ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರ ಭದ್ರತೆಗಿದ್ದ ಪೊಲೀಸರೇ ಗಾಂಜಾ ಮಾರಾಟ ಮಾಡ್ತಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕೇಸ್ ತನಿಖೆ ಮಾಡುವಲ್ಲಿ ವಿಫಲರಾಗಿದ್ದು, ಅವರನ್ನ ಅಮಾನತು ಮಾಡಲಾಗಿದೆ.
ಆರ್ ಟಿ ನಗರ ಇನ್ಸ್‌ಪೆಕ್ಟರ್ ಅಶ್ವಥ್ ಗೌಡ ಮತ್ತು ಪಿಎಸ್ಐ ವೀರಭದ್ರ ಅವರನ್ನ ಅಮಾನತು ಮಾಡಲಾಗಿದೆ. ಕಾನ್ಸ್‌ಟೇಬಲ್ ಗಳು ಗಾಂಜಾಮಾರಾಟದಲ್ಲಿ ಭಾಗಿಯಾಗಿದ್ದವರ ತನಿಖೆ ನಡೆಸಲು ಇವರ ನೇತೃತ್ವದಲ್ಲಿ ನಡೆಸಲಾಗುತ್ತಿತ್ತು. ಆದ್ರೆ ಆ ಕೇಸ್ ನಲ್ಲಿ ವಿಫಲವಾದ ಹಿನ್ನೆಲೆ ಅಮಾನತು ಮಾಡಿ ಪೊಲೀಸ್ ಆಯುಕ್ತ ಕಮಲ್ ಪಂಥ್ ಆದೇಶ ಹೊರಡಿಸಿದ್ದಾರೆ.
ಗಾಂಜಾ ಮಾರಾಟ ಮಾಡಿದ ಇಬ್ಬರು ಆರೋಪಿಗಳು ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಬೇಲ್ ಪಡೆದು ಹೊರಗೆ ಬಂದಿದ್ದಾರೆ. ಇದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಕೇಸ್ ಚುರುಕು ಪಡೆದುಕೊಂಡಿದೆ.