ರು ಕೂಡ ಕಪ್ ಗೆಲ್ಲುವ ಎಲ್ಲಾ ಮುನ್ಸೂಚನೆಯೂ ಸಿಕ್ಕಿತ್ತು. ಅದರಂತೆ ಕಪ್ ಕೂಡ ನಮ್ಮ ಆರ್ಸಿಬಿ ಗೆದ್ದಿತ್ತು. ಆದರೆ ಆ ಖುಷಿಯ ನಡುವೆ ನೀರವ ಮೌನವೂ ಕೂಡ ಆವರಿಸುವಂತೆ ಆಗುವಂತೆಯೂ ಆಗಿದೆ. ಆರ್ಸಿಬಿ ಟೀಂ ಅನ್ನು ಬೆಂಗಳೂರಿಗೆ ಬರ್ತಾ ಇದ್ದಾರೆ ಎಂದು ಗೊತ್ತಾದ ಕೂಡಲೇ ಜನಸಾಗರವೇ ಸೇರಿತ್ತು. ಇದರಿಂದಾಗಿಯೇ ಕಾಲ್ತುಳಿತ ಉಂಟಾಗಿ ಹನ್ನೊಂದು ಜನ ಸಾವನ್ನಪ್ಪಿದ್ದಾರೆ. ಈಗಾಗಲೇ ಆ ಸಾವುಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರ ತಲೆದಂಡ ಕೂಡ ಆಗಿದೆ. ಇನ್ನು ತನಿಖೆ ನಡೆಯುತ್ತಲೆ ಇದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks