Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ರಾಜ್ಯದಲ್ಲಿ ಸಿಎಂ ಹುದ್ದೆ ಚರ್ಚೆ : ಸುರ್ಜೆವಾಲಾಗೆ ಸಿಎಂ ವಿರುದ್ಧ ಡಿಕೆಶಿ ದೂರು..!

---Advertisement---

ಪವರ್ ಶೇರಿಂಗ್ ವಿಚಾರದಲ್ಲಿ ರಾಜ್ಯದಲ್ಲಿ ಮತ್ತೆ ಮುಸುಕಿನ ಗುದ್ದಾಟ ನಡೆಯುತ್ತಾ ಇದೆ. ಡಿಸಿಎಂ ಡಿಕೆ ಶಿವಕುಮಾರ್ ಸಹಜವಾಗಿಯೇ ಬೇಸರಗೊಂಡಿದ್ದಾರೆ. ಯಾಕಂದ್ರೆ ಪಕ್ಷಕ್ಕಾಗಿ ಸಾಕಷ್ಟು ಶ್ರಮ ಪಟ್ಟಿರುವ ಡಿಕೆಶಿ, ಸಿಎಂ ಸ್ಥಾನದ ಆಕಾಂಕ್ಷಿಯೂ ಹೌದು. ಇದರ ನಡುವೆ ಸಿದ್ದರಾಮಯ್ಯ ಅವರು ನಾನೇ ಪೂರ್ಣಾವಧಿಯ ಸಿಎಂ ಎಂಬ ಹೇಳಿಕೆಯನ್ನ ಕೊಡ್ತಾ ಇದ್ದಾರೆ. ಹೀಗಾಗಿ ಇಂದು ಸುರ್ಜೆವಾಲ ಅವರ ಬಳಿ ಒಂದಷ್ಟು ದೂರು ನೀಡಿದ್ದಾರೆ ಎನ್ನಲಾಗಿದೆ.

ಸುರ್ಜೇವಾಲ ಅವರ ಬಳಿ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಸಿಎಂ ವಿಚಾರ ಪ್ರಸ್ತಾಪ ಮಾಡಿದವರಿಗೆ ನಾನು ನೋಟೀಸ್ ನೀಡಿದ್ದೇನೆ. ಡಾ.ರಂಗನಾಥ್, ಮಾಜಿ ಸಂಸದ ಶಿವರಾಮೇಗೌಡ ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಇಬ್ಬರೂ ನನ್ನ ಸಂಬಂಧಿಕರಾದರೂ ನೋಟೀಸ್ ನೀಡಿದ್ದೇನೆ. ಸಿದ್ದರಾಮಯ್ಯ ಅವರು ಈ ವಿಚಾರದಲ್ಲಿ ಸೂಚನೆಯನ್ನು ಕೊಡಬೇಕು. ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ನಾನು ಕೂಡ ಬಹಳಷ್ಟು ಶ್ರಮ ಹಾಕಿದ್ದೇನೆ. ತನು ಮನ ಧನ ಅರ್ಪಿಸಿ ಪಕ್ಷವನ್ನು ಸಂಘಟನೆ ಮಾಡಿದ್ದೇನೆ. ನನ್ನ ಶ್ರಮಕ್ಕೂ ಪ್ರತಿಫಲ ಸಿಗಬೇಕು ಅಲ್ವಾ ಸರ್..?

ಪವರ್ ಶೇರಿಂಗ್ ಇಲ್ಲ ಅಂದರೆ ಸ್ಪಷ್ಟವಾಗಿ ಹೇಳಿಬಿಡಿ. ಹೈಕಮಾಂಡ್ ಮಟ್ಟದಲ್ಲಿ ನನಗೆ ಒಂದು ಸ್ಪಷ್ಟನೆಯನ್ನು ಕೊಡಿಸಿ ಎಂದು ಮನವಿ ಮಾಡಿದ್ದಾರೆ. ಎರಡೂವರೆ ವರ್ಷ ಆದ್ಮೇಲೆ ಅಧಿಕಾರ ಬದಲಾವಣೆಯಾಗುತ್ತದೆ ಎಂಬ ಚರ್ಚೆಗಳು ಇದ್ದವು. ಸಿಎಂ ಸಿದ್ದರಾಮಯ್ಯ ಅವರು ಬಹಿರಂಗವಾಗಿ ನಾನೇ ಸಿಎಂ ಎಂಬ ಹೇಳಿಕೆಗಳನ್ನ ನೀಡದಂತೆ ಸೂಚನೆ ಕೊಡಲು ಮನವಿ ಮಾಡಿದ್ದಾರೆ. ಸಿಎಂ ಹೇಳಿದ ಮಾತೇ ಫೈನಲ್ ಅಂತ ಡಿಕೆ ಶಿವಕುಮಾರ್ ಹೇಳಿದರು ಸಹ, ತಾನೂ ಪಕ್ಷ ಅಧಿಕಾರಕ್ಕೆ ತರುವುದಕ್ಕೆ ಶ್ರಮ ಹಾಕಿದ್ದೀನಿ. ನನಗೂ ಸಿಎಂ ಸ್ಥಾನ ಸಿಗಬೇಕು ಎಂಬ ಆಸೆ ಸಹಜವಾಗಿಯೇ ಇರುತ್ತದೆ.

Join WhatsApp

Join Now

Join Telegram

Join Now