ಸಿಎಂ ದೆಹಲಿಗೆ.. ಡಿಸಿಎಂಗಿಲ್ಲ ಆಹ್ವಾನ : ಡಿಕೆಶಿ ಹೇಳಿದ್ದೇನು..?

1 Min Read

ಬೆಂಗಳೂರು : ಸಿಎಂ ಕುರ್ಚಿ ಮೇಲೆ ಕೂರುವ ಮುಸುಕಿನ ಗುದ್ದಾಟ ಕಾಂಗ್ರೆಸ್ ನಲ್ಲಿ ನಡೆಯುತ್ತಲೇ ಇದೆ. ನಾ ಕೊಡೆ ನಾ ಬಿಡೆ ಎಂಬಂತೆ ಆಗಿದೆ. ಈಚೆಗಷ್ಟೇ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿದ್ದರು. ಆದರೆ ರಾಹುಲ್ ಗಾಂಧಿ ಭೇಟಿಗೆ ಅವಕಾಶವಿರಲಿಲ್ಲ. ಇಂದು ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಿದ್ದಾರೆ. ಅವರಿಗೆ ಅವಕಾಶ ಸಿಕ್ಕರು ಸಿಗಬಹುದು. ಆದರೆ ಡಿಸಿಎಂಗೆ ದೆಹಲಿಗೆ ಆಹ್ವಾನ ನೀಡಿಲ್ಲ. ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಾನು ಕರೆದರೆ ಹೋಗ್ತೀನಿ. ಇಲ್ಲಿಯವರೆಗೆ ನನ್ನಂತು ಕರೆದಿಲ್ಲ. ಬರೀ ಸಿಎಂಗೆ ಕರೆದಿದ್ದಾರೆ ಅನ್ನೋ ಮಾಹಿತಿ ಇದೆ. ಡೆಪ್ಯೂಟಿ ಸಿಎಂನ ಕರೆದಿಲ್ಲ. ಕೆಪಿಸಿಸಿ ಸಂಬಂಧಿಸಿದ ಸಭೆಗೆ ಕರೀತಾರೆ. ಕರೆದರೆ ಹೋಗಬೇಕಾಗುತ್ತದೆ. ಪಾರ್ಟಿ ಅವರು ಕರೆದರೆ ಹೋಗದೆ ಇರುವುದಕ್ಕೆ ಆಗುತ್ತಾ ಎಂದಿದ್ದಾರೆ.

 

ಇದೇ ವೇಳೆ ನಾಯಕತ್ವದ ವಿಚಾರದ ಬಗ್ಗೆ ಮಾತನಾಡಿ, ನಾನು ಯಾವ ವಿಚಾರವನ್ನು ಚರ್ಚೆ ಮಾಡಿಲ್ಲ. ಮಾಡುವಂತಹ ಅವಶ್ಯಕತೆಯೂ ಇಲ್ಲ, ಮಾಡುವುದು ಇಲ್ಲ. ನಾನು ಸಿದ್ದರಾಮಯ್ಯ ಅವರು ಈಗಾಗಲೇ ಹೇಳಿದ್ದೇವೆ. ಹೈಕಮಾಂಡ್ ಏನು ಹೇಳುತ್ತೋ ಅದನ್ನ ಕೇಳಿಕೊಂಡು, ಕೆಲಸ ಮಾಡಿಕೊಂಡು ಹೋಗುತ್ತೇವೆ ಎಂದಿದ್ದೇವೆ. ಕಾರ್ಯಕರ್ತ ಅಂದ್ರೆ ಜೀವನ ಪೂರ್ತಿ ವರ್ಕರ್. ಯಾವ ಪೋಸ್ಟಿಂಗ್ ಅಂತ ಇಲ್ಲ. ಪಕ್ಷದ ಅಧ್ಯಕ್ಷನಾಗಿಯೂ ಬಾವುಟ ಕಟ್ಟಿದ್ದೀನಜ, ಕಾರ್ಯಕರ್ತನಾಗಿಯೂ ಪೋಸ್ಟರ್ ಅಂಟಿಸಿದ್ದೀನಿ. ಕಸ ಗುಡಿಸಿದ್ದೀನಿ. ಕಾಂಗ್ರೆಸ್ ಪಕ್ಷಕ್ಕೆ ಏನೆಲ್ಲಾ ಬೇಕೋ ಅದೆಲ್ಲವನ್ನು ಮಾಡಿದ್ದೀನಿ. ಸುಮ್ಮನೆ ನಾನು ಬರೀ ವೇದಿಕೆ ಮೇಲೆ ಕೂತು ಭಾಷಣ ಮಾಡಿಕೊಂಡು ಹೋಗುವ ಕೆಲಸ ಮಾಡಿಲ್ಲ ಎಂದಿದ್ದಾರೆ.

Share This Article