ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಗ್ಯಾರಂಟಿ ಯೋಜನೆಗಳ ನಡುವೆ ಇನ್ನು ಏನೆಲ್ಲಾ ಕೊಡಬಹುದು ಎಂಬ ನಿರೀಕ್ಷೆಗಳು ಜನ ಸಾಮಾನ್ಯರಿಗೆ ಇದೆ. ಮಾರ್ಚ್ 7ರಂದು ಸಿಎಂ ಸಿದ್ದರಾಮಯ್ಯ ಅವರು 16ನೇ ಬಾರಿಗೆ ಬಜೆಟ್ ಮಂಡನೆ ಮಾಡಲಿದ್ದಾರೆ. ಈಗಾಗಲೇ 15 ಬಾರಿ ಮಂಡಿಸಿದ್ದಾರೆ. ಬಜೆಟ್ ಇರುವ ಸಂಬಂಧ ಈಗಾಗಲೇ ಎಲ್ಲಾ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಮಂಡಿನೋವಿನ ಸಮಸ್ಯೆ ಇದೆ. ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಆದರೂ ಅದನ್ನ್ಯಾವುದನ್ನು ತಲೆಗೆ ಹಾಕಿಕೊಳ್ಳದೆ ಕೆಲಸ ಮಾಡುತ್ತಲೇ ಇದ್ದಾರೆ. ಮಂಡಿನೋವಿನ ನಡುವೆಯೇ ಸಭೆಗಳನ್ನ ನಡೆಸುತ್ತಿದ್ದಾರೆ. 15 ಬಜೆಟ್ ನಲ್ಲೂ ಸಿದ್ದರಾಮಯ್ಯ ಅವರು ನಿಂತುಕೊಂಡೆ ಬಜೆಟ್ ಮಂಡನೆ ಮಾಡಿದ್ದರು. ಗಂಟೆಗಟ್ಟಲೇ ನಿಂತು ಮಂಡಿಸಿದ್ದಾರೆ. ಆದರೆ ಈ ಬಾರಿ ಅದು ಎಷ್ಟರ ಮಟ್ಟಿಗೆ ಸಾಧ್ಯವಾಗುತ್ತೆ ಎಂಬುದು ಮಾತ್ರ ಗೊತ್ತಿಲ್ಲ.

ಮಂಡಿ ನೋವು ಈ ಮೊದಲೇ ಇತ್ತು. ಅದರ ಮೇಲೆಯೇ ಹೆಚ್ಚಿನ ಒತ್ತಡ ಬಿಟ್ಟಿದ್ದಕ್ಕೆ ಮಂಡಿನೋವು ಜಾಸ್ತಿ ಆಯ್ತು ಎಂದು ವೈದ್ಯರು ತಿಳಿಸಿದ್ದರು. ಈಗ ಗಂಟೆ ಗಟ್ಟಲೇ ಮಂಡಿ ಮೇಲೆ ಭಾರ ಬಿಟ್ಟು ನಿಲ್ಲುವುದು ಅಷ್ಟು ಸುಲಭವಲ್ಲ. ಈ ಬಾರಿ ಕುಳಿತುಕೊಂಡೆ ಬಜೆಟ್ ಮಂಡಿಸುತ್ತಾರಾ ನೋಡಬೇಕಿದೆ. ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ 2013-24ರಲ್ಲಿ 10,859 ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. 15 ಬಾರಿ ಬಜೆಟ್ ಮಂಡಿಸಿದ ಹೆಗ್ಗಳಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಪಾತ್ರರಾಗಿದ್ದಾರೆ. ಈ ಬಾರಿಯ ಬಜೆಟ್ ಎಷ್ಟು ಗಾತ್ರದ್ದಾಗಿರುತ್ತೆ ಎಂಬ ಕುತೂಹಲವಿದೆ.


