ಪಿಎಸ್ಐ ಅಕ್ರಮದ ತನಿಕೆ ಎಲ್ಲಿಗೆ ಬಂತು..? ಸಿಎಂ ಏನಂದ್ರು..?

1 Min Read

 

ಬೆಂಗಳೂರು: ಚಂಡಿಗಡ ಜಿಎಸ್ಟಿ ಮಂಡಳಿ ಸಭೆ ವಿಚಾರವಾಗಿ ಆರ್.ಟಿ‌.ನಗರದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ‌, ಸಭೆಯಲ್ಲಿ ಹಲವು ವಿಚಾರಗಳ ಚರ್ಚೆ ಮಾಡಲಾಗಿದೆ. ಕಾನೂನಿನ ತೊಡಕುಗಳನ್ನು ನಿವಾರಣೆ ಮಾಡಲು ಬಹುತೇಕ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯಗಳಿಗೆ ಜಿಎಸ್ಟಿ ಪರಿಹಾರದ ಅವಧಿ ವಿಸ್ತರಣೆ ಬಗ್ಗೆ ಚರ್ಚೆ ಆಗಿದೆ. ಆಗಸ್ಟ್ ತಿಂಗಳಲ್ಲಿ ಇದರ ಬಗ್ಗೆ ತಿಳಿಸೋದಾಗಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದಿದ್ದಾರೆ.

ಪಿಎಸ್‌ಐ ಅಕ್ರಮ ನೇಮಕ ವಿಚಾರದಲ್ಲಿ ಮರುಪರೀಕ್ಷೆ ನಡೆಸದಂತೆ ಬಿ ಟಿ ಲಲಿತಾನಾಯಕ್ ಮನವಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಈಗಾಗಲೇ ಆ ವಿಷಯವನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದಾಗಲೇ ನಾನು ಹೇಳಿದ್ದೇನೆ. ತನಿಖೆ ಮುಗಿಯಲಿ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.

ಉದಯಪುರದಲ್ಲಿ ಆಗಿರುವುದು ಅಮಾನವೀಯ ಮತ್ತು ಹೇಯ ಕೃತ್ಯ. ಭಯೋತ್ಮಾದಕತೆ ಕೃತ್ಯ ಇದು. ಅಪರಾಧಿಗಳನ್ನು ಗಲ್ಲಿಗೇರಿಸಬೇಕು. ಅಪರಾಧಿಗಳ ಹಿಂದೆ ಯಾರೆಲ್ಲ ಇದ್ದಾರೆ, ಯಾವ ಸಂಘಟನೆ ಇದೆ ಅಂತ ಬಯಲಿಗೆ ಬರಬೇಕು ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಆಂತರಿಕ ಸಮೀಕ್ಷೆಯಲ್ಲಿ ಬಹುಮತ ಬಂದಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಕಾಂಗ್ರೆಸ್ ಸಮೀಕ್ಷೆಗೆ ಸಿಎಂ ಲೇವಡಿ ಮಾಡಿದ್ದಾರೆ. ಅದು ಕಾಂಗ್ರೆಸ್ ನವರ ಆಂತರೀಕ ಸಮೀಕ್ಷೆ. ಅವರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಬರುತ್ತೆ ಅಂತನೇ ಹೇಳಬೇಕು. ಇನ್ನೇನು ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ಹೇಳ್ತಾರಾ ಅವರು? ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯ ಗುತ್ತಿಗೆದಾರರ ಸಂಘಕ್ಕೆ ಕೇಂದ್ರ ಗೃಹ ಇಲಾಖೆಯಿಂದ ದಾಖಲೆ ಕೇಳಿದ ವಿಚಾರಕ್ಕೆ, ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಮಗೆ ಯಾವ ಸೂಚನೆಯೂ ಬಂದಿಲ್ಲ. ಅವರ ಸಂಘಕ್ಕೆ ಸೂಚನೆ ಬಂದಿದ್ರೆ ದಾಖಲೆ ಕೊಡಲಿ. ಪ್ರಧಾನಿಗಳ ನಿರ್ದೇಶನ ಮೇರೆಗೆ ತನಿಖೆ ಮಾಡ್ತೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *