ಪ್ರತಿದಿನ 1 ಲಕ್ಷ ಕೊರೊನಾ ಟೆಸ್ಟ್ ಗೆ ಸಿಎಂ ಸೂಚನೆ..!

1 Min Read

ಬೆಂಗಳೂರು: ಕೊರೊನಾ ವೈರಸ್ ಕಡಿಮೆಯಾಗಿದ್ದ ಕಾರಣ ಟೆಸ್ಟಿಂಗ್ ಪ್ರಮಾಣವನ್ನ ಕಡಿಮೆ‌ಮಾಡಲಾಗಿತ್ತು. ಇದೀಗ ಕೊರೊನಾ ವೈರಸ್ ಜೊತೆಗೆ ಒಮಿಕ್ರಾನ್ ವೈರಸ್ ನ ಹಾವಳಿ ಕೂಡ ಹೆಚ್ಚಾಗಿದೆ. ಅದರಲ್ಲೂ ಒಮಿಕ್ರಾನ್ ಅತಿ ವೇಗವಾಗಿ ಹರಡುತ್ತಿರುವ ಕಾರಣ ಟೆಸ್ಟಿಂಗ್ ಜಾಸ್ತಿ ಮಾಡಲು ಸರ್ಕಾರ ಆದೇಶಿಸಿದೆ.

ಬೆಂಗಳೂರಿನಲ್ಲೂ ಬಿಬಿಎಂಪಿ ಸಾಕಷ್ಟು ನಿಗಾ ವಹಿಸಿದ್ದು, ಎಲ್ಲೆಲ್ಲಾ ಟೆಸ್ಟ್ ಮಾಡಬಹುದು ಎಂಬುದನ್ನ ಸೂಚನೆ ನೀಡಿದೆ. ಸರ್ಜಾರ ಸೂಚನೆ ನೀಡಿರುವ ಪ್ರಕಾರ,

* ಅಡುಗೆ, ಡೋರ್ ಡೆಲಿವರಿ ಮಾಡುವವರು

* ಕಾರ್ಖಾನೆ, ಕಚೇರಿ ಕೆಲಸಕ್ಕೆ ಹೋಗುವವರು

* ಪಬ್ ಮತ್ತು ಬಾರ್ ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ

* ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಸಿಬ್ಬಂದಿ

* ಕಾಲೇಜು, ಪ್ರೌಢಶಾಲೆ ವಿದ್ಯಾರ್ಥಿಗಳು, ಶಿಕ್ಷಕರಿಗೆ ಟೆಸ್ಟ್

* ಮಾಲ್, ಮಾರ್ಕೇಟ್ ಕೀಪರ್ ಗಳಿಗೆ ಟೆಸ್ಟ್ ಮಾಡಲು ಸೂಚನೆ ನೀಡಲಾಗಿದೆ.

ಆರ್ಟಿಪಿಸಿಆರ್, ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತಿದೆ. ಈಗಾಗಲೆ ಮಾಲ್ ಗಳಲ್ಲಿ ಕೊರೊನಾ ಟೆಸ್ಟ್ ಮಾಡಿ ಮಾಲ್ ಒಳಗೆ ಹೋಗಲು ಅನುಮತಿ ನೀಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *